ಮಡಿಕೇರಿ, ಫೆ. ೧: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ದಶ ವರ್ಷದ ಸಂಭ್ರಮ ಪ್ರಯುಕ್ತ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ.

ಆ ನಿಟ್ಟಿನಲ್ಲಿ ಆಸಕ್ತರಿಂದ ಅರೆಭಾಷೆಯಲ್ಲಿ ಇಲ್ಲಿಯವರೆಗೆ ಪ್ರಕಟಣೆಯಾಗದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬAಧಿಸಿದ ಲೇಖನ, ಬರಹ, ಕಥೆ, ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಬರಹಗಾರರು ತಮ್ಮ ಬರಹವನ್ನು ತಾ. ೧೫ರ ಒಳಗಡೆ ಅಕಾಡೆಮಿಯ ಕಚೇರಿಗೆ ತಲುಪಿಸಲು ಕೋರಿದೆ. ಸಂಪಾದಕ ಮಂಡಳಿ ಆಯ್ಕೆಮಾಡಿದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಾಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ, ಮೊ. ೬೩೬೨೫೨೨೬೭೭ ಸಂಪರ್ಕಿಸಬಹುದು. ಚಿಡಿebಚಿseಚಿಛಿಚಿಜemಥಿ@gmಚಿiಟ.ಛಿom