ಮಡಿಕೇರಿ, ಜ. ೩೧: ಕಲ್ಲಕೆರೆ ಮಾದೇವಿ ಜೀವನ ಆಧಾರಿತ ಕೊಡವ ಸಿನಿಮಾದ ಮುಹೂರ್ತ ಚೆಯ್ಯಂಡಾಣೆಯ ಕೊಡವ ಸಮಾಜದಲ್ಲಿ ನಡೆಯಿತು.

ಕೊಡಗಿನ ಸಿನಿಮಾ ನಿರ್ಮಾಣ ಸಂಸ್ಥೆಯಾದ ಪಿ & ಜಿ ಕ್ರಿಯೇಶನ್ ನಿರ್ಮಾಣದಲ್ಲಿ ಅಚ್ಚೆಯಡ ಗಗನ್ ಗಣಪತಿ ಹಾಗೂ ಬಾಳೆಯಡ ಪ್ರತೀಶ್ ಪೂವಯ್ಯ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರ ೬೦೦ ವರ್ಷಗಳ ಹಿಂದೆ ನಡೆದ ಘಟನೆಯನ್ನು ಆಧರಿಸಿದೆ. ಈ ಚಿತ್ರದ ಮೂಲಕ ಕೊಡಗಿನ ಪಾರಂಪರಿಕ ವಾದ್ಯವಾದ ‘ದುಡಿ’ಯ ಮಹತ್ವವನ್ನು ಸಾರಲಾಗುತ್ತದೆ. ಚಿತ್ರದ ಕಥಾ ಸಾರವನ್ನ ‘ಪಟ್ಟೋಳೆ ಪಳಮೆ’ಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಕೊಡಗಿನ ಕಲಾವಿದರನ್ನೆ ಬಳಸಿಕೊಂಡು ಚಿತ್ರ ತಯಾರಾಗಲಿದೆ.

ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಕಲ್ಲಕೆರೆ ಮಾದೇವಿಯ ಪಾತ್ರದಲ್ಲಿ ನಟಿ ದೆಸ್ನಾ ದೇಚಮ್ಮ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ಚೆರುವಾಳಂಡ ರಾಕೇಶ್ ಕಲ್ಲಕೆರೆಯ ರಾಜ ಅಪ್ಪಯ್ಯನ ಪಾತ್ರ ನಿರ್ವಹಿಸಲಿ ದ್ದಾರೆ. ಉಳಿದಂತೆ ಮುಂಡಚಾಡೀರ ರಿನಿ ಭರತ್, ಕೊಂಗAಡ ವದನ್ ಇನ್ನಿತರರು ನಟಿಸಲಿದ್ದಾರೆ, ಮೈಸೂರಿನ ಅನಿಲ್ ರಾಜ್ ಛಾಯಾಗ್ರಹಣ, ಮೇಕಪ್ ಮ್ಯಾನ್ ಆಗಿ ಪ್ರಕಾಶ್ ಹಾಗೂ ಕಲಾ ನಿರ್ದೇಶಕರಾಗಿ ವೀರಾಜಪೇಟೆಯ ಸಾಧಿಕ್ ಕಾರ್ಯನಿರ್ವಹಿಸಲಿದ್ದಾರೆ.

ಚಿತ್ರದ ನಿರ್ಮಾಪಕರಾಗಿ ಪಟ್ಟಡ ರೀನಾ ಪ್ರಕಾಶ್, ಕೊಣಿಯಂಡ ಕಾವ್ಯ, ಪೊನ್ನಂಪೇಟೆಯ ಉಮೇಶ್, ತೇಲಪಂಡ ಶಿವಕುಮಾರ್, ಅಪ್ಪಚೆಟ್ಟೋಳಂಡ ಮುತ್ತಪ್ಪ, ಮಂಡೆಪAಡ ಸುನೀಲ್ ಸುಬ್ರಮಣಿ, ಸೇರಿದಂತೆ ಪ್ರಮುಖರು ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.