ರಫೀಕ್ ತೂಚಮಕೇರಿ
ಪೊನ್ನಂಪೇಟೆ, ಜ.೩೧: ಕೊಡಗು ಮತ್ತು ಕೇರಳದ ಕಣ್ಣೂರು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಮಾರ್ಗವಾದ ಮಾಕುಟ್ಟ- ಇರಿಟಿ ರಸ್ತೆಯ ಉಭಯ ರಾಜ್ಯಗಳ ಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೂಟುಹೊಳೆ ಸೇತುವೆಯನ್ನು ಸೋಮವಾರದಂದು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು. ಇದರಿಂದ ಉಭಯ ರಾಜ್ಯಗಳ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕೇರಳ ಸರ್ಕಾರದ ಲೋಕೋಪ ಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾದ ಮೊಹಮ್ಮದ್ ರಿಯಾಜ್ಹ್ ಅವರ ನೇತೃತ್ವದಲ್ಲಿ ಇರಿಟಿ ಶಾಸಕರಾದ ಸನ್ನಿ ಜೋಸೆಫ್, ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರು ತೆರೆದ ವಾಹನದಲ್ಲಿ ಸರಳ ಮೆರವಣಿಗೆ ಯೊಂದಿಗೆ ನೂತನ ಸೇತುವೆಯ ಮೂಲಕ ಕೇರಳ ಗಡಿಯಿಂದ ಕರ್ನಾಟಕ ಗಡಿಗೆ ತೆರಳುವುದ ರೊಂದಿಗೆ ರೂ. ೬.೭೫ ಕೋಟಿ ವೆಚ್ಚದಲ್ಲಿ ಕೇರಳ ಸರಕಾರ ನಿರ್ಮಿಸಿದ್ದ ಕೂಟುಹೊಳೆ ಸೇತುವೆ ಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಲೋಕೋಪಯೋಗಿ ಸಚಿವರು ಪಾಲ್ಗೊಂಡಿದ್ದರೂ ಕೋವಿಡ್ ನಿರ್ಬಂಧದಿAದಾಗಿ ಕೇರಳ ಸರಕಾರ ಯಾವುದೇ ಸಾರ್ವಜನಿಕ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇರಿಟಿ ಶಾಸಕರಾದ ಸನ್ನಿ ಜೋಸೆಫ್, ಬಹುಕಾಲದ ಬೇಡಿಕೆಯಾಗಿದ್ದ ಕೂಟುಹೊಳೆ ಸೇತುವೆಯ ಕಾಮಗಾರಿ ಪೂರ್ಣಗೊಳಿಸಲು ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ ಅವರ ಸರಕಾರಿ ಮಟ್ಟದ ಸಹಕಾರವನ್ನು ಶ್ಲಾಘಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸ್ಥಳದಲ್ಲಿದ್ದ ಶಾಸಕ ಕೆ.ಜಿ. ಬೋಪಯ್ಯ ಅವರು, ಕೂಟುಹೊಳೆಯಲ್ಲಿ ನೂತನ ಸೇತುವೆ ನಿರ್ಮಾಣದಿಂದ ಉಭಯ ರಾಜ್ಯದ ಜನರಿಗೆ ಹೆಚ್ಚು ಅನುಕೂಲ ವಾಗಲಿದೆ. ಇದರಿಂದ ಜನತೆಯ ಬಹುಕಾಲದ ಪ್ರಮುಖ ಬೇಡಿಕೆಯೊಂದು ಈಡೇರಿದಂತಾಗಿದೆ. ಅಲ್ಲದೆ, ಕೇರಳ ಮತ್ತು ಕೊಡಗು ಜಿಲ್ಲೆಯ ಸಂಬAಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ)
ಕೇರಳದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಕೇರಳ ರಾಜ್ಯ ಸಾರಿಗೆ ಯೋಜನೆಯ (ಕೆ.ಎಸ್. ಟಿ.ಪಿ.) ಮೂಲಕ ವಿಶ್ವಬ್ಯಾಂಕ್ ನೆರವಿನಲ್ಲಿ ನಿರ್ಮಿಸಲಾದ ಕೂಟುಹೊಳೆ ಸೇತುವೆಯ ಕಾಮಗಾರಿಯನ್ನು ಈಜಿಸ್ ಇಂಡಿಯ ಕನ್ಸಲ್ಟಿಂಗ್ ಎಂಜಿನಿಯರಿAಗ್ ಪ್ರೆöÊವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆ ಪೂರ್ಣಗೊಳಿಸಿದೆ.
ನೂತನ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲಿ ಕೇರಳ ಲೋಕೋಪಯೋಗಿ ಇಲಾಖೆಯ ಕೇರಳ ರಾಜ್ಯ ಸಾರಿಗೆ ಯೋಜನೆ ( ಕೆ. ಎಸ್. ಟಿ. ಪಿ.) ಮುಖ್ಯ ಇಂಜಿನಿಯರ್ ಡಾರ್ಲಿನ್ ಸಿ. ಡೀಕ್ರೂಸ್, ಕಣ್ಣೂರು ಜಿಲ್ಲಾ ಕಾರ್ಯಪಾಲಕ ಅಭಿಯಂತರರಾದ ಶಾಜಿ ತಯ್ಯಿಲ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶೀಲಾ ಚೋರನ್, ಸಹಾಯಕ ಇಂಜಿನಿಯರ್ ಕೆ.ವಿ. ಸತೀಶನ್, ಕಣ್ಣೂರು ಜಿ. ಪಂ. ಸ್ಥಳೀಯ ಕ್ಷೇತ್ರದ ಸದಸ್ಯರಾದ ಬಿನೋಯ್ ಕುರಿಯನ್, ಸ್ಥಳೀಯ ಗ್ರಾ. ಪಂ. ಅಧ್ಯಕ್ಷೆ ಪಿ. ರಜಿನಿ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಸಿ.ಕೆ. ಪ್ರಥ್ವಿನಾಥ್, ಕೊಡಗು ಜಿ. ಪಂ. ಮಾಜಿ ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ, ಮಹೇಶ್, ತಾ. ಪಂ. ಮಾಜಿ ಸದಸ್ಯರಾದ ಗಣೇಶ್, ಕೊಡಗು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಟ್ರಪಂಡ ರಘು ನಾಣಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರರಾದ ಎ. ಎಸ್. ಟಾಟು ಮೊಣ್ಣಪ್ಪ, ಜೆಸಿಐ ಭಾರತದ ಎಸ್.ಎಂ.ಎ. ವಲಯ ಮಂಡಳಿ ಮುಖ್ಯಸ್ಥರಾದ ಮೈಸೂರಿನ ಕೆ.ಎಸ್. ಕುಮಾರ್, ಬಿಜೆಪಿ ಪ್ರಮುಖರಾದ ಜೋಕಿಂ ರಾಡ್ರಿಗಸ್, ಮಲ್ಲಂಡ ಮಧು ದೇವಯ್ಯ, ಬಿಟ್ಟಂಗಾಲ ಗ್ರಾ. ಪಂ. ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷದ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನಾಗರಿಕರು ಹಾಜರಿದ್ದರು.