ಮಡಿಕೇರಿ, ಜ. ೩೧: ನಗರದ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಅವಘಡದಲ್ಲಿ ಹಾನಿಗೀಡಾಗಿದ್ದ “ಫೀ.ಮಾ. ಕೆ.ಎಂ. ಕಾರ್ಯಪ್ಪ” ನಾಮಫಲಕವನ್ನು ಮರು ಸ್ಥಾಪಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ದೂರು ದಾರರಾದ ಜಿಲ್ಲಾ ಬಿಜೆಪಿ ಕಾರ್ಯ ಕಾರಿಣಿ ಸದಸ್ಯ ತೇಲಪಂಡ ಶಿವ ಕುಮಾರ್ ನಾಣಯ್ಯ ಹಾಗೂ ಕೊಡಗು ಪೀಪಲ್ಸ್ ಫೋರಂನ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಫಲಕಕ್ಕೆ ಹೂವಿನ ಮಾಲೆ ಹಾಕಿ ಹರ್ಷ ವ್ಯಕ್ತಪಡಿಸಿದರು. ಫೀ.ಮಾ. ಕಾರ್ಯಪ್ಪ ಅವರ ಜನ್ಮದಿನದ ಹಿನ್ನೆಲೆ ಪ್ರತಿಮೆಗೂ ಪುಷ್ಪ ನಮನ ಸಲ್ಲಿಸಿದರು. ಪ್ರಮುಖರಾದ ಒಡಿಯಂಡ ನವೀನ್ ತಿಮ್ಮಯ್ಯ, ಮಾಜಿ ಯೋಧ ಎಸ್. ಸುಧೀರ್ ಮತ್ತಿತರರು ಹಾಜರಿದ್ದು ಕಾರ್ಯಪ್ಪ ಅವರಿಗೆ ಗೌರವ ಅರ್ಪಿಸಿದರು.