ಹೆಬ್ಬಾಲೆ, ಜ. ೩೦: ಕೆನರಾ ಬ್ಯಾಂಕ್ ಸಂಸ್ಥಾಪಕ ಸುಬ್ಬರಾವ್ ಪೈ ಜ್ಞಾಪಕಾರ್ಥವಾಗಿ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ವರ್ಗದ ಹೆಣ್ಣು ಮಕ್ಕಳಿಗೆ ಉಚಿತ ಪ್ರೋತ್ಸಾಹ ದಾಯಕ ವಿದ್ಯಾರ್ಥಿ ವೇತನವನ್ನು ಹೆಬ್ಬಾಲೆ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಜೇಶ್ ಕೆ. ಅವರು ವಿತರಿಸಿದರು. ಖಾಸಗಿ ಶಾಲಾ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಓದಿ ತಂದೆ-ತಾಯಿಗಳಿಗೆ ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ವಹಿಸಿದ್ದರು. ವೇದಿಕೆಯಲ್ಲಿ ಕೆನರಾ ಬ್ಯಾಂಕಿನ ಸಹಾಯಕ ಶಾಖಾ ವ್ಯವಸ್ಥಾಪಕ ಮುತ್ತುರಾಜು, ಶಿಕ್ಷಕರುಗಳಾದ ಎಸ್. ಜಾನಕಿ, ಹೆಚ್.ಈ. ರಮೇಶ್, ಬಬಿತಾ, ಪುಷ್ಪಾವತಿ, ಭಾಗ್ಯ ಉಪಸ್ಥಿತರಿದ್ದರು. ಪುಷ್ಪಾವತಿ ಸ್ವಾಗತಿಸಿ, ವಂದಿಸಿದರು.