ಗೋಣಿಕೊಪ್ಪಲು, ಜ. ೩೦: ಬೇಗೂರುಕೊಲ್ಲಿ, ಹುದಿಕೇರಿ - ಟಿ. ಶೆಟ್ಟಿಗೇರಿ ಮುಖ್ಯ ರಸ್ತೆಯ ದುರಸ್ತಿ ಹಾಗೂ ಮರು ಡಾಂಬರೀಕರಣ ಪೂರ್ಣಗೊಂಡಿದೆ. ನಾಗರಿಕರ ಬಹು ಬೇಡಿಕೆಯಾಗಿದ್ದ ಈ ರಸ್ತೆಯ ದುರಸ್ತಿ ಹಾಗೂ ಮರು ಡಾಂಬರಿಕರಣಕ್ಕಾಗಿ ಶಾಸಕ ಕೆ.ಜಿ. ಬೋಪಯ್ಯ ಪ್ರಯತ್ನದಿಂದ ರೂ. ೨ ಕೋಟಿ ಅನುದಾನವನ್ನು ಬಿಡುಗಡೆಗೊಂಡಿತ್ತು.
ರಸ್ತೆ ಉದ್ಘಾಟನೆ ಮಾಡಿದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ತಾಲೂಕಿನ ವಿವಿಧ ಭಾಗದ ಮುಖ್ಯ ರಸ್ತೆಗಳು ಕೂಡ ಮರು ಡಾಂಬರಿಕರಣವಾಗಲಿದೆ ಎಂದರು. ಹಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ಪೊನ್ನಂಪೇಟೆ - ಕಿರುಗೂರು ಮುಖ್ಯ ರಸ್ತೆ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳುವಂತೆ ಗುತ್ತಿಗೆದಾರರಿಗೆ ಶಾಸಕ ಕೆ.ಜಿ. ಬೋಪಯ್ಯ ನಿರ್ದೇಶನ ನೀಡಿದರು. ಹುದಿಕೇರಿ ಭಾಗದ ರಸ್ತೆ ಕಾಮಗಾರಿ ಮುಗಿಯುತ್ತಿದ್ದಂತೆಯೇ, ಕಿರುಗೂರು ರಸ್ತೆ ಕಾಮಗಾರಿ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರ ದಿನೇಶ್ ಕುಮಾರ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಪ್ರ.ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್, ಉಪಾಧ್ಯಕ್ಷ ಚೋಡುಮಾಡ ಶ್ಯಾಮ್ ಪೂಣಚ್ಚ, ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಖಜಾಂಜಿ ಚೆಪ್ಪುಡೀರ ಮಾಚು, ಸೇರಿದಂತೆ ಹಿರಿಯರಾದ ಚಕ್ಕೆರ ಕಾಳಯ್ಯ, ಅಳಮೇಂಗಡ ಮುದ್ದಪ್ಪ, ಜಿಲ್ಲಾ ಸಮಿತಿ ಸದಸ್ಯ ಮಂಡೆಚAಡ ದಿನೇಶ್ ಚಿಟ್ಯಪ್ಪ, ಶಕ್ತಿ ಕೇಂದ್ರ ಪ್ರಮುಖ್ ಬೊಜ್ಜಂಗಡ ಸುನೀಲ್, ಅರುಣ್ ಅಪ್ಪಣ್ಣ, ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪಕ್ಷದ ನಾಯಕರು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.