ಧಾರ್ಮಿಕ ಕಾರ್ಯಕ್ರಮಗಳು

ಕೂಡಿಗೆ, ಫೆ. ೧: ಹಾರಂಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶನಿಮಹತ್ಮಾ ದೇವಾಲಯದಲ್ಲಿ ಶ್ರೀ ಗುರು ಶನಿಮಹಾತ್ಮ ಸಂಘದ ವತಿಯಿಂದ ತಾ. ೪ ಮತ್ತು ೫ ರಂದು ಶ್ರೀ ಗುರು ಶನಿಮಹಾತ್ಮ ವಿಗ್ರಹ ಮತ್ತು ನವಗ್ರಹ ಮತ್ತು ನಾಗಿಣಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಾದೇವ್ ತಿಳಿಸಿದ್ದಾರೆ.

೨ ದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ತಾ. ೫ ರಂದು ದೇವಾಲಯವನ್ನು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾಸನದ ಶ್ರೀ ಗಿರಿ ಕ್ಷೇತ್ರ ಸದ್ಗುರು ಜ್ಞಾನನಂದ ಗುರುಶಿವಾಯ ಮಠಾಧೀಶರಾದ ಶ್ರೀ ಸದ್ಗುರು ಉಮೇಶ್ ಗುರೂಜಿ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಉದ್ಯಮಿ ವಿಶ್ವನಾಥ್ ಸಾತಪ್ಪನ್, ಗುತ್ತಿಗೆದಾರ ಪವನ್ ಕುಮಾರ್, ಕುಶಾಲನಗರ ಉದ್ಯಮಿ ತಿಲಕ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಬಾಸ್ಕರ್ ನಾಯಕ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ, ಮಣಿ, ಹಾರಂಗಿ ಸುಧೀರ್ ಅಪ್ಪಾಜಿ, ವೇಲು, ಶ್ರೀನಿವಾಸ, ಅರುಣ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ತಿಳಿಸಿದ್ದಾರೆ.