ಶನಿವಾರಸಂತೆ, ಫೆ. ೨: ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಪಂಚಾಯಿತಿಯ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಗ್ರಾ.ಪಂ. ಬೆಳವಣಿಗೆ, ಗ್ರಾ.ಪಂ. ಅಧಿಕಾರಿಗಳು ಅಭಿವೃದ್ಧಿ ವಿಚಾರದಲ್ಲಿ ಮಾಡಬೇಕಾಗಿರುವ ಕಾರ್ಯವೈಖರಿ ಮುಂತಾದವುಗಳ ಬಗ್ಗೆ ಚರ್ಚಿಸಿದರು.
ಗ್ರಾ.ಪಂ. ವಾರ್ಡ್ಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ವಾರ್ಡ್ಗೆ ಸಂಬAಧಪಟ್ಟ ಸದಸ್ಯರ ಹೆಸರನ್ನು ವಿನಾಕರಣ ಬಳಸಿಕೊಂಡು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ನಾವು ಅಂತಹವರಿಗೆ ಶಿಫಾರಸ್ಸು ಮಾಡಿರುವುದಿಲ್ಲ. ಈ ನಿಟ್ಟಿನಲ್ಲಿ ಪಿಡಿಓ, ಅಧಿಕಾರಿಗಳು ಕಟ್ಟುನಿಟ್ಟಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದು ಸದಸ್ಯರಾದ ಸರ್ದಾರ್ ಅಹಮದ್, ಎಸ್.ಎನ್. ರಘು ವಿಷಯ ಪ್ರಸ್ತಾಪಿಸಿದರು.
ಪಟ್ಟಣದಲ್ಲಿ ಖಾಸಗಿ ಕಟ್ಟಡ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಮಾಲೀಕರು ಕಟ್ಟಡ ಕಾಮಗಾರಿ ನಡೆಯುತ್ತಿರುವ ಸಂದರ್ಭ ದಲ್ಲಿ ಗ್ರಾ.ಪಂ.ನಿAದ ಪರವಾನಿಗೆ ಮತ್ತು ದೃಢೀಕರಣ ಪತ್ರವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಕಟ್ಟಡ ಕಾಮಗಾರಿಯು ಪರವಾನಿಗೆಯಲ್ಲಿರುವ ನಿಯಮವನ್ನು ಮೀರಿ ಕಟ್ಟಡ ಕಾಮಗಾರಿ ನಡೆಸುತ್ತಾರೆ. ಇನ್ನು ಮುಂದೆ ಕಟ್ಟಡ ನಿರ್ಮಾಣ ಮಾಲೀಕರು ಕಾಮಗಾರಿ ಮೊದಲೆ ಪರವಾನಿಗೆ ಮತ್ತು ದೃಢೀಕರಣ ಪತ್ರ ಪಡೆದುಕೊಳ್ಳಬೇಕು. ನಿಯಮ ಮೀರಿ ಮಾಲೀಕರು ಕಟ್ಟಡ ಕಾಮಗಾರಿ ಮಾಡಿದರೆ ಅದನ್ನು ಅಕ್ರಮ ಕಟ್ಟಡ ನಿರ್ಮಾಣ ಕಾಮಗಾರಿ ಎಂದು ಗ್ರಾ.ಪಂ. ಪರಿಗಣಿಸಿ ಮಾಲೀಕರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಪಟ್ಟಣದ ೨ ವಾರ್ಡ್ಗಳಲ್ಲಿ ಇದುವರೆಗೆ ಚರಂಡಿ ಸ್ವಚ್ಛತಾ ಕಾಮಗಾರಿ ನಡೆದಿದೆ. ಇತರೆ ಗ್ರಾ.ಪಂ.ಗಳಿಗೆ ಹೋಲಿಸಿದಲ್ಲಿ ನಮ್ಮ ಗ್ರಾ.ಪಂ.ಯಲ್ಲಿ ಚರಂಡಿ ಸ್ವಚ್ಛತಾ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂದು ಸದಸ್ಯ ಆದಿತ್ಯ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲೆಗಳಲ್ಲಿ ಉದ್ಯಾನವನ ನಿರ್ಮಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಸ್ಪತ್ರೆಗೆ ಸಂಬAಧಪಟ್ಟAತೆ ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಶರತ್ ಶೇಖರ್, ಸರ್ದಾರ್ ಅಹಮ್ಮದ್, ಎಸ್.ಎನ್. ರಘು, ಗೀತ ಹರೀಶ್, ಸರಸ್ವತಿ, ಆದಿತ್ಯ ಗೌಡ, ಪಿಡಿಓ ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯ ಆಚಾರಿ, ಬಿಲ್ಕಲೆಕ್ಟರ್ ವಸಂತ, ಸಿಬ್ಬಂದಿ ಪೌಜಿಯಬಾನು ಹಾಜರಿದ್ದರು.