ಮಡಿಕೇರಿ, ಫೆ. ೨: ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಆಸ್ತಿಯನ್ನು ಈ ಸಂಘ ಸಾಲ ಮರುಪಾವತಿ ಮಾಡದ ಹಿನ್ನೆಲೆ ಇದೀಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ತನ್ನ ಸ್ವಾಧೀನಕ್ಕೆ ಪಡೆದಿದೆ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಅಧಿಕೃತವಾಗಿ ನಿಯೋಜಿಸಲ್ಪಟ್ಟಿರುವ ಬ್ಯಾಂಕ್ನ ಅಧಿಕಾರಿ ಮುಸ್ಲಿಂ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಗೋಣಿಕೊಪ್ಪಲು - ಅರುವತೋಕ್ಲುವಿನಲ್ಲಿರುವ ೦.೦೫.೪೪ ಸೆಂಟ್ ಪರಿವರ್ತಿತ ಜಾಗ ಹಾಗೂ ವೀರಾಜಪೇಟೆಯ ಗಡಿಯಾರ ಕಂಬದ ಬಳಿಯಿರುವ ೦.೦೩.೫೦ ಸೆಂಟ್ ಪರಿವರ್ತಿತ ಸ್ವತ್ತನ್ನು ತಾ. ೨೭.೧.೨೦೨೨ ರಿಂದ ಸ್ವಾಧೀನಕ್ಕೆ ಪಡೆಯಲಾಗಿದೆ.
ಸಂಘ ೨೫.೧೦.೨೦೨೧ಕ್ಕೆ ಬ್ಯಾಂಕ್ಗೆ ಪಾವತಿಸಬೇಕಾಗಿದ್ದ ರೂ. ೪೮,೦೭,೯೨೫ ಹಾಗೂ ಬಡ್ಡಿ ಮತ್ತಿತರ ವೆಚ್ಚಕ್ಕೆ ಸಂಬAಧಿಸಿದAತೆ ಅರುವತೋಕ್ಲುವಿನ ಸ್ವತ್ತು ಹಾಗೂ ಇದೇ ದಿನಾಂಕಕ್ಕೆ ಬಾಕಿ ಇದ್ದ ರೂ. ೧,೦೩,೮೨,೧೩೭ ನಗದು, ಬಡ್ಡಿ ಇತರ ವೆಚ್ಚಕ್ಕೆ ವೀರಾಜಪೇಟೆಯ ಸ್ವತ್ತನ್ನು ಇದೀಗ ಬ್ಯಾಂಕ್ನ ಸ್ವಾಧೀನಕ್ಕೆ ಪಡೆದಿರುವ ಕುರಿತು ಪ್ರಕಟಣೆ ನೀಡಲಾಗಿದೆ.
(ಮೊದಲ ಪುಟದಿಂದ) ಸಾಲಗಾರರು ಕಾನೂನುಬದ್ಧ ಮೊಬಲಗನ್ನು ಬಡ್ಡಿಯೊಂದಿಗೆ ಪಾವತಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ ಈ ಹಿಂದೆ ಸೂಚನೆ ನೀಡಲಾಗಿತ್ತು. ಆದರೆ ಸಾಲಗಾರರು ಸಾಲದ ಹಣವನ್ನು ಮರುಪಾವತಿ ಮಾಡದ ಕಾರಣದಿಂದಾಗಿ ಇದೀಗ ಈ ಆಸ್ತಿಯನ್ನು ಅಧಿಕೃತ ಅಧಿಕಾರಿ ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿನ ಠೇವಣಿದಾರರು, ಬ್ಯಾಂಕ್ನ ಅವ್ಯವಹಾರದ ಬಗ್ಗೆ ಈ ಹಿಂದೆ ಸಾಕಷ್ಟು ಪ್ರತಿಭಟನೆಗಳನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ವಶಪಡೆಯಲಾಗಿರುವ ಸ್ವತ್ತಿನ ಬಗ್ಗೆ ಯಾರೂ ಯಾವುದೇ ರೀತಿಯಲ್ಲಿ ವ್ಯವಹರಿಸಬಾರದು ಎಂಬ ಸೂಚನೆಯನ್ನು ನೀಡಲಾಗಿದೆ.