ಮಡಿಕೇರಿ, ಫೆ. ೨ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸುವ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗಿದೆ. ಆದರೆ, ನೇಮಕಗೊಂಡ ಅತಿಥಿ ಉಪನ್ಯಾಸಕರಿಗೆ ಆಗಸ್ಟ್ನಿಂದ ವೇತನ ಲಭ್ಯವಾಗದೆ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಜೊತೆಗೆ ಜಿಲ್ಲೆಯ ಪಿಯು ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸಂಬಳವಿಲ್ಲದೆ, ಉಪನ್ಯಾಸಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಮತ್ತು ಇನ್ನೂ ಅನೇಕರು ತಮ್ಮ ಸಂಬಳದ ಬಾಕಿ ಮೊತ್ತ ಪಾವತಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯ ಸರ್ಕಾರಿ ಪಿಯು ಮಡಿಕೇರಿ, ಫೆ. ೨ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸುವ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗಿದೆ. ಆದರೆ, ನೇಮಕಗೊಂಡ ಅತಿಥಿ ಉಪನ್ಯಾಸಕರಿಗೆ ಆಗಸ್ಟ್ನಿಂದ ವೇತನ ಲಭ್ಯವಾಗದೆ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಜೊತೆಗೆ ಜಿಲ್ಲೆಯ ಪಿಯು ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸಂಬಳವಿಲ್ಲದೆ, ಉಪನ್ಯಾಸಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಮತ್ತು ಇನ್ನೂ ಅನೇಕರು ತಮ್ಮ ಸಂಬಳದ ಬಾಕಿ ಮೊತ್ತ ಪಾವತಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯ ಸರ್ಕಾರಿ ಪಿಯು ಇದುವರೆಗೂ ಸಂಬಳ ಕೈಸೇರಿಲ್ಲ.

೨೮ ಉಪನ್ಯಾಸಕರಿಗೆ ಮಂಜೂರಾದ ವೇತನವನ್ನು ಸೆಪ್ಟೆಂಬರ್‌ನಿAದ ಬಿಡುಗಡೆ ಮಾಡಲಾಗಿದ್ದು, ಈ ನಡುವೆ ವೇತನ ಸಿಗದ ೧೨ ಉಪನ್ಯಾಸಕರು ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವರು ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಪಾಠ ಪ್ರವಚನಕ್ಕೆ ತೊಡಕಾಗಿದೆ. ಉಪನ್ಯಾಸಕರಿಲ್ಲದೆ ಕಾಲೇಜು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅಸಾಧ್ಯವಾಗಿದೆ. ಪರೀಕ್ಷೆ ಕೂಡ ಸಮೀಪಿಸುತ್ತಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಈ ನಿಟ್ಟಿನಲ್ಲಿ ಸಂಬAಧಪಟ್ಟವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಮಡಿಕೇರಿ ಜೂನಿಯರ್ ಕಾಲೇಜಿಗೆ ಆಗಸ್ಟ್ನಲ್ಲಿ ನೇಮಕಗೊಂಡ ಏಳು ಅತಿಥಿ ಉಪನ್ಯಾಸಕರ ಪೈಕಿ ಕೇವಲ ಇಬ್ಬರು ಉಪನ್ಯಾಸಕರಿಗೆ ಮಾತ್ರ ವೇತನ ಮಂಜೂರಾಗಿದೆ. ನಮ್ಮ ಸಂಬಳ ಒಮ್ಮೆಲೆ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ, ವೇತನ ಸಿಗದೆ ಆರು ತಿಂಗಳು ಕಳೆದಿವೆ ಎಂದು ಕಾಲೇಜಿನ ಅತಿಥಿ ಉಪನ್ಯಾಸಕರು ‘ಶಕ್ತಿ’ಯೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿಗುವ ರೂ. ೯ ಸಾವಿರ ಸಂಬಳ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಆರ್ಥಿಕ ಸಮಸ್ಯೆಯಲ್ಲಿದ್ದೇವೆ. ಪಿಯು ಮಂಡಳಿಯ ಉಪನಿರ್ದೇಶಕರನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ಡಿಡಿಪಿಯು ಪುಟ್ಟರಾಜು ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಈ ಕುರಿತು ರಾಜ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೂ ಹಣ ಬಿಡುಗಡೆಯಾಗಿಲ್ಲ. ಸಿಬ್ಬಂದಿಗಳ ಯಡವಟ್ಟಿನಿಂದ ಅಗಸ್ಟ್ನಿಂದ ಪಾವತಿಯಾಗಬೇಕಾಗದ ಸಂಬಳ ಸೆಪ್ಟೆಂಬರ್‌ನಿAದ ಎಂದು ನಮೂದಾಗಿದೆ. ಇದನ್ನು ಸರಿಪಡಿಸಲಾಗುವುದು. ಇದುವರೆಗೂ ಸಂಬಳ ಸಿಗದವರ ಬಗ್ಗೆಯೂ ಮೇಲಾಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ. ಶಾಸಕರು ಹಾಗೂ ರಾಜ್ಯ ಸಚಿವರು ಮಧ್ಯಪ್ರವೇಶಿಸಿ ವೇತನ ಮಂಜೂರು ಮಾಡುವಂತೆ ಉಪನ್ಯಾಸಕರು ಮನವಿ ಮಾಡಿದ್ದಾರೆ.