*ಗೋಣಿಕೊಪ್ಪ, ಫೆ. ೩: ಕೈಕೇರಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಕೊಡಗು ಕೆಂಬಟ್ಟಿ ಜನಾಂಗದ ಕ್ರಿಕೆಟ್ ಪಂದ್ಯಾಟಕ್ಕೆ ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಗಿದೆ.
ಜಿಲ್ಲೆಯ ೨೮ ತಂಡಗಳು ಭಾಗವಹಿಸಿದ್ದು, ೬ ದಿನಗಳ ಕಾಲ ನಡೆಯುವ ಕ್ರಿಕೆಟ್ ಪಂದ್ಯಾಟವನ್ನು ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರಿಪೂವಣ್ಣ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜನಾಂಗದ ಅಭಿವೃದ್ಧಿಗೆ ಜನಾಂಗದಲ್ಲಿನ ಒಗ್ಗಟ್ಟು ಬಹುಮುಖ್ಯ. ಈ ನಿಟ್ಟಿನಲ್ಲಿ ಕ್ರೀಡಾಚಟುವಟಿಕೆಗಳನ್ನು ಆಯೋಜಿಸಿದಾಗ ಜನಾಂಗದವರು ಒಂದೆಡೆ ಸೇರುವ ಅವಕಾಶ ಸಿಗಲಿದೆ. ಪ್ರತಿಯೊಬ್ಬರು ತಮ್ಮ ಜನಾಂಗದ ಸಂಸ್ಕöÈತಿ, ಆಚಾರ, ವಿಚಾರಗಳ ಬಗ್ಗೆ ಇತರ ಸಮುದಾಯಗಳಿಗೆ ತಿಳಿಯಪಡಿಸುವ ಕಾರ್ಯಕ್ಕೆ ಮುಂದಾಗಬೇಕು. ಜನಾಂಗದ ಸಂಸ್ಕöÈತಿ ಉಳಿದಾಗ ಮಾತ್ರ ಸಮುದಾಯವೊಂದು ಸಮಾಜದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಡಗು ಕೆಂಬಟ್ಟಿ ಸಮಾಜದ ಪ್ರಧಾನ ಕಾರ್ಯದರ್ಶಿ ಹಾಗೂ ಭಾಷಿಕ ಸಮುದಾಯ ಒಕ್ಕೂಟದ ಕಾರ್ಯದರ್ಶಿ ಮುಳ್ಳಕುಟ್ಟಡ ದಿನು ಬೋಜಪ್ಪ, ಕೈಕೇರಿ ಸ್ಪೋರ್ಟ್ಸ್ ಕ್ಲಬ್ ಪ್ರಮುಖ ಹೇಮಂತ್, ಉಪಾಧ್ಯಕ್ಷ ಪೂವಣ್ಣ, ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಶಾರದ ಗಣೇಶ್, ನಿವೃತ್ತ ಶಿಕ್ಷಕಿ ಹೆಚ್.ಆರ್. ಸುಬ್ಬಕ್ಕಿ, ಎಂ.ಡಿ.ಎA.ಸಿ. ಸದಸ್ಯ ಕೊಕ್ಕಂಡ ಗಣಪತಿ ಭಾಗವಹಿಸಿದ್ದರು.