ಗೋಣಿಕೊಪ್ಪಲು, ಜ. ೩೧: ಕಳೆದ ಎರಡು ವರ್ಷಗಳಿಂದ ಆಶ್ರಮ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಮಾರ್ಪಡಿ ಸುತ್ತಿರುವುದರಿಂದ ಆದಿವಾಸಿಗಳ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗುತ್ತಿದೆ. ಹೀಗಾಗಿ ಮುಂದೆ ತಿತಿಮತಿ ಆಶ್ರಮ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡದಂತೆ ಜಿಲ್ಲಾಡಳಿತವನ್ನು ಬುಡಕಟ್ಟು ಕೃಷಿಕರ ಸಂಘ ಒತ್ತಾಯಿಸಿದೆ.
ತಿತಿಮತಿ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಡಕಟ್ಟು ಕೃಷಿಕರ ಸಂಘದ ಪ್ರಮುಖರಾದ ಚುಬ್ರು ಮಾತನಾಡಿ, ಬಹುತೇಕ ಆದಿವಾಸಿಗಳ ಮಕ್ಕಳು ಗಿರಿಜನರ ಆಶ್ರಮ ಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಶ್ರಮ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿ ಸುತ್ತಿರುವುದರಿಂದ ಇದೀಗ ಆದಿವಾಸಿಗಳ ಮಕ್ಕಳು ಭಯ ಗೊಂಡು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಇದರಿಂದಾಗಿ ಆದಿವಾಸಿಗಳ ಮಕ್ಕಳು ವಿದ್ಯಾಭ್ಯಾಸ ದಿಂದ ವಂಚಿತ ರಾಗುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ನೇರ ಕಾರಣವೆಂದು ಆರೋಪ ಮಾಡಿದರು.
ಆದಿವಾಸಿಗಳ ಮಕ್ಕಳು ಅಷ್ಟಾಗಿ ಪ್ರಜ್ಞಾವಂತ ಮಕ್ಕಳಲ್ಲ, ಅವರ ಪೋಷಕರು ಕೂಡ ಸಮಾಜದ ಮುಖ್ಯ ವಾಹಿನಿಯಲ್ಲಿ ಇನ್ನೂ
ಗುರುತಿಸಿಕೊಂಡವರಲ್ಲ, ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಕೇಂದ್ರವಾಗಿ ಮಾರ್ಪಾಡು ಮಾಡುತ್ತಿರುವುದರಿಂದ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಆತಂಕ ಹೆಚ್ಚಾಗುತ್ತಿದೆ.
ಶಾಲೆಯಲ್ಲಿ ಕೊರೊನಾ ಸೋಂಕಿನ ವ್ಯಕ್ತಿಗಳು ತಿಂಗಳುಗಟ್ಟಲೆ ತಂಗಿದ್ದರು, ಇದರಿಂದಾಗಿ ನಮ್ಮ ಮಕ್ಕಳು ಶಾಲೆಗೆ ಹೋದಲ್ಲಿ ಮತ್ತೆ ನಮ್ಮ ಮಕ್ಕಳಿಗೆ ಕೊರೊನಾ ಬರಲಿದೆ ಎಂಬ ಭಯ ಇನ್ನೂ ಮರೆಯಾಗಿಲ್ಲ, ಹೀಗಾಗಿ ಆದಿವಾಸಿಗಳ ಮಕ್ಕಳು ಕಲಿಕೆಯಿಂದ ದೂರ ಉಳಿಯು ವಂತಾಗಿದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ತಿತಿಮತಿ ಆಶ್ರಮ
ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಮುಂದಾಗ ಬಾರದು ಒಂದು ವೇಳೆ ಮುಂದಾದಲ್ಲಿ ಜಿಲ್ಲಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಚುಬ್ರು ಎಚ್ಚರಿಕೆ ನೀಡಿದರು.
ಸಂಘದ ಸದಸ್ಯರಾದ ಸಿದ್ದಪ್ಪ ಮಾತನಾಡಿ, ಒಂದೆಡೆ ಆದಿವಾಸಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಾಗಿ ಸರ್ಕಾರ ಘೋಷಣೆ ಮಾಡುತ್ತಿದೆ, ಇನ್ನೊಂದೆಡೆ ಮಕ್ಕಳಿಗೆ ರಜೆ ಘೋಷಣೆ ಮಾಡಿ ಕೊರೊನಾ ಸೆಂಟರ್ ತೆರೆಯುತ್ತಿದೆ, ಇದರಿಂದಾಗಿ ಶಾಲೆಗೆ ಮಕ್ಕಳು ತೆರಳಲು ಹಿಂದೇಟು ಹಾಕುತ್ತಿದ್ದಾರೆ, ಹೆತ್ತವರೊಂದಿಗೆ ತೋಟದಲ್ಲಿ ಕೂಲಿ ಕೆಲಸ ಮಾಡಲು ಮುಂದಾಗುತ್ತಿದ್ದಾರೆ, ಕೋವಿಡ್ ಕೇರ್ ಸೆಂಟರ್ ತೆರೆಯಲು ಆಶ್ರಮ ಶಾಲೆಗಳು ಬಿಟ್ಟು ಬೇರೆ ಜಾಗವಿಲ್ಲವೇ.? ಎಂದು ಪ್ರಶ್ನಿಸಿದರು.
ಲ್ಯಾಂಪ್ ಸೊಸೈಟಿ ಅಧ್ಯಕ್ಷ ಮಣಿಕುಂಞ ಮಾತನಾಡಿ, ದಕ್ಷಿಣ ಕೊಡಗಿನ ವಿವಿಧ ಭಾಗದ ಲೈನ್ ಮನೆಯಲ್ಲಿ ವಾಸವಿರುವ ಹಾಗೂ ಕಾಲೋನಿಗಳಲ್ಲಿ ವಾಸವಿರುವ ಆದಿವಾಸಿಗಳ ಮಕ್ಕಳು ತಿತಿಮತಿ ಆಶ್ರಮ ಶಾಲೆಯನ್ನು ಅವಲಂಬಿಸಿ ದ್ದಾರೆ, ಇವರ ವಿದ್ಯಾಭ್ಯಾಸ ಮಟ್ಟ ಸುಧಾರಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ, ಕೋವಿಡ್ ಕೇರ್ ಸೆಂಟರ್ ಮಾಡುವುದರಿಂದ ಆದಿವಾಸಿಗಳ ಮಕ್ಕಳ ಕಲಿಕಾಮಟ್ಟ ಸುಧಾರಣೆ ಕಾಣಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ತಿತಿಮತಿ ಆಶ್ರಮ ಶಾಲೆಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಬಾರದೆಂದರು. ಗೋಷ್ಠಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಸದಸ್ಯರಾದ ಜೆ.ಆರ್. ಪುಷ್ಪ, ಜೆ.ಸಿ. ಶಾಂತಮ್ಮ, ಜೆ.ಕೆ. ರಾಜು, ಪಿ.ಜೆ. ಮಲ್ಲಪ್ಪ, ಪಿ.ಸಿ. ಸುಬ್ಬ ಉಪಸ್ಥಿತರಿದ್ದರು.