ಗೋಣಿಕೊಪ್ಪಲು, ಫೆ. ೧: ಭಾರತ ಸರಕಾರ, ನೆಹರೂ ಯುವ ಕೇಂದ್ರ ಕೊಡಗು, ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ವೀರಾಜಪೇಟೆ, ಇಂಡಿಯನ್ ಯುವಕ ಸಂಘ ಸೀಗೆತೋಡು ಗೋಣಿಕೊಪ್ಪ, ಗ್ಲೋಬಲ್ ರಿಕ್ರಿಯೇಷನ್ ಕ್ಲಬ್ ಮತ್ತು ಯುವಕ ಸಂಘ ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ೧೫೯ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಮಟ್ಟದ ರಾಷ್ಟಿçÃಯ ಯುವದಿನ ಹಾಗೂ ಯುವ ಸಪ್ತಾಹ ಸಮಾರೋಪ ಸಮಾರಂಭ ಜರುಗಿತು.

ಗೋಣಿಕೊಪ್ಪ ಹರಿಶ್ಚಂದ್ರಪುರದ ಮಹಿಳಾ ಸಮಾಜ ಸಭಾಂಗಣದಲ್ಲಿ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ದರು. ನಂತರ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರ ಆದರ್ಶ ಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಂಡಲ್ಲಿ ಎಲ್ಲಾ ಸಮಸ್ಯೆಗಳಿಂದ ಹಾಗೂ ವೈಯಕ್ತಿಕ ನ್ಯೂನತೆಗಳಿಂದ ಹೊರಬಂದು ಸದೃಡ ಭಾರತ ನಿರ್ಮಾಣ ಸಾದ್ಯ, ಈ ನಿಟ್ಟಿನಲ್ಲಿ ಯುವಜನತೆ ಕಾರ್ಯ ಪ್ರವೃತರಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರಾದ ಎನ್. ಎಸ್. ಕಂದಾದೇವಯ್ಯ ಮಾತನಾಡಿ ವಿವೇಕಾನಂದರ ಜೀವನಸಂದೇಶ, ಅವರ ಉದಾತ್ತ ಮನೋಭಾವ, ಅವರ ವೈಚಾರಿಕ ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿದರು.

ವೀರಾಜಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಮನೆಯಪಂಡ ಶೀಲಾ ಬೋಪಣ್ಣ ಮಾತನಾಡಿ, ವಿವೇಕಾನಂದರ ಇಡೀ ಬದುಕೇ ಯುವಜನರಿಗೆ ಆದರ್ಶ ಪ್ರಾಯವಾಗಿದ್ದು ಅವರು ನಮಗಾಗಿ ಪಟ್ಟ ಶ್ರಮ, ಮತ್ತು ನೀಡಿದ ಸಂದೇಶಕ್ಕೆ ಚ್ಯುತಿ ಬಾರದಂತೆ ಯುವಜನತೆ ನಡೆದುಕೊಳ್ಳುವ ಮೂಲಕ ಬಲಿಷ್ಠ ಯುವ ಭಾರತ ಕಟ್ಟಲು ಸಾಧ್ಯ ಎಂದರು.

ಈ ವೇಳೆ ಕೊಡಗು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೇಶವ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ವೇದಿಕೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸವಿತ, ಗ್ರಾಮ ಪಂಚಾಯಿತಿ ಸದಸ್ಯ ಅಫಝಲ್, ಗ್ಲೋಬಲ್ ಯುವಕ ಸಂಘದ ಅಧ್ಯಕ್ಷ ಕರ್ತಂಡ ಸೋಮಣ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಸರ್ವದೈವತಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ತತ್ವ, ಆದರ್ಶಗಳ ಕುರಿತಾಗಿ ಭಾಷಣ, ಪ್ರಬಂಧ, ಚಿತ್ರಕಲೆ, ಹಾಗೂ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಕ್ಷರ ಮಹಿಳಾ ಸಂಘದ ಸದಸ್ಯರಾದ ಲತಾ ಪ್ರಾರ್ಥಿಸಿ, ವೀರಾಜಪೇಟೆ ತಾಲೂಕು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಡಾಡು ಜೋಸೆಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.