
ಹೆಚ್.ಜೆ. ರಾಕೇಶ್ ಮಡಿಕೇರಿ, ಜ. ೩೧: ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ, ಇರುವ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಅಸಮಾಧಾನದ ನಡುವೆ ಇದೀಗ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಆರಂಭಿಸಲು ಅನುಮತಿ ದೊರೆತಿದ್ದು, ಇದು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾಗಿರಲಿದೆ. ಇದರಿಂದ ರೋಗಿಗಳಿಗೂ ಸಹಾಯವಾಗಲಿದೆ ಎಂಬ ನಿರೀಕ್ಷೆಗಳು ಚಿಗುರೊಡೆದಿದೆ.
ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಮೆಡಿಕಲ್ ಕಾಲೇಜು) ೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರಾರಂಭಿಸಲು ರಾಷ್ಟಿçÃಯ ವೈದ್ಯಕೀಯ ಪರಿಷತ್ ಪರಿವೀಕ್ಷಣೆ ನಡೆಸಿದ್ದು, ಭಾರತ ಸರಕಾರ ಕೂಡ ಇದಕ್ಕೆ ಹಸಿರು ನಿಶಾನೆ ನೀಡಿದೆ. ಇದರಿಂದ ಕೊಡಗಿನ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ. ಈ ವರ್ಷವೇ ಈ ತರಬೇತಿಗೆ ಚಾಲನೆ ದೊರೆಯಲಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ೨೦೧೬ರಲ್ಲಿ ಪ್ರಾರಂಭವಾಗಿ ೧೫೦ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ವಾರ್ಷಿಕ ದಾಖಲಾತಿಯೊಂದಿಗೆ ಒಟ್ಟು ೭೫೦ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪ್ಯಾರಮೆಡಿಕಲ್, ಸಿಪಿಎಸ್, ಬಿಎಸ್ಸಿ ನರ್ಸಿಂಗ್, ಇಗ್ನೋ ಸ್ಟಡಿ ಸೆಂಟರ್ ಕೋರ್ಸ್ ಕೂಡ ಇಲ್ಲಿ ಲಭ್ಯವಿದೆ. ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದು, ನೂತನವಾಗಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಸೇರ್ಪಡೆಯಾಗಿದೆ.
ಸರಕಾರಿ ಸೀಟುಗಳು: ಮೆಡಿಕಲ್ ಕಾಲೇಜಿನಲ್ಲಿ ಆರಂಭಗೊAಡಿರುವ ಮೂರು ವರ್ಷಗಳ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ಗಳಿಗೆ ೨೫ ಸೀಟುಗಳು ಮಂಜೂರಾಗಿವೆ.
ಪ್ರಸೂತಿ ಮತ್ತು ಸ್ತಿçà ರೋಗ ವಿಭಾಗಕ್ಕೆ ೬, ಮೈಕ್ರೋಬಯಾಲಜಿ ವಿಭಾಗಕ್ಕೆ ೪, ಅನಾಟಮಿ ವಿಭಾಗಕ್ಕೆ ೩,
(ಮೊದಲ ಪುಟದಿಂದ) ಔಷಧ ಶಾಸ್ತç ವಿಭಾಗಕ್ಕೆ ೪, ಶರೀರ ಕ್ರಿಯಾ ಶಾಸ್ತç ವಿಭಾಗಕ್ಕೆ ೪, ಬಯೋಕೆಮೆಸ್ಟಿç ವಿಭಾಗಕ್ಕೆ ೪ ಸೇರಿದಂತೆ ಒಟ್ಟು ೨೫ ಸೀಟುಗಳು ಮಂಜೂರಾಗಿವೆೆ. ಎಂ.ಬಿ.ಬಿ.ಎಸ್. ಮುಗಿಸಿದ ವಿದ್ಯಾರ್ಥಿಗಳಿಗೆ ಈ ಸೀಟುಗಳು ಲಭ್ಯವಾಗಲಿವೆÉ. ಈ ಸೀಟುಗಳು ಸಂಪೂರ್ಣ ಸರ್ಕಾರಿ ಕೋಟಾದಾಗಿದೆ. ಅಖಿಲ ಭಾರತ ಕೋಟಾ ೫೦% ಹಾಗೂ ಕರ್ನಾಟಕ ಕೋಟಾ ೫೦% ಎಂದು ವಿಂಗಡಿಸಲಾಗಿದ್ದು, ಕರ್ನಾಟಕ ಕೋಟಾ ಸೀಟುಗಳಿಗೆ ಕೌನ್ಸಿಲಿಂಗ್ ಕೂಡ ಪ್ರಾರಂಭಿಸಲಾಗಿದೆ.
ರೋಗಿಗಳಿಗೆ ವರದಾನ
ಸ್ನಾತಕೋತ್ತರ ಕೋರ್ಸ್ ಆರಂಭದಿAದ ಜಿಲ್ಲಾಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸಹಾಯವಾಗಲಿದೆ. ೨೫ ಸೀಟುಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗುವುದರಿಂದ ಇವರುಗಳೇ ಕೋರ್ಸ್ ಮುಗಿಯುವ ತನಕ ವೈದ್ಯರಾಗಿಯೂ ಸೇವೆ ನೀಡಲಿದ್ದಾರೆ.
ಎಂ.ಬಿ.ಬಿ.ಎಸ್. ಮುಗಿಸಿ ತರಬೇತಿ ಹೊಂದಿ ಉನ್ನತ್ತ ಶಿಕ್ಷಣಕ್ಕಾಗಿ ಸ್ನಾತಕೋತ್ತರ ಕೋರ್ಸ್ಗಳನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುತ್ತಾರೆ. ಇದರಿಂದ ಜಿಲ್ಲಾಸ್ಪತ್ರೆಗೆ ಹೆಚ್ಚುವರಿಯಾಗಿ ೨೫ ವೈದ್ಯರು ಲಭ್ಯವಿರುತ್ತಾರೆ. ಇವರುಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಅರ್ಹರಾಗಿರುತ್ತಾರೆ. ಮುಂದಿನ ವರ್ಷಕ್ಕೆ ಹೆಚ್ಚುವರಿಯಾಗಿ ಮತ್ತೇ ೨೫ ವೈದ್ಯರು ದೊರಕಲಿದ್ದು, ಮೂರು ವರ್ಷಗಳ ಬಳಿಕ ೭೫ ವೈದ್ಯರ ಸೇವೆ ಜಿಲ್ಲಾಸ್ಪತ್ರೆಗೆ ಸಿಗಲಿದೆ.
ಉದಾಹರಣೆಗೆ ಕೋರ್ಸ್ಗಳು ಮೂರು ವರ್ಷಗಳಾಗಿದ್ದು, ಸ್ತಿçà ಮತ್ತು ಪ್ರಸೂತಿ ರೋಗ ವಿಭಾಗದಲ್ಲಿ ವರ್ಷಕ್ಕೆ ೬ ಸೀಟುಗಳಂತೆ ಮೂರು ವರ್ಷಗಳಲ್ಲಿ ೧೮ ಸ್ತಿçà ಮತ್ತು ಪ್ರಸೂತಿ ವೈದ್ಯರು ವಿಭಾಗದಲ್ಲಿರುತ್ತಾರೆ. ಇದೇ ರೀತಿ ಕೋರ್ಸ್ಗಳಿರುವ ಎಲ್ಲಾ ವಿಭಾಗದಲ್ಲೂ ವೈದ್ಯರು ನಿರಂತರವಾಗಿ ಲಭ್ಯವಿರುತ್ತಾರೆ. ಜೊತೆಗೆ ತರಬೇತಿಗೆ ಗ್ರಾಮೀಣ ಆಸ್ಪತ್ರೆಗಳಲ್ಲಿಯೂ ತೊಡಗಿಸಿಕೊಳ್ಳಲಿದ್ದು, ಇದು ರೋಗಿಗಳಿಗೆ ವರದಾನವಾಗಿ ಜಿಲ್ಲೆಯಲ್ಲಿ ವೈದ್ಯರ ಕೊರತೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ. ಜೊತೆಗೆ ಕೊರೊನಾ ಪರಿಸ್ಥಿತಿಯಲ್ಲಿಯೂ ವೈದ್ಯರ ಸೇವೆ ದೊರಕುವ ಆಶಾಭಾವನೆ ಇದೆ.