ಮಡಿಕೇರಿ, ಫೆ. ೨: ಕೊಡಗು ಜಿಲ್ಲೆಯಲ್ಲಿ ಗೌಡ ಬೈ ರೇಸ್ ವ್ಯಾಖ್ಯಾನದಡಿ ಕೋವಿ ರಿಯಾಯಿತಿ ನೀಡಬೇಕೆಂದು ಮೈಸೂರಿನ ಅಮೆ ಶಿವರಾಮ್ ಎಂಬವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ ೩ ರಂದು ಕೇಂದ್ರ ಗೃಹ ಇಲಾಖೆಯ ಉಪಕಾರ್ಯದರ್ಶಿ ಯವರಿಗೆ ಪತ್ರ ಬರೆದು ತುರ್ತು ಆದೇಶ ನೀಡುವಂತೆ ಒತ್ತಾಯಿಸ ಲಾಗಿದ್ದು, ತಪ್ಪಿದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

೨೦೧೬ ರಿಂದ ತಾನು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದು, ಸಂಬAಧಿಸಿದ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆAದು ಪತ್ರದಲ್ಲಿ ತಿಳಿಸಿದ್ದು, ೨೦೧೮ರಲ್ಲಿ ಕೇಂದ್ರ ಸರ್ಕಾರದ ಗೃಹ ಇಲಾಖೆಯು ರಾಜ್ಯ ಸರ್ಕಾರಕ್ಕೆ ವಿವರಣೆ ಕೇಳಿ ಪತ್ರ ಹಾಕಿದ್ದರೂ ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಂದಿಸಿಲ್ಲವೆAದು ಗಮನ ಸೆಳೆದಿದ್ದಾರೆ.

ಇವರ ಪತ್ರದ ಹಿನ್ನೆಲೆಯಲ್ಲಿ ತಾ. ೨೬.೧೦.೨೦೨೧ರಂದು ಕೇಂದ್ರ ಗೃಹ ಇಲಾಖೆಯ ಉಪಕಾರ್ಯದರ್ಶಿ ಅವರು ಕರ್ನಾಟಕ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ೪ ದಿನಗಳೊಳಗೆೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಕೇಂದ್ರದ ಪತ್ರದನ್ವಯ ತಾ. ೨೫.೧೧.೨೦೨೧ ರಂದು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿ ವರದಿ ಸಲ್ಲಿಸಲು ಕೋರಿದ್ದರು. ಅಲ್ಲದೆ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರ್ದೇಶಕರಿಗೆ ಈ ಬಗ್ಗೆ ಸೂಚನೆ ನೀಡಲಾಗಿತ್ತು.

ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ಹಲವು ಅಂಶಗಳನ್ನು ಉಲ್ಲೇಖಿಸಿ ನಿರ್ದೇಶನ ನೀಡುವಂತೆ, ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಸ್ಮರಿಸಬಹುದು.