ವೀರಾಜಪೇಟೆ, ಫೆ. ೨: ಕಾರಿನ ಬ್ರೇಕ್ ವಿಫಲಗೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಪೆರುಂಬಾಡಿ ಗ್ರಾಮದಲ್ಲಿ ನಡೆದಿದೆ.
ಪೆರುಂಬಾಡಿ ಗ್ರಾಮ ನಿವಾಸಿ ಪಾಲಿಬೆಟ್ಟ ಗ್ರಾಮದಲ್ಲಿ ಹೊಟೇಲ್ ಹೊಂದಿರುವ ಅಬ್ದುಲ್ಲಾ (೫೫) ಮೃತಪಟ್ಟ ವ್ಯಕ್ತಿ.
ಮೃತ ಅಬ್ದುಲ್ಲಾ ಅವರ ಪೆÀರುಂಬಾಡಿ ನಿವಾಸಕ್ಕೆ ಕೇರಳದಲ್ಲಿ ವಾಸವಿರುವ ಮಗಳು ಅಳಿಯ ಹಾಗೂ ಮೊಮ್ಮಗಳು ಆಗಮಿಸಿದ್ದರು. ವಿಷಯ ತಿಳಿದ ಅಬ್ದುಲ್ಲಾ ಅವರು ಪಾಲಿಬೆಟ್ಟದಿಂದ ಮನೆಗೆ ಆಗಮಿಸಿ ತಾ.೧ರ ರಾತ್ರಿ ೯ ರ ವೇಳೆಗೆ ಮನೆಯಿಂದ ಅಬ್ದುಲ್ಲಾ ಅವರು ಮೊಮ್ಮಗಳು ಫಾತಿಮಾಳೊಂದಿಗೆ ಅಳಿಯನ ಮಾರುತಿ ಜೆನ್ (ಕೆಎಲ್-೧೩ ಎಲ್-೪೮೪೯) ಕಾರಿನಲ್ಲಿ ನಗರಕ್ಕೆ ತೆರಳಿದ್ದಾರೆ. ಈ ವೇಳೆ ಕಾರಿನ ಬ್ರೇಕ್ ವಿಫಲಗೊಂಡು ಮುಖ್ಯ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಬ್ದುಲ್ಲಾ ಅವರಿಗೆ ತಲೆಯ ಭಾಗ, ಎದೆಯ ಭಾಗ ಸೇರಿದಂತೆ ಕಾಲುಗಳಿಗೆ ಮಾರಣಾಂತಿಕ ಗಾಯಗಳಾಗಿವೆ, ಮೊಮ್ಮಗಳು ಫಾತಿಮಾಳ ಎರಡು ಕೈಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ವೀರಾಜಪೇಟೆ ಸರ್ಕಾರಿ ಆಸ್ಪತೆÀ್ರಗೆ ದಾಖಲಿಸಲಾಯಿ ತಾದರೂ, ಅಬ್ದುಲ್ಲಾ ಮೃತರಾಗಿದ್ದಾರೆ ಫಾತಿಮಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತೆÀ್ರಗೆ ದಾಖಲಿಸಲಾಗಿದೆ. ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಕೆ.ಕೆ.ಎಸ್.