ಮಡಿಕೇರಿ, ಜ.೩೦ : ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ರಾಷ್ಟಿçÃಯ ಸಹಾಯವಾಣಿ ಕೇಂದ್ರವು ಸ್ಥಾಪನೆಯಾಗಿದ್ದು, ಇದರಲ್ಲಿ ಹಿರಿಯ ನಾಗರಿಕರು ಅನುಭವಿಸುತ್ತಿರುವ ತೊಂದರೆಗಳಾದ ಒಂಟಿತನ, ಭಾವನಾತ್ಮಕ ಖಿನ್ನತೆ, ಪಿಂಚಣಿಗೆ ಸಂಬAಧಿಸಿದ ಸಮಸ್ಯೆ, ನಿಂದನೆಯ ಸಮಸ್ಯೆಗಳು ಹಾಗೂ ಕಾನೂನಿನ ಸೇವೆಗಳು ಮತ್ತು ಅಗತ್ಯ ಮಾಹಿತಿಗಳಾದ ಪಾಲನೆ, ಪೋಷಣೆ, ಕೊವಿಡ್ಗೆ ಸಂಬAಧಿಸಿದ ಮಾಹಿತಿ, ಆಸ್ಪತ್ರೆಗಳ ಮಾಹಿತಿ, ವೃದ್ಧಾಶ್ರಮಗಳ ಮಾಹಿತಿ ಮುಂತಾದವುಗಳನ್ನು ಹಿರಿಯ ನಾಗರಿಕರು ಟೋಲ್ ಫ್ರೀ ಸಂಖ್ಯೆ ೧೪೫೬೭ಕ್ಕೆ ಕರೆ ಮಾಡುವುದರ ಮೂಲಕ ಉಚಿತ ಸೇವೆ ಪಡೆದುಕೊಳ್ಳಬಹುದು.
ಇಲ್ಲಿ ಸಲಹೆಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೂಚನೆ, ಸಲಹೆ, ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾರೆ. ಅಲ್ಲದೆ ಕೊವಿ ಡ್ ೩ನೇ ಅಲೆ ತ್ವರಿತಗತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಆರೈಕೆ ಹಾಗೂ ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲಾ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಟೋಲ್ ಫ್ರೀ ಸಂಖ್ಯೆ ೧೪೫೬೭ ಕ್ಕೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ಅವರು ತಿಳಿಸಿದ್ದಾರೆ.