ಮಡಿಕೇರಿ, ಫೆ. ೨: ಕುಷ್ಠ ಮುಕ್ತ ಭಾರತ ಎಂಬುದು ಮಹಾತ್ಮ ಗಾಂಧೀಜಿ ಅವರ ಕನಸಾಗಿದ್ದು, ದೇಶದಲ್ಲಿ ಕುಷ್ಠರೋಗ ನಿವಾರಣೆಗೆ ೨೦೧೬ ರಿಂದಲೇ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರತಿ ವರ್ಷ ಜನವರಿ ೩೦ ರಿಂದ ಫೆಬ್ರವರಿ ೧೩ ರವರೆಗೆ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿಯೂ ಕೂಡ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದ್ದು, ಜಿಲ್ಲೆಯ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಕುಷ್ಠರೋಗದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಅವರು ಮಾಹಿತಿ ನೀಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಮೈಕ್ರೋಬ್ಯಾಕ್ಟೀರಿಯಂ ಲೆಪ್ರಿ’ ಎಂಬ ಕ್ರಿಮಿಯಿಂದ ಬರುವ ರೋಗ ಇದಾಗಿದ್ದು, ಅತ್ಯಂತ ನಿಧಾನವಾಗಿ (ಕೆಲವೊಮ್ಮೆ ೩ ವರ್ಷಗಳ ನಂತರ)ರೋಗದ ಮೊದಲ ಲಕ್ಷಣಗಳು ಗೋಚರಿಸುತ್ತವೆ.
ಸೋಂಕಿತ ವ್ಯಕ್ತಿ ಕೆಮ್ಮುವಾಗ ಅಥವಾ ಸೀನುವಾಗ ಒಬ್ಬರಿಂದ ಮತ್ತೊಬ್ಬರಿಗೆ ಈ ರೋಗ ಹರಡುವ ಸಾಧ್ಯತೆಗಳಿವೆ. ಪ್ರಾರಂಭಿಕ ಹಂತದಲ್ಲಿ ತಾಮ್ರ ವರ್ಣದ ಮಚ್ಚೆಗಳು ದೇಹದ ಯಾವುದೇ ಭಾಗದಲ್ಲಾದರೂ ಕಂಪು ಇಲ್ಲದೆ, ಸ್ಪರ್ಶಜ್ಞಾನವಿಲ್ಲದೆಯೇ ಗೋಚರಿಸಬಹುದು. ಈ ರೀತಿ ಕಂಡುಬAದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಪ್ರಾರಂಭಿಕ ಹಂತದಲ್ಲಿ ಇಂತಹ ಪ್ರಕರಣಗಳಿಗೆ ಚಿಕಿತ್ಸೆ ನೀಡಿದರೆ ಮಾತ್ರ ಮುಂದೆ ಸಂಭವಿಸಬಹುದಾದ ಅಂಗವೈಕಲ್ಯ ತಡೆಹಿಡಿಯಬಹುದು ಎಂದರು.
ಜಿಲ್ಲೆಯಲ್ಲಿ ೨೦೦೯ ರಿಂದ ಇದುವರೆಗೆ ೪೯ ಕುಷ್ಠರೋಗದ ಪ್ರಕರಣಗಳು ಪತ್ತೆಯಾಗಿದ್ದು, ೧ ಹೊರತು ಪಡಿಸಿ ಎಲ್ಲಾ ಪ್ರಕರಣಗಳು ಗುಣಮುಖವಾಗಿವೆ ಎಂದು ಮಾಹಿತಿ ನೀಡಿದರು.
ಗುರುತಿಸುವುದು ಹೇಗೆ?
ದೇಹದಲ್ಲಿನ ಮಚ್ಚೆ ತಿಳಿಬಿಳಿ ಅಥವಾ ಕೆÀಂಪು ಇಲ್ಲವೆ ತಾಮ್ರ ವರ್ಣ ಆಗಿರಬಹದು, ಚಪ್ಪಟೆ ಅಥವಾ ಉಬ್ಬದಂತೆ ಕಾಣಬಹುದು, ತುರಿಕೆ ಇರುವುದಿಲ್ಲ, ಯಾವ ನೋವು ಇರುವುದಿಲ್ಲ, ಶಾಖ ಸ್ಪರ್ಶ ಆಗದು, ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಗೋಚರಿಸಬಹುದು, ಕೆಂಪಾದ ಅಥವಾ ತ್ವಚೆಯ ಬಣ್ಣದ ಗಂಟುಗಳು ಕಾಣಬಹುದು.
ಚಿಕಿತ್ಸೆ
ಪಾಸಿ ಬ್ಯಾಸುಲರಿ ಹಾಗೂ ಮಲ್ಟಿ ಬ್ಯಾಸುಲರಿ ಎಂಬ ೨ ವಿಧಗಳÀಲ್ಲಿ ಕುಷ್ಠರೋಗಗಳು ಕಾಣಿಸಿಕೊಳ್ಳುತ್ತವೆ. ಇವೆರಡಕ್ಕೂ ಜಿಲ್ಲೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿ ಬ್ಯಾಸುಲರಿಗೆ ಸುಮಾರು ೬ ತಿಂಗಳುಗಳ ಕಾಲ ಹಾಗೂ ಮಲ್ಟಿ ಬ್ಯಾಸುಲರಿ ರೋಗಕ್ಕೆ ೧ ವರ್ಷಗಳ ಕಾಲ ‘ಮಿಶ್ರ ಔಷಧಿಗಳ ಚಿಕಿತ್ಸಾ ಕ್ರಮ’ದಿಂದ ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಔಷಧಿ ದೊರಕುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಒಟ್ಟು ೧೪ ಪ್ಯಾಸಿ ಬ್ಯಾಸುಲರಿ ಹಾಗೂ ೩೫ ಮಲ್ಟಿ ಬ್ಯಾಸುಲರಿ ಪ್ರಕರಣಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ. ೫ ಮಚ್ಚೆಗಳಿಗಿಂತ ಹೆಚ್ಚು ಮಚ್ಚೆಗಳಿದ್ದಲ್ಲಿ ಅದನ್ನು ಮಲ್ಟಿ ಬ್ಯಾಸುಲರಿ ಕುಷ್ಠ ಎಂದು ಕರೆಯಲಾಗುತ್ತದೆ. ೨ ವಿಧದ ಕುಷ್ಠ ರೋಗಗಳಿಗೂ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಅಗತ್ಯ. ರೋಗದಿಂದ ಅಂಗವೈಫಲ್ಯ ಉಂಟಾದಲ್ಲಿ ಬೆಂಗಳೂರಿನಲ್ಲಿ ಉಚಿತ ಶಸ್ತç ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ರೋಗ ತೀವ್ರವಾಗುವ ಮೊದಲೇ ಸಾರ್ವಜನಿಕರು ಜಾಗೃತರಾಗಿ, ದೇಹದಲ್ಲಿ ಈ ರೀತಿಯ ಮಚ್ಚೆಗಳಿದ್ದಲ್ಲಿ ನಿರ್ಲಕ್ಷಿಸದೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳುವಂತೆ ಡಾ.ಆನಂದ್ ಅವರು ಸೂಚಿಸಿದರು.
ಜಾಗೃತಿ ಅಭಿಯಾನದ ಸಲುವಾಗಿ ಫೆಬ್ರವರಿ ೧೩ ರವರೆಗೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಜಾಗೃತಿ, ಆಶಾ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಕರಪತ್ರಗಳ ಮೂಲಕ ಅರಿವು, ಶಾಲೆಗಳಲ್ಲಿ ರಸಪ್ರಶ್ನೆ ಮೂಲಕ ಮಕ್ಕಳಿಗೆ ತಿಳುವಳಿಕೆ ಹಾಗೂ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಕುಷ್ಠರೋಗದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಬಿಡುಗಡೆ
ಕುಷ್ಠರೋಗ ಸಂಬAಧ ಜಾಗೃತಿ ಸಂದೇಶಗಳು ಇರುವ ಕರಪತ್ರವನ್ನು ಈ ಸಂದರ್ಭ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಯಿತು.