ಮಡಿಕೇರಿ, ಫೆ. ೧: ನಗರಸಭೆಗೆ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ನಗರದ ಅಭಿವೃದ್ಧಿಗೆ ಒತ್ತು ನೀಡುವಂತೆ ಸಾರ್ವಜನಿಕರು ನಗರಸಭೆಗೆ ಸಲಹೆ ನೀಡಿದರು.

೨೦೨೨-೨೩ನೇ ಸಾಲಿನ ನಗರಸಭೆಯ ಆಯವ್ಯಯ ತಯಾರಿಸುವ ಸಂಬAಧ ಆದಾಯ ಮತ್ತು ಅಭಿವೃದ್ಧಿ ಬಗ್ಗೆ ಸಾರ್ವಜನಿಕರು, ಸಂಘ - ಸಂಸ್ಥೆಗಳು, ನಗರಸಭಾ ಮಾಜಿ ಅಧ್ಯಕ್ಷರು, ಸದಸ್ಯರುಗಳ ಸಲಹೆ, ಸೂಚನೆಗಳನ್ನು ಪಡೆಯುವ ನಿಟ್ಟಿನಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದವರು ನಗರಸಭೆಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ ಮಾತನಾಡಿ, ನಗರದ ೨೩ ವಾರ್ಡ್ಗಳಿಗೂ ಸಮವಾಗಿ ಅನುದಾನ ಹಂಚುವ ನಿಟ್ಟಿನಲ್ಲಿ ಬಜೆಟ್ ಸಂದರ್ಭ ಗಮನ ಹರಿಸಬೇಕು. ಸರ್ಕಾರ ಶಾಸಕರು, ಸಂಸದರಿಗೆ ನೀಡುವ ನಿಧಿಯಿಂದ ನಗರಸಭೆ ಅನುದಾನವನ್ನು ಕೇಳಿ ಪಡೆದುಕೊಳ್ಳುವಂತಾಗಬೇಕು. ನಗರಸಭೆಗೆ ಸಂಬAಧಿಸಿದ ಆಡಿಟ್ ನಡೆಯಬೇಕು. ನಗರಸಭೆಯಲ್ಲಿ ಈ ಹಿಂದೆ ಹಣದುರುಪಯೋಗವಾಗಿರುವ ಸಂಬAಧ ತನಿಖೆಯಾಗಬೇಕು. ಪ.ಜಾತಿ, ಪ.ಪಂಗಡದವರಿಗೆ ಸೇರಿದಂತೆ ನಾಗರಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕೆಂದು ಮನವಿ ಮಾಡಿದರು. ತೆರಿಗೆ ಹೆಚ್ಚಳ ಮಾಡದಂತೆ ಕೋರಿದರು. ಈ ಸಲಹೆಗಳ ಅನುಷ್ಠಾನಕ್ಕೆ ಕ್ರಮವಹಿಸುವದಾಗಿ ಅನಿತಾ ಪೂವಯ್ಯ ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಪ್ರಮುಖ ತೆನ್ನಿರಾ ಮೈನಾ ಮಾತನಾಡಿ, ನಗರಸಭೆಗೆ ಯಾವ ಕೆಲಸಕ್ಕಾಗಿ ಅನುದಾನ ಬರುತ್ತದೆಯೊ ಆ ಹಣ ಅದಕ್ಕಾಗಿಯೇ ಬಳಕೆಯಾಗಬೇಕು. ಹೊರತಾಗಿ ಅನ್ಯ ಕೆಲಸಗಳಿಗೆ ಅವುಗಳನ್ನು ಬಳಕೆ ಮಾಡಬಾರದು. ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಗಣಪತಿ ಬೀದಿ ಅಗಲೀಕರಣದ ನೆಪದಲ್ಲಿ ಗಣಪತಿ ಬೀದಿಯಲ್ಲಿ ಅಳವಡಿಸಲಾಗಿದ್ದ ಹಿರಿಯ ನಾಗರಿಕರ ಸೇವಕರಾದ ಗಣಪತಿಯವರ ನಾಮಫಲಕ ಹೀನಾಯಸ್ಥಿತಿಗೆ ತಲುಪಿದ್ದು, ಅದನ್ನು ಸರಿಪಡಿಸಬೇಕೆಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅನಿತಾ ಪೂವಯ್ಯ ಈಗಾಗಲೇ ಆ ನಾಮಫಲಕವನ್ನು ತೆಗೆದಿಡಲಾಗಿದ್ದು, ರಸ್ತೆ ಉದ್ಘಾಟನೆ ವೇಳೆ ಅಳವಡಿಸಲಾಗುವುದು ಎಂದರಲ್ಲದೆ, ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರ ವಹಿಸಲಾಗುವುದೆಂದರು.

ಬೈಶ್ರೀ ಪ್ರಕಾಶ್ ಮಾತನಾಡಿ, ನಗರದಲ್ಲಿ ಸ್ವಚ್ಛತೆ, ಚರಂಡಿ, ರಸ್ತೆ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕು. ಫಾರಂ -೩, ಖಾತೆ ಬದಲಾವಣೆ ಸಂಬAಧದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಖಾಸಗಿ ಬಸ್ ನಿಲ್ದಾಣ ಸಮರ್ಪಕವಾಗಿ ನಿರ್ವಹಣೆಯಾಗಬೇಕೆಂದು ಮನವಿ ಮಾಡಿದರು.

ಕಾಮಗಾರಿಗಳನ್ನು ಸಮರ್ಪ ಕವಾಗಿ ನಿರ್ವಹಿಸಲಾಗುವುದು ಫಾರಂ-೩ ಸಂಬAಧ ದಾಖಲಾತಿಗಳ ಕೊರತೆ ಇರುವ ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿಯಿದ್ದು, ಉಳಿದವುಗಳನ್ನು ವಿಲೇವಾರಿ ಮಾಡಲಾಗಿದೆ. ಸಕಾಲದಡಿ ಖಾತೆ ಬದಲಾವಣೆ ಕಾರ್ಯವೂ ಪ್ರಗತಿಯಲ್ಲಿದೆ. ಖಾಸಗಿ ಬಸ್ ನಿಲ್ದಾಣದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲು ಈಗಾಗಲೇ ತೀರ್ಮಾನಿಸಲಾಗಿದ್ದು, ಸದ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಅಂದು ಅನಿತಾ ಪೂವಯ್ಯ ಹೇಳಿದರು.

ಹಿರಿಯ ನಾಗರಿಕರಾದ ಕೃಷ್ಣ ಅವರು ಮಾತನಾಡಿ, ನಗರದಲ್ಲಿ ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ ಶೌಚಾಲಯ ಹಾಗೂ ಆಸನದ ವ್ಯವಸ್ಥೆ ಕಲ್ಪಿಸಬೇಕೆಂದು ಕೋರಿದರು. ಈ ಸಂಬAಧ ಕ್ರಮಕೈಗೊಳ್ಳಲಾಗುವುದೆಂದು ಅಧ್ಯಕ್ಷರು ಹೇಳಿದರು.

ಡಿಎಸ್‌ಎಸ್ ಮುಖಂಡ ದಿವಾಕರ್ ಮಾತನಾಡಿ, ನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ನಗರಸಭೆ ಮುಂದಾಗಬೇಕೆAದು ಮನವಿ ಮಾಡಿದರು. ಈ ಬಗ್ಗೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಡಿ ಇಡಲಾಗುವುದು ಎಂದು ಅನಿತಾ ಪೂವಯ್ಯ ತಿಳಿಸಿದರು. ನಾಗರಿಕ ಪದ್ಮನಾಭ ಎಂಬವರು ಮಾತನಾಡಿ, ದೇಚೂರಿನಲ್ಲಿ ಬಹಳಷ್ಟು ರಸ್ತೆಗಳಲ್ಲಿ ಬೃಹತ್ ಗುಂಡಿಗಳಾಗಿದ್ದು ಅವುಗಳನ್ನು ಮುಚ್ಚುವ ಕೆಲಸವಾಗಬೇಕು. ನಗರದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲ್ಗಳು ಕಂಡು ಬರುತ್ತಿದ್ದು ಅವುಗಳನ್ನು ತೆರವು ಮಾಡಿ ಸ್ವಚ್ಛತೆ ಕಾಪಾಡುವ ಕೆಲಸವಾಗಬೇಕು.

ನಗರಸಭಾ ಸಾರ್ವಜನಿಕ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಇದನ್ನು ಸರಿಪಡಿಸಬೇಕು. ಪ.ಜಾತಿ, ಪ. ಪಂಗಡದ ಜನರಿಗೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕೆಂದರು. ನಿವೇಶನ ನೀಡುವ ಸಂಬAಧ ಜಾಗ ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ. ನಗರ ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ ಎಂದು ಅನಿತಾ ಪೂವಯ್ಯ ಹೇಳಿದರು. ಸಭೆಯಲ್ಲಿ ಇನ್ನೂ ಹಲವು ನಾಗರಿಕರು ತಮ್ಮ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಆಯುಕ್ತ ರಾಮದಾಸ್, ನಗರಸಭಾ ಸದಸ್ಯರುಗಳು ಉಪಸ್ಥಿತರಿದ್ದರು.