ಶನಿವಾರಸಂತೆ, ಫೆ. ೧: ಮನೆಯ ಮುಂಭಾಗ ಹಾದು ಹೋಗಿರುವ ೧೧ ಕೆ.ವಿ. ಹೈವೋಲ್ಟೇಲ್ ವಿದ್ಯುತ್ ಕಂಬ, ವಯರನ್ನು ಸ್ಥಳಾಂತರಿಸುವAತೆ ಸೋಮವಾರಪೇಟೆ ಕಾರ್ಯಪಾಲಕ ಅಭಯಂತರರಿಗೆ ಮನವಿ ಮಾಡಲಾಗಿದೆ.

ಶನಿವಾರಸಂತೆ ಹೋಬಳಿಯ ಮೂದ್ರವಳ್ಳಿ ಗ್ರಾಮದ ಎಂ.ಎಸ್. ಚಂದ್ರಶೇಖರ್ ಅವರ ವಾಸದ ಮನೆಯ ಮುಂಭಾಗ ಶಿಥಿಲವಾದ ೧೧ ಕೆ.ವಿ. ಹೈವೋಲ್ಟೇಜ್ ವಿದ್ಯುತ್ ಕಂಬ ಹಾಗೂ ವಿದ್ಯುತ್ ವಯರನ್ನು ಸ್ಥಳಾಂತರಿಸುವAತೆ ಈ ಹಿಂದೆ ಶನಿವಾರಸಂತೆ ಜೂನಿಯರ್ ಇಂಜಿನಿಯರ್ ಅವರಿಗೆ ಅರ್ಜಿ ನೀಡಿದ್ದು, ಇದುವರೆಗೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಆದುದ್ದರಿಂದ ಸೋಮವಾರಪೇಟೆ ಕಾರ್ಯಪಾಲಕ ಅಭಿಯಂತರು ಖುದ್ದಾಗಿ ಪರಿಶೀಲಿಸಿ, ಶಿಥಿಲಗೊಂಡಿರುವ ವಿದ್ಯುತ್ ಟ್ರಾನ್ಸ್ಫಾರಂ ಹಾಗೂ ಕಂಬವನ್ನು ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಲಾಗಿದೆ.