ಸುಂಟಿಕೊಪ್ಪ, ಜ. ೩೦: ವೈದ್ಯರ ಅಲಭ್ಯ ರಾಜಕಾಲುವೆ ಒತ್ತುವರಿ ವಿದ್ಯುತ್ ಬಿಲ್ ಹೆಚ್ಚಳ ಸೆಪ್ಟಿಕ್ ಟ್ಯಾಂಕ್ ಕಲುಷಿತ ನೀರು ಚರಂಡಿಗೆ, ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಗ್ರಾಮ ಸಭೆಯಲ್ಲಿ ಚರ್ಚೆ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆಯಲ್ಲಿ ಮೀನಾಕ್ಷಮ್ಮ ಮಂಜನಾಥಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ರೋಗಿಗಳಿಗೆ ಲಭಿಸುತ್ತಿಲ್ಲ ಯಾವಾಗ ಬರುತ್ತಾರೊ ಯಾವಾಗ ಹೋಗುತ್ತಾರೊ ಗೊತ್ತಾಗುತ್ತಿಲ್ಲ. ನನ್ನ ಅಕ್ಕನ ಮಗನನ್ನು ಇಲ್ಲಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ವೈದ್ಯರ ನಿರ್ಲಕ್ಷö್ಯದಿಂದ ಆತ ಸಾವನ್ನಪ್ಪಿದ ಎಂದು ಮಾಜಿ ಸದಸ್ಯ ಆನಂದ ನೋವನ್ನು ತೋಡಿಕೊಂಡರು. ಇದಕ್ಕೆ ಬಿ.ಕೆ. ಮೋಹನ, ಇಬ್ರಾಹಿಂ, ನಾಗೇಶ ಪೂಜಾರಿ, ಲತೀಫ್, ವಿಮಲಾವತಿ ದನಿಗೂಡಿಸಿದರು.
ಇಲ್ಲಿನ ಸರಕಾರಿ ಪ್ರಾಥಮಿಕ ಆಸ್ಪತ್ರೆ ಬಡವರ ಪಾಲಿಗೆ ಶಾಪವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್‌ಕುಟ್ಟಪ್ಪ ಮಾತನಾಡಿ, ನಮಗೂ ಕಹಿ ಅನುಭವವಾಗಿದೆ. ನಾವು ಗ್ರಾಮ ಪಂಚಾಯಿತಿಯಿAದ ನಿಯೋಗ ತೆರಳಿ ಡಿಹೆಚ್‌ಓಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಆಸ್ಪತ್ರೆಗೆ ರಾತ್ರಿ ಹಾಗೂ ಹಗಲಿಗೆ ಸೇರಿ ಇಬ್ಬರು ವೈದ್ಯರನ್ನು ನೇಮಿಸ ಬೇಕು. ಇಲ್ಲವಾದರೆ ಪಂಚಾಯಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥ ರೊಂದಿಗೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಕಡಂಗ, ತೋಡು ಒತ್ತುವರಿ ಯಾಗಿದೆ. ಸುಂಟಿಕೊಪ್ಪದ ಹಲವು ಬಡಾವಣೆಗಳ ಭೂಪರಿವರ್ತನೆ ಯಾದಾಗ ನ್ಯಾಯವಾಗಿ ಪಂಚಾಯಿತಿಗೆ ಸಿಗಬೇಕಾದ ಜಾಗ ಸಿಗಲಿಲ್ಲ ಗದ್ದೆ ಬಡಾವಣೆಯಾಗಿದೆ ಎಂಬ ಆರೋಪ ಕೇಳಿಬಂತು. ಪಿಡಿಓ ವೇಣುಗೋಪಾಲ್ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿ ೨೦೧೪ ರ ಹಿಂದೆ ಭೂಪರಿವರ್ತನೆ ಆದ ಬಡಾವಣೆಗಳಲ್ಲಿ ೧೧ಬಿ ಆದೇಶ ಇರಲಿಲ್ಲ. ಆದರೂ ಮನೆ ಕಟ್ಟಿಕೊಂಡ ಯಾರಿಗೂ ಗ್ರಾಮ ಪಂಚಾಯಿತಿ ತೊಂದರೆ ನೀಡಲಿಲ್ಲ. ಈಗ ಕಾನೂನು ಪ್ರಕಾರ ಶಾಂತಗೇರಿ, ಶುಭರೈ, ಸೇರಿದಂತೆ ಎಲ್ಲಾ ಬಡಾವಣೆಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಆದೇಶದಂತೆ ೪೫% ಜಾಗ ಪಂಚಾಯಿತಿಗೆ ನೀಡಿದ್ದಾರೆ. ಕಾನೂನು ಪ್ರಕಾರ ಪಂಚಾಯಿತಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಶ್ರೀದೇವಿ ವಿಭಾಗದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಯಾವಾಗಬೇಕಾದರೂ ಬೀಳಬಹುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬದಲಿ ಕಟ್ಟಡ ನಿರ್ಮಿಸಬೇಕು ಎಂದು ನಾಗೇಶ ಪೂಜಾರಿ ಆಗ್ರಹಿಸಿದರು.
ಸುಂಟಿಕೊಪ್ಪ ಪಟ್ಟಣದ ಆಸುಪಾಸಿನಲ್ಲಿರುವ ಶಾಲಾ ಕಾಲೇಜುಗಳಲ್ಲಿ ಸಂಜೆ ವೇಳೆ ಶಾಲೆ ಬಿಡುವಾಗ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಇಬ್ರಾಹಿಂ, ವಾಸುದೇವ ಹೇಳಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಚೆಸ್ಕಾಂನಿAದ ಎಷ್ಟು ಬಿಲ್ ಪಾವತಿಯಾಗ ಬೇಕಾಗಿದೆ ಎಂದು ಎಂ.ಎಸ್.ಸುನಿಲ್ ಪ್ರಶ್ನಿಸಿದರು. ಚೆಸ್ಕಾಂ ಕಿರಿಯ ಅಭಿಯಂತರ ಜೈದೀಪ್ ಉತ್ತರಿಸಿ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಮನೆ ಮನೆಗೆ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ. ಹಳೆ ಬಿಲ್ ಸೇರಿ ೪೧ ಲಕ್ಷದ ೯೦೦೦ ರೂ.ಗಳನ್ನು ಪಂಚಾಯಿತಿ ಬಿಲ್ ಪಾವತಿಸಬೇಕಾಗಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಬಿ.ಎಂ. ಸುರೇಶ್, ಪಿ.ಆರ್. ಸುನಿಲ್‌ಕುಮಾರ್, ಗೀತಾ, ವಸಂತಿ, ಮಂಜುಳ, ನಾಗರತ್ನ, ಶಾಂತಿ, ಜಿನಾಸುದ್ದೀನ್, ಶಬೀರ್, ಸಬಾಸ್ಟಿನ್, ಆಲಿಕುಟ್ಟಿ, ರಫೀಕ್ ಖಾನ್, ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಚಂದ್ರ ಪ್ರಸಾದ್, ಜಿ.ಪಂ. ಅಭಿಯಂತರÀ ಫಯಾಜ್, ಗ್ರಾಮಲೆಕ್ಕಿಗ ನಾಗೇಂದ್ರ, ತೋಟಗಾರಿಕೆ ಇಲಾಖೆಯ ರವೀಂದ್ರ ಹಾಜರಿದ್ದರು.