ಸೋಮವಾರಪೇಟೆ, ಜ.೩೧: ಕಳೆದ ೨೦೧೩ರಲ್ಲಿ ಭೂಮಿಪೂಜೆ ನೆರವೇರಿದ್ದರೂ ಇಂದಿಗೂ ಪೂರ್ಣಗೊಳ್ಳದ ಸೋಮವಾರಪೇಟೆ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಸಂಬAಧಿಸಿದAತೆ ಜಿಲ್ಲಾಡಳಿತ ಪ್ರತಿಕ್ರಿಯೆ ನೀಡಿದೆ.
೪ ಕೋಟಿಗೂ ಅಧಿಕ ವೆಚ್ಚದ ಯೋಜನೆಯೊಂದು ಹಳ್ಳ ಹಿಡಿಯುತ್ತಿರುವ ಬಗ್ಗೆ ತಾ. ೩೧ರ ‘ಶಕ್ತಿ’ಯಲ್ಲಿ ಬೆಳಕು ಚೆಲ್ಲಿದ ಹಿನ್ನೆಲೆ, ಟರ್ಫ್ಗೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳು, ಶಾಸಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಣೆ ಒದಗಿಸಲಾಗಿದೆ.
ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟರ್ಫ್ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಿದ್ದು, ಕಾಮಗಾರಿಯ ಪ್ರಗತಿಯ ಬಗ್ಗೆ ಅಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ಮೈದಾನ ಸೇರಿದಂತೆ ಇತರ ಸೌಲಭ್ಯ ಒದಗಿಸಲು ರೂ. ೪೩೪.೪೨ ಲಕ್ಷಗಳಿಗೆ ಟೆಂಡರ್ ಆಗಿದ್ದು, ೨೦೧೯ರಲ್ಲಿ ಗ್ರೇಟ್ ಸ್ಫೋಟ್ಸ್ ಇನ್ ಫ್ರಾ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಕಾಮಗಾರಿಯನ್ನು ಇಲಾಖೆಯ ಕೇಂದ್ರ ಕಚೇರಿಯಿಂದಲೇ ನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಹೆಚ್ಚಿನ ಮಾಹಿತಿಯಿಲ್ಲ. ಕಾಮಗಾರಿಯ ಮೂಲ ಅಂದಾಜುಪಟ್ಟಿ ನೀಡುವಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ಟರ್ಫ್ ಕಾಮಗಾರಿ ಈವರೆಗೆ ಮುಕ್ತಾ ಯವಾಗಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ)
ಮೇಲುಸ್ತುವಾರಿ ಸಮಿತಿ ಸದಸ್ಯರು ಮಾಹಿತಿ ನೀಡಿ, ವಾಟರ್ ಟ್ಯಾಂಕ್ ಹಾಗೂ ಮೋಟಾರ್ ರೂಂ, ಫೆನ್ಸಿಂಗ್, ವಾಕಿಂಗ್ ಪಾತ್, ಔಟ್‌ಲೆಟ್ ಕಾಮಗಾರಿ, ವಿದ್ಯುತ್ ಕೆಲಸ, ಪೈಪ್ ಅಳವಡಿಕೆ, ಚರಂಡಿಗೆ ಸ್ಲಾö್ಯಬ್, ಗೋಲ್‌ಪೋಸ್ಟ್ ಸೇರಿದಂತೆ ಇತರ ಕಾಮಗಾರಿ ಬಾಕಿಯಿರುವ ಬಗ್ಗೆ ಸಭೆಯ ಗಮನಕ್ಕೆ ತಂದಿದ್ದಾರೆ.
ಅಪೂರ್ಣ ಕಾಮಗಾರಿಗಳನ್ನು ತುರ್ತಾಗಿ ಮುಕ್ತಾಯಗೊಳಿಸಲು ಕ್ರಮ ವಹಿಸುವಂತೆ ಕೋರಿ, ರಾಜ್ಯ ಕ್ರೀಡಾ ಸಚಿವರಿಗೆ ಶಾಸಕರ ಮುಖಾಂತರ ಪತ್ರ ಬರೆಯಲು ಹಾಗೂ ಆ ಪತ್ರದ ಪ್ರತಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಲಾಖಾ ಆಯುಕ್ತರಿಗೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಇಲಾಖಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಕಾಮಗಾರಿಯ ಯೋಜನಾ ಪಟ್ಟಿ, ಯಾವೆಲ್ಲಾ ಕಾಮಗಾರಿ ಒಳಗೊಂಡಿದೆ. ಎಷ್ಟು ಕಾಮಗಾರಿ ಮುಕ್ತಾಯವಾಗಿದೆ. ಉಳಿಕೆಯಾಗಿರುವ ಕಾಮಗಾರಿಗಳ ವಿವರ, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ, ಗುತ್ತಿಗೆದಾರ ಪಡೆದುಕೊಂಡಿರುವ ಅನುದಾನ, ಉಳಿಕೆ ಅನುದಾನದ ಬಗ್ಗೆ ಕೇಂದ್ರ ಕಚೇರಿಯಿಂದ ಸಮಗ್ರ ಮಾಹಿತಿ ತರಿಸಿಕೊಂಡು, ಇಂಜಿನಿಯರ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಖುದ್ದು ಸಲ್ಲಿಸುವಂತೆ ಸೂಚಿಸಿದ್ದಾರೆ.
ಇದರೊಂದಿಗೆ ಮೈದಾನಕ್ಕೆ ಅಳವಡಿಸಿರುವ ನೀರು ಸಿಂಪಡಣಾ ಜೆಟ್ ಸಮರ್ಪಕವಾಗಿಲ್ಲ ಎಂಬ ಮಾಹಿತಿ ಇದ್ದು, ಇದನ್ನು ಬದಲಾವಣೆ ಮಾಡುವ ಬಗ್ಗೆ ಗುತ್ತಿಗೆದಾರರು ಹಾಗೂ ಕೇಂದ್ರ ಕಚೇರಿಯೊಂದಿಗೆ ಚರ್ಚಿಸಲು ಇಲಾಖೆಯ ಅಧಿಕಾರಿಗೆ ತಿಳಿಸಲಾಗಿದೆ.
ಟರ್ಫ್ ಕ್ರೀಡಾಂಗಣ ತಡೆಗೋಡೆ ನಿರ್ಮಾಣಕ್ಕೆ ೬೫ ಲಕ್ಷ, ಫ್ಲಡ್‌ಲೈಟ್ ಅಳವಡಿಕೆಗೆ ೨೦ಲಕ್ಷ, ಗ್ಯಾಲರಿಗೆ ಅಲ್ಯೂಮಿನಿಯಂ ಛಾವಣಿ ಅಳವಡಿಕೆ, ವಿದ್ಯುತ್ ನವೀಕರಣ, ಸುಣ್ಣಬಣ್ಣ ಬಳಿಯುವ ಕಾಮಗಾರಿಗೆ ೧೫ ಲಕ್ಷ, ಟರ್ಫ್ ಮೈದಾನಕ್ಕೆ ಧೂಳು ಬಾರದಂತೆ ತಡೆಗಟ್ಟಲು ಅಲ್ಯೂಮಿನಿಯಂ ಶೀಟ್ ಅಳವಡಿಕೆಗೆ ೮ ಲಕ್ಷ ಅನುದಾನದ ಅಗತ್ಯವಿದೆ ಎಂದು ಇಲಾಖಾಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.
ಮೈದಾನದ ಹೆಚ್ಚುವರಿ ಕಾಮಗಾರಿಗಳನ್ನು ಪಟ್ಟಿಮಾಡಿ, ಅಂದಾಜು ಪಟ್ಟಿ ತಯಾರಿಸಿ ಶಾಸಕರ ಶಿಫಾರಸ್ಸಿನೊಂದಿಗೆ ಕೇಂದ್ರ ಕಚೇರಿಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಇನ್ನಾದರೂ ಶೀಘ್ರವಾಗಿ ಸಿಂಥೆಟಿಕ್ ಹಾಕಿ ಮೈದಾನದ ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.