ಸೋಮವಾರಪೇಟೆ, ಫೆ. ೧: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಸ್ತಿçÃಶಕ್ತಿ ಒಕ್ಕೂಟ ಹಾಗೂ ಬೇಳೂರು ಗ್ರಾಮ ಪಂಚಾಯಿತಿ ಇವರ ಆಶ್ರಯದಲ್ಲಿ ಭಾರತ ಸ್ವಾತಂತ್ರö್ಯ ಅಮೃತ ಮಹೋತ್ಸವ ಅಂಗವಾಗಿ ಗ್ರಾಮೀಣ ಮಹಿಳೆಯರ ದೌರ್ಜನ್ಯ ಮುಕ್ತಿ ಕಾರ್ಯಕ್ರಮ ಬಜೆಗುಂಡಿ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನಾದೇವಿ ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್, ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್, ಶಿಕ್ಷಕ ರಮೇಶ್, ತಾಲೂಕು ಸ್ತಿçà ಶಕ್ತಿ ಒಕ್ಕೂಟದ ಖಜಾಂಚಿ ದಮಯಂತಿ ಉಪಸ್ಥಿತರಿದ್ದರು. ಪ್ರತಿನಿಧಿ ಲತಾ ಕಾರ್ಯಕ್ರಮ ನಿರ್ವಹಿಸಿದರು.