*ಗೋಣಿಕೊಪ್ಪ, ಫೆ. ೧: ಒಟ್ಟು ರೂ. ೧ ಕೋಟಿ ೩೪ ಲಕ್ಷ ಅನುದಾನದಲ್ಲಿ ಟಿ. ಶೆಟ್ಟಿಗೇರಿ ಗ್ರಾ.ಪಂ. ಕಚೇರಿಯ ಮೇಲಂತಸ್ತಿನ ಕಟ್ಟಡ ಹಾಗೂ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಚಾಲನೆ ನೀಡಿದರು.
ಕಟ್ಟಡ ಕಾಮಗಾರಿ ಪ್ರಾರಂಭಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ. ಅನುದಾನದಲ್ಲಿ ರೂ. ೫ ಲಕ್ಷ ವೆಚ್ಚದಲ್ಲಿ ಹರಿಹರ ಬೊಳ್ಳಜೀರ, ಮನ್ನೇರ ಕುಟುಂಬಸ್ಥರ ರಸ್ತೆ, ರೂ. ೫ ಲಕ್ಷದಲ್ಲಿ ದೇಕಮಾಡ, ಮಚ್ಚಮಾಡ ಕುಟುಂಬಸ್ಥರ ರಸ್ತೆ, ರೂ. ೫ ಲಕ್ಷದಲ್ಲಿ ಕಟ್ಟೇರ ಕುಟುಂಬಸ್ಥರ ರಸ್ತೆ, ರೂ. ೪ ಲಕ್ಷ ತಾವಳಗೇರಿ ಗ್ರಾಮದ ಕೊಪ್ಪ ರಸ್ತೆ, ರೂ. ೫ ಲಕ್ಷ ಕೊಡವ ಸಮಾಜ ಮುಖ್ಯ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಹೇಳಿದರು.
ವಿಶೇಷ ಪ್ಯಾಕೇಜ್ನಡಿ ರೂ. ೧೫ ಕೋಟಿ ವೆಚ್ಚದ ರೂ. ೫ ಲಕ್ಷದಲ್ಲಿ ಕೊಟ್ರಮಾಡ ಕುಟುಂಬಸ್ಥರ ರಸ್ತೆ, ರೂ. ೫ ಲಕ್ಷ ಮಚ್ಚಮಾಡ ಅಬ್ಬಿಗೆರೆ ಕುಟುಂಬಸ್ಥರ ರಸ್ತೆ, ರೂ. ೫ ಲಕ್ಷ ಉಳುವಂಗಡ ಕುಟುಂಬಸ್ಥರ ರಸ್ತೆ, ರೂ. ೫ ಲಕ್ಷ ತಾವಳಗೇರಿ ಮಚ್ಚಮಾಡ ಮಹಿದಂಡ ಕುಟುಂಬಸ್ಥರ ರಸ್ತೆ, ರೂ. ೫ ಲಕ್ಷ ಹರಿಹರ ಗ್ರಾಮದ ಕಣಿಯಗುಂಡಿಗೆ ಹೋಗುವ ರಸ್ತೆ, ರೂ. ೫ ಲಕ್ಷ ಹರಿಹರ ಗ್ರಾಮದ ಬೆಟ್ಟಚಿಕ್ಕಿ ದೇವಸ್ಥಾನ ರಸ್ತೆ, ರೂ. ೫ ಲಕ್ಷ ಗುಟ್ಟುಕೊಲ್ಲಿ ಪೂಕಳತೊಡು ಲಿಂಕ್ ರಸ್ತೆ ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದರು.
ಮಳೆ ದುರಸ್ತಿ ಪ್ಯಾಕೇಜ್ ನಡಿ ವಿವಿಧ ಹತ್ತಾರು ಕಾಮಗಾರಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಅನಿರ್ಬಂಧಿತ ಅನುದಾನ, ಸಿ.ಎಂ. ಜಿ.ಎಸ್.ವೈ ಅನುದಾನ, ಅಮೃತಶಾಲೆ ಯೋಜನೆಯಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ಜಿ.ಪಂ. ಇಂಜಿನಿಯರ್ ಮಹಾದೇವ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ, ಪಂಚಾಯಿತಿ ಅಧ್ಯಕ್ಷ ಕೆ.ಯು. ದಾಸಮಣಿ, ಉಪಾಧ್ಯಕ್ಷ ರಾಮು, ಸದಸ್ಯರುಗಳಾದ ಪ್ರಭು, ದೇವಿ, ರಂಜಿ, ಚೊಟ್ಟೆಯಂಡಮಾಡ ಕೃಷ್ಣ, ಸರಿತಾ, ಪಟ್ಟು, ಬೋಜ, ಅಜಿತ್, ವನಿತಾ, ಮಚ್ಚಮಾಡ ಹೇಮಾವತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಆರ್.ಎಂ.ಸಿ ಉಪಾಧ್ಯಕ್ಷೆ ಬೊಳ್ಳಜೀರ ಸುಶೀಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ ಸೇರಿದಂತೆ ಪ್ರಮುಖರು ಹಾಜರಿದ್ದರು.