ಗೋಣಿಕೊಪ್ಪಲು, ಜ. ೩೧: ರಾಜಕೀಯ ಒಳಬೇಗುದಿಗೆ ಬೇಸತ್ತ ಮಹಿಳೆಯರು ತಮಗೆ ವಹಿಸಿದ್ದ ಕಸ ವಿಲೇವಾರಿಯ ಜವಾಬ್ದಾರಿಯಿಂದ ಹೊರ ಬಂದಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಗೋಣಿ ಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಸರ್ಕಾರದ ಸುತ್ತೋಲೆಯಂತೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಿಗೆ ನಗರದ ಕಸ ವಿಲೇವಾರಿ ಬಗ್ಗೆ ಒಡಂಬಡಿಕೆ ಮಾಡಿಕೊಟ್ಟಿತ್ತು.
ನಂತರದ ದಿನಗಳಲ್ಲಿ ಒಕ್ಕೂಟದ ಮಹಿಳೆಯರು ನಗರದ ಕಸವನ್ನು ವಿಂಗಡಿಸಿ, ಹಸಿಕಸ ಹಾಗೂ ಒಣ ಕಸವನ್ನು ಅಂಗಡಿ ಮುಂಗಟ್ಟು ಸೇರಿದಂತೆ ಪ್ರತಿ ಮನೆಗಳಿಂದ ಸಂಗ್ರಹಿಸಿ ಅದನ್ನು ಗ್ರಾಮ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ವಿಂಗಡಿಸಿ ನಂತರ ಮೈಸೂರಿಗೆ ಸಾಗಿಸುತ್ತಿದ್ದರು.
ಪ್ರತಿನಿತ್ಯ ಹಲವಾರು ಮಹಿಳೆಯರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಕಂಡುಕೊAಡಿದ್ದರು.
ವರ್ತಕರಿAದ ಹಾಗೂ ಮನೆಗಳಿಂದ ಪಂಚಾಯಿತಿ ನಿಗದಿಪಡಿಸಿದ ಹಣವನ್ನು ಮಹಿಳೆಯರು ಸಂಗ್ರಹಿಸಿ, ಅದರಿಂದ ಮಾಸಿಕ ವೇತನ ಸೇರಿದಂತೆ ಇನ್ನಿತರ ಖರ್ಚುಗಳನ್ನು ನಿಭಾಯಿಸುತ್ತಿದ್ದರು.
ಪ್ರತಿ ತಿಂಗಳು ವರ್ತಕರಿಂದ ಹಾಗೂ ಮನೆಗಳಿಂದ ಸಂಗ್ರಹವಾಗುವ ಹಣದ ಲೆಕ್ಕಾಚಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಲೆಕ್ಕಾಪತ್ರ ಸಲ್ಲಿಸಿ, ಸಹಿ ಪಡೆಯುತ್ತಿದ್ದರು.
ದಿನಗಳು ಕಳೆಯುತ್ತಿದ್ದಂತೆಯೇ ಆಡಳಿತ ಮಂಡಳಿಯ ಕೆಲ ಸದಸ್ಯರು ಕಸ ವಿಲೇವಾರಿ ವಿಚಾರದಲ್ಲಿ ತಗಾದೆ ತೆಗೆಯಲು ಆರಂಭಿಸಿದರು.
ಕಸ ವಿಲೇವಾರಿಯಲ್ಲಿ ಪಾರದರ್ಶಕತೆ ಕಂಡುಬರುತ್ತಿಲ್ಲ, ತಮಗೆ ವಹಿಸಿದ ಜವಾಬ್ದಾರಿಯಿಂದ ಹಿಂದೆ ಸರಿಯುವಂತೆ ಒತ್ತಾಯ ಮಾಡಲು ಆರಂಭಿಸಿದರು. ಪ್ರತಿ ಸಾಮಾನ್ಯ ಸಭೆಯಲ್ಲಿ ಇದೇ ವಿಚಾರದಲ್ಲಿ ಅನಾವಶ್ಯಕ ಚರ್ಚೆಗಳು ನಡೆಯುತ್ತಿದ್ದವು ಎಂದು ಅಧ್ಯಕ್ಷೆ ಎಂ. ಮಂಜುಳ ತಮ್ಮ ನೋವನ್ನು ತೋಡಿಕೊಂಡರು.
ಇದರಿAದ ಮನನೊಂದ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ನಗರದ ಕಸ ವಿಲೇವಾರಿ ಜವಾಬ್ದಾರಿಯಿಂದ ಹಿಂದೆ ಸರಿಯಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಈ ಬಗ್ಗೆ ನಗರದ ಸ್ತಿçà ಶಕ್ತಿ ಸಭಾಂಗಣದಲ್ಲಿ ಸಭೆ ಸೇರಿದ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಅಧ್ಯಕ್ಷೆ ಎಂ. ಮಂಜುಳ ಅಧ್ಯಕ್ಷತೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಂಡರು.
ಸರ್ಕಾರದ ಸುತ್ತೋಲೆಯಂತೆ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವ ಸಲುವಾಗಿ ಇಂತಹ ಕೆಲಸವನ್ನು ಸಂಜೀವಿನಿ ಒಕ್ಕೂಟ ಮೂಲಕ ನೀಡಲು ಮುಂದಾಗಿದ್ದರೂ ಕೆಲವು ಪಂಚಾಯಿತಿ ಸದಸ್ಯರು ಈ ವಿಷಯದಲ್ಲಿ ರಾಜಕೀಯ ತಂದು ಮಹಿಳೆಯರಿಗೆ ಅನ್ಯಾಯ ಮಾಡಿರುವುದನ್ನು ಖಂಡಿಸಿದರು.
ಅಲ್ಲದೇ ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತರುವಂತೆ ನಿರ್ಣಯ ಕೈಗೊಳ್ಳಲಾಯಿತು.
ಇನ್ನು ಮುಂದೆ ಸಂಜೀವಿನಿ ಒಕ್ಕೂಟದ ಮಹಿಳೆಯರು ನಗರದ ವರ್ತಕರು ಹಾಗೂ ಮನೆಯವರಿಂದ ಯಾವುದೇ ಮಾಸಿಕ ಶುಲ್ಕ ವಸೂಲಾತಿಗೆ ಆಗಮಿಸುವುದಿಲ್ಲ. ಸಂಜೀವಿನಿ ಒಕ್ಕೂಟದ ಹೆಸರನ್ನು ದುರ್ಬಳಕೆ ಮಾಡಿಕೊಂಡ ಘಟನೆ ಕಂಡುಬAದಲ್ಲಿ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಸಂಜೀವಿನಿ ಒಕ್ಕೂಟದ ಸದಸ್ಯರು, ಎಲ್.ಸಿ.ಆರ್.ಪಿ. ವರಲಕ್ಷಿö್ಮ ಮಾತನಾಡಿ, ಮುಂದಿನ ದಿನದಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಉತ್ಪಾದನೆ ಮಾಡುವ ವಸ್ತುಗಳನ್ನು ಮಾರುಕಟ್ಟೆ ಮಾಡುವ ಮೂಲಕ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯ ಸಹಯೋಗದೊಂದಿಗೆ ಮಹಿಳೆಯರಿಗೆ ತರಬೆೆÃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತನ್ಸಿಯಾ ಲೆಕ್ಕಪತ್ರ ಮಂಡಿಸಿ, ಸಭೆಯ ಒಪ್ಪಿಗೆ ಪಡೆದರು. ಮುಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಅಂಗಮ್ಮ, ಖಜಾಂಜಿ ಲತಾ, ಸಹ ಕಾರ್ಯದರ್ಶಿ ಸೌಮ್ಯ, ಸದಸ್ಯರಾದ ಧನಲಕ್ಷಿö್ಮ ಶಶಿಕಲಾ, ಗೌರಿ, ರಮ್ಯ, ಆಯಿಷಾ, ಪ್ರಿಯಾ ದಿಲೀಪ್, ಶಶಿ, ಲಕ್ಷಿö್ಮ ಮುಂತಾದ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.