ಮಡಿಕೇರಿ, ಜ. ೩೧: ನಗರದ ಬದ್ರಿಯಾ ಜಮಾಅತ್ ಸಮಿತಿ ವತಿಯಿಂದ ಮದರಸ ನೂತನ ಕಟ್ಟಡ ನಿರ್ಮಾಣದ ಕಾರ್ಯವನ್ನು ಕೈಗೊಳ್ಳಲಾಗಿದ್ದು, ತಾ. ೬ ರಂದು ಬೆಳಿಗ್ಗೆ ೯ ಗಂಟೆಗೆ ಮದರಸ ಕಟ್ಟಡದ ಶಿಲನ್ಯಾಸ ನಡೆಯಲಿದೆ ಎಂದು ಬದ್ರಿಯಾ ಜಮಾಅತ್ ಅಧ್ಯಕ್ಷ ಅಮೀನ್ ಮೊಹ್ಸಿನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಪಖಾಝಿ ಶೈಖುನಾ ಎಂ. ಅಬ್ದುಲ್ಲ ಫೈಝಿ ಎಡಪಾಲ, ಶಾದುಲಿ ಫೈಝಿ ಕೊಂಡAಗೇರಿ, ಜನಾಬ್ ಸಿದ್ದೀಖ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.