ಚೆಟ್ಟಳ್ಳಿ, ಫೆ. ೨: ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತಿದ್ದ ಚೆಟ್ಟಳ್ಳಿಯ ಅಯ್ಯಂಡ್ರ ದೇವಿಪ್ರಸಾದ್ ಹಾಗೂ ಶಿಕ್ಷÀಕಿ ನೂತನ್ ಅವರ ಮಗಳು ಎ.ಡಿ. ಪುಣ್ಯ (೨೦) ಎಂಬಾಕೆ ಚೆಟ್ಟಳ್ಳಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಫಟನೆ ನಡೆದಿದೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಪುಣ್ಯ ಕಾಲೇಜಿಗೆ ರಜೆ ಇದ್ದುದರಿಂದ ಕಳೆದ ೨೦ ದಿನಗಳಿಂದ ಚೆಟ್ಟಳ್ಳಿಯ ಮನೆಯಲ್ಲೆ ಇದ್ದು ಆನ್‌ಲೈನ್ ತರಗತಿಯಲ್ಲಿ ತೊಡಗಿಸಿಕೊಂಡಿದ್ದಳು. ಬೆಳಿಗ್ಗೆ ತಂದೆ ತಾಯಿ ಅಜ್ಜಿ ಮಡಿಕೇರಿಗೆ ತೆರಳಿ ಮಧ್ಯಾಹ್ನ ೧.೩೦ಕ್ಕೆ ಮನೆಗೆ ಬಂದು ಬಾಗಿಲು ಬಡಿದಾಗ ಬಾಗಿಲು ತೆರೆÀಯಲಿಲ್ಲ ಇದರಿಂದ ಸಂಶಯಗೊAಡು ಮನೆಯ ಹಿಂಬದಿಯ ಬಾಗಿಲನ್ನು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಚೆಟ್ಟಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿದ್ದಾಪುರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಯಿತು.