ನಾಪೋಕ್ಲು, ಫೆ. ೧: ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ಮಧ್ಯರಾತ್ರಿ ಭಾರೀ ದರೋಡೆ ನಡೆದಿದ್ದು, ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಸೋದರಿ ಯರಿಬ್ಬರನ್ನು ಕಟ್ಟಿಹಾಕಿ ಕೊಲೆ ಬೆದರಿಕೆ ಒಡ್ಡಿದ್ದಲ್ಲದೆ, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ದರೋಡೆಕೋರರ ಬಂಧನಕ್ಕೆ ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಬೆAಗಳೂರಿನಲ್ಲಿ ವಾಸವಿರುವ ನಿವೃತ್ತ ನ್ಯಾಯಾಧೀಶರಾದ ವಾಂಜAಡ ಬೋಪಯ್ಯ ಅವರ ಸೋದರಿಯರಾದ ೭೮ ವರ್ಷದ ವಾಂಜAಡ ಜಾನಕಿ ಮತ್ತು ೬೮ ವರ್ಷದ ಅಮ್ಮಕ್ಕಿ ತಮ್ಮ ಮನೆಯ ಮಹಡಿಯಲ್ಲಿ ಮಲಗಿದ್ದ ವೇಳೆ, ಮಧ್ಯರಾತ್ರಿ ಸುಮಾರಿಗೆ ಮನೆಯ ಬಾಗಿಲು ಮುರಿದು ಒಳನುಗ್ಗಿದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ ಸೋದರಿಯರನ್ನು ಬೆದರಿಸಿದ್ದಾರೆ. ಬಳಿಕ ಅವರನ್ನು ಕೋಣೆಯೊಂದರಲ್ಲಿ ಕೂಡಿಹಾಕಿ, ಕೈಕಾಲುಗಳನ್ನು ಕಟ್ಟಿದ್ದಾರೆ. ಈ ವೇಳೆ ಹೆದರಿದ ಸೋದರಿಯರು ತಮ್ಮ ಜೀವಕ್ಕೆ ಅಪಾಯ ಮಾಡಬೇಡಿ, ಏನು ಬೇಕಾದರೂ ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿದರು. ಬಳಿಕ ಮನೆ ತಡಕಾಡಿದ ಕಳ್ಳರು, ಎರಡೂವರೆ ಲಕ್ಷ ರೂಪಾಯಿ ನಗದು ಮತ್ತು ಸುಮಾರು

(ಮೊದಲ ಪುಟದಿಂದ) ೮೩ ಗ್ರಾಂ ಪ್ರಮಾಣದ ಮೂರೂವರೆ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಹೇಗೋ ಕಟ್ಟುಗಳನ್ನು ಸಡಿಲಿಸಿಕೊಂಡ ಸೋದರಿಯರಿಬ್ಬರು, ದೂರವಾಣಿ ಮೂಲಕ ನೀಡಿದ ಮಾಹಿತಿಯಂತೆ, ಸೋದರ ವಾಂಜAಡ ಬೋಪಯ್ಯ ಅವರು ನಾಪೋಕ್ಲು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಜಾನಕಿ ಮತ್ತು ಅಮ್ಮಕ್ಕಿ ಕಟ್ಟಿಹಾಕಿದ ಸ್ಥಿತಿಯಲ್ಲೇ ಇದ್ದರು. ಮೈಮೇಲೆ ಗಾಯಗಳಾಗಿದ್ದವು. ಪ್ರಕರಣದ ಬಗ್ಗೆ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ಮಹಜರು ನಡೆಸಿದರು. ದುಷ್ಕರ್ಮಿಗಳು (ಮೊದಲ ಪುಟದಿಂದ) ೮೩ ಗ್ರಾಂ ಪ್ರಮಾಣದ ಮೂರೂವರೆ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಹೇಗೋ ಕಟ್ಟುಗಳನ್ನು ಸಡಿಲಿಸಿಕೊಂಡ ಸೋದರಿಯರಿಬ್ಬರು, ದೂರವಾಣಿ ಮೂಲಕ ನೀಡಿದ ಮಾಹಿತಿಯಂತೆ, ಸೋದರ ವಾಂಜAಡ ಬೋಪಯ್ಯ ಅವರು ನಾಪೋಕ್ಲು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಜಾನಕಿ ಮತ್ತು ಅಮ್ಮಕ್ಕಿ ಕಟ್ಟಿಹಾಕಿದ ಸ್ಥಿತಿಯಲ್ಲೇ ಇದ್ದರು. ಮೈಮೇಲೆ ಗಾಯಗಳಾಗಿದ್ದವು. ಪ್ರಕರಣದ ಬಗ್ಗೆ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ಮಹಜರು ನಡೆಸಿದರು. ದುಷ್ಕರ್ಮಿಗಳು ಮನೆ ಬಳಿಯ ಕಣದಲ್ಲಿ ಮೋಜು ಮಾಡಿದ್ದ ಕುರುಹಾಗಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅಲ್ಲದೆ, ಆರೋಪಿತರು ಮನೆಯೊಳಗೆ ಇದ್ದ ಮದ್ಯವನ್ನೂ ಕುಡಿದು, ಕೆಲ ಸಮಯ ಟಿವಿ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಗಾಯಗೊಂಡ ಸೋದರಿಯರಿಗೆ ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ, ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ಠಾಣೆಯ ಪಿ.ಎಸ್.ಐ. ವೆಂಕಟೇಶ್, ನಾಪೋಕ್ಲು ಠಾಣೆಯ ಪ್ರಭಾರ ಎಸ್.ಐ. ಕುಶಾಲಪ್ಪ, ಹೆಡ್ ಕಾನ್ಸ್ಟೇಬಲ್ ರವಿ ಕುಮಾರ್ ಮತ್ತಿತರ ಸಿಬ್ಬಂದಿ ಭೇಟಿ ನೀಡಿದ್ದರು. - ದುಗ್ಗಳ ಸದಾನಂದ