
ಕೋವರ್ಕೊಲ್ಲಿ ಇಂದ್ರೇಶ್
ನವದೆಹಲಿ, ಫೆ. ೧: ಅಂರ್ರಾಷ್ಟಿçÃಯ ಭಯೋತ್ಪಾದಕ ಸಂಘಟನೆ ಐಸಿಸ್ ಪರವಾಗಿ ನಿಧಿ ಸಂಗ್ರಹಣೆ ಮತ್ತು ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಆರೋಪದಡಿಯಲ್ಲಿ ಈ ಹಿಂದೆ ರಾಷ್ಟಿçÃಯ ತನಿಖಾ ದಳದಿಂದ ಬಂಧನಕ್ಕೀಡಾಗಿದ್ದ ಕೊಡಗಿನ ಗುಡ್ಡೆಹೊಸೂರು ಮೂಲದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಸೇರಿದಂತೆ ಒಟ್ಟು ೮ ಜನ ಆರೋಪಿಗಳ ವಿರುದ್ಧ ಅಧಿಕಾರಿಗಳು ದೆಹಲಿಯ ಎನ್ಐಏ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಬಂಧಿತರಲ್ಲಿ ದೀಪ್ತಿ ಮಾರ್ಲಳನ್ನು ಐಸಿಸ್ ನೇಮಕಾತಿಯ ಕಿಂಗ್ಪಿನ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ, ಮೊಹಮ್ಮದ್ ವಕಾರ್ ಲಾನ್ ಯಾನೆ ವಿಲ್ಸನ್ ಕಾಶ್ಮೀರಿ, ಮಿರ್ಜಾ ಸಿದ್ದೀಕ್, ಶಿಫಾಹಾರೀಸ್ ಯಾನೆ ಆಯಿಷಾ, ಒಬೈದ್ ಹಮೀದ್ ಮಟ್ಟಾ, ಮಾದೇಶ್ ಶಂಕರ್ ಯಾನೆ ಅಬ್ದುಲ್ಲಾ, ಅಮ್ಮರ್ ಅಬ್ದುಲ್ಲಾ ರಹಿಮಾನ್ ಮತ್ತು ಮುಜಾಮಿಲ್ ಹಸನ್ ಭಟ್ ಇವರುಗಳ ವಿರುದ್ಧ ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಕೇರಳ ಮೂಲದ ಮೊಹಮ್ಮದ್ ಅಮೀನ್ ಯಾನೆ ಅಬು ಯಾಹ್ಯಾ ಮತ್ತು ಆತನ ಸಹಚರರ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬAಧಿಸಿದAತೆ ೨೦೨೧ರ ಮಾರ್ಚ್ ನಲ್ಲಿ ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ಹೂಪ್, ಇನ್ಸ್ಟಾçಗ್ರಾಂ ಗಳನ್ನು ಬಳಸಿಕೊಂಡು ಐಸಿಸ್ಗೆ ಜನರನ್ನು ಸೇರಿಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು. ಇದೇ ಪ್ರಕರಣದಲ್ಲಿ ಎನ್ಐಎ ೨೦೨೧ರ ಸೆಪ್ಟೆಂಬರ್ ೮ ರಂದು ಮೂವರು
(ಮೊದಲ ಪುಟದಿಂದ)ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು.
ಕಳೆದ ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಎಂಟು ಆರೋಪಿ ಗಳು ಐಸಿಸ್ ಸಂಘಟನೆಯೊAದಿಗೆ ನಿಕಟ ಸಂಪರ್ಕ ಹೊಂದಿದ್ದು ಐಸಿಸ್ಗೆ ಜನರನ್ನು ನೇಮಕ ಮಾಡುವುದು, ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಕಳೆದ ವರ್ಷದ ಆಗಸ್ಟ್ ೪ ರಂದು ಎನ್ಐಎ ಅಧಿಕಾರಿಗಳ ತಂಡ ಉಳ್ಳಾಲದಲ್ಲಿ ಅಮ್ಮಾರ್ ಅಬ್ದುಲ್ನನ್ನು ಬಂಧಿಸಿತ್ತು. ಆ ಸಮಯದಲ್ಲಿ ದೀಪ್ತಿ ಮಾರ್ಲಳನ್ನು ಪ್ರಶ್ನಿಸಲಾಗಿತ್ತು. ಆದರೆ ಬಂಧಿಸಿರಲಿಲ್ಲ. ಕಳೆದ ಜನವರಿ ೩ ರಂದು ಎನ್ಐಎ ಅಧಿಕಾರಿ ಸೂಪರಿನ್ಟೆಂಡೆAಟ್ ಕೃಷ್ಣ ಕುಮಾರ್ ನೇತೃತ್ವದ ತಂಡ ಪುನಃ ಉಲ್ಲಾಳದ ಮನೆ ಮೇಲೆ ಧಾಳಿ ನಡೆಸಿ ದೀಪ್ತಿಯನ್ನು ಬಂಧಿಸಿ ಅದೇ ದಿನ ದೆಹಲಿಗೆ ಕರೆದೊಯ್ದಿತ್ತು. ವಿಚಾರಣೆಯಲ್ಲಿ ಅಧಿಕಾರಿಗಳು ಸಂಗ್ರಹಿಸಿದ ಸಾಕ್ಷö್ಯವನ್ನು ಮುಂದಿಟ್ಟು ಪ್ರಶ್ನಿಸಿದಾಗ ಈಕೆ ನಿರಾಕರಿಸದೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಕಳೆದ ೨೦೨೧ ಮಾರ್ಚ್ ತಿಂಗಳಿನಲ್ಲೇ ಎಫ್ಐಆರ್ ಸಲ್ಲಿಸಲಾಗಿದ್ದ ಈ ಐಸಿಸ್ ಬೆಂಬಲದ ಪ್ರಕರಣದಲ್ಲಿ ಎನ್ಐಎ ಮೊಟ್ಟ ಮೊದಲು ಭಟ್ಕಳದ ವ್ಯಕ್ತಿಯನ್ನು ಬಂಧಿಸಿತ್ತು. ನಂತರ ಜಮ್ಮು ಮತ್ತು ಕಾಶ್ಮೀರ, ಬೆಂಗಳೂರು, ಮಂಗಳೂರು ಸಹಿತ ಅನೇಕ ಕಡೆ ಏಕಕಾಲಕ್ಕೆ ದಾಳಿ ನಡೆಸಿ ಆತನ ಸಹಚರರನ್ನು ಬಂಧಿಸಿ, ಲ್ಯಾಪ್ಟಾಪ್ಗಳು, ಸಿಮ್ ಕಾರ್ಡ್ಗಳು, ಹಾರ್ಡ್ ಡಿಸ್ಕ್ ಡ್ರೆöÊವ್ ಸಹಿತ ಅನೇಕ ಡಿಜಿಟಲ್ ಉಪಕರಣ ಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ.