ಸುಂಟಿಕೊಪ್ಪ, ಜ. ೩೧: ಇಲ್ಲಿನ ಗದ್ದೆಹಳ್ಳದ ಯಾಮಿಟಿ ಯುನೈಟೆಡ್ ಫುಟ್ಬಾಲ್ ಸಂಘದ ವತಿಯಿಂದ ೪ನೇ ವರ್ಷದ ಅಂಗವಾಗಿ ೭೩ನೇ ಗಣರಾಜ್ಯೋತ್ಸವದ ಪ್ರಯುಕ್ತ ಹೊನಲು ಬೆಳಕಿನ ಫುಟ್ಬಾಲ್ ೫+೨ ಪಂದ್ಯಾಟವನ್ನು ನಡೆಸಲಾಯಿತು. ಈ ಪಂದ್ಯಾಟದಲ್ಲಿ ಬೆಂಗಳೂರಿನ ಫ್ರೆಂಡ್ಸ್ ಫುಟ್ಬಾಲ್ ತಂಡವು ಪ್ರಥಮ ಸ್ಥಾನ ಪಡೆದು ರೂ. ೩೦, ೩೩೩ ನಗದು ಬಹುಮಾನ ಪಡೆದು ವಿಜಯದ ನಗೆಬೀರಿತು. ಗದ್ದೆಹಳ್ಳದ ಯಾಮಿಟಿ ಯುನೈಟೆಡ್ ಫುಟ್ಬಾಲ್ ತಂಡವು ದ್ವಿÀ್ವತೀಯ ಸ್ಥಾನ ಪಡೆದು ರೂ. ೨೦, ೨೨೨ ನಗದು ತನ್ನದಾಗಿಸಿಕೊಂಡಿತು.
ತೃತೀಯ ಸ್ಥಾನವನ್ನು ಫ್ರೆಂಡ್ಸ್ ಎಫ್,ಸಿ (ಟ್ರೋಫಿ) ಹಾಗೂ ನಾಲ್ಕನೇ ಸ್ಥಾನವನ್ನು ಶೈನಿಂಗ್ ಬರ್ಡ್ಸ್ ಪಾಲಿಬೆಟ್ಟ (ಟ್ರೋಫಿ) ಪಡೆದುಕೊಂಡಿತು. ಟಾಪ್ ಸ್ಕೋರರ್ ಆಗಿ ಬೆಂಗಳೂರಿನ ಫ್ರೆಂಡ್ಸ್ ಎಫ್,ಸಿ ತಂಡದ ಸೂರ್ಯ, ಬೆಸ್ಟ್ ಗೋಲ್ ಕೀಪರ್ ಆಗಿ ಅದೇ ತಂಡದ ರಂಜಿತ್ ಕುಮಾರ್, ಬೆಸ್ಟ್ ಡಿಫೆಂಡರ್ ಆಗಿ ಯಾಮಿಟಿ ಯುನೈಟೆಡ್ ಫುಟ್ಬಾಲ್ ತಂಡದ ಹ್ಯಾರೀಸ್, ಬೆಸ್ಟ್ ಪ್ಲೇಯರ್ ಆಗಿ ತಂಡದ ರಂಷಾದ್ ಮೋನ್ ಆಯ್ಕೆಯಾದರು. ಪಂದ್ಯಾಟದ ತೀರ್ಪುಗಾರರಾಗಿ ಸುಂಟಿಕೊಪ್ಪದ ರಾನೀತ್ ಅಮ್ಮತ್ತಿಯ ಶೇಷಪ್ಪ ಕಾರ್ಯನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಅಲ್ಪ ಸಂಖ್ಯಾತರ ಅಧ್ಯಕ್ಷ ಎಂ.ಎ. ಉಸ್ಮಾನ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ಕುಮಾರ್, ಜಿನಾಸ್ಸುದ್ದೀನ್, ರಫೀಕ್ ಖಾನ್, ರಾಸಾತಿ, ನಾಗರತ್ನ, ಗೀತ, ಶÀಬ್ಬೀರ್, ಸಂಘದ ಅಧ್ಯಕ್ಷ ಎಂ.ಎ. ರಶೀದ್, ಉಪಾಧ್ಯಕ್ಷ ಸಿದ್ದೀಕ್, ಖಜಾಂಚಿ ಎಂ.ಎA. ಸಿದ್ದಿಕ್, ಕಾರ್ಯದರ್ಶಿ ಎ.ಬಿ. ಫಾಯಸ್, ಸಿದ್ದಿಕ್, ಸಂಘದ ಇರ್ಷಾದ್ ಹಾಜರಿದ್ದರು.