ವೀರಾಜಪೇಟೆ, ಫೆ. ೨: ಮುಂಜಾನೆ ವೇಳೆ ಅಕ್ರಮವಾಗಿ ಮರಳು ತುಂಬಿಕೊAಡು ಸಾಗಾಟಕ್ಕೆ ಯತ್ನಿಸುತಿದ್ದ ವಾಹನವನ್ನು ವಶಕ್ಕೆ ಪಡೆದಿರುವ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂಜಾನೆ ೩ ಗಂಟೆ ವೇಳೆಯಲ್ಲಿ ಕಡಂಗ- ಬೊಳ್ಳುಮಾಡು ಜಂಕ್ಷನ್ ಸ್ಥಳದಲ್ಲಿ ದಾಳಿ ಮಾಡಿದ ಸಂದರ್ಭ ಅಕ್ರಮವಾಗಿ ಮರಳು ತುಂಬಿರುವ ಪಿಕ್ ಅಪ್ ವಾಹನ (ಕೆಎ-೧೨ಎ-೯೫೧೫) ಕಂಡುಬAದಿದ್ದು, ಪೊಲೀಸರನ್ನು ಕಂಡು ವಾಹನ ಚಾಲಕ ವಾಹನಬಿಟ್ಟು ಪರಾರಿಯಾಗಿದ್ದಾನೆ. ವಾಹನದೊಂದಿಗೆ ಮರಳನ್ನು ವಶಕ್ಕೆ ಪಡೆದಿರುವ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.