
ಮಡಿಕೇರಿ, ಜ. ೩೦: ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಅಧಿಕಾರಿ ಕೋದಂಡ ಪಿ. ಕಾರ್ಯಪ್ಪ (ಎವಿಎಸ್‌ಎಂ) ಅವರು ಇದೀಗ ರಜಪೂತ್ ರೈಫಲ್ಸ್ ವಿಭಾಗದ ಮುಖ್ಯಸ್ಥರಾಗಿಯೂ ನೇಮಕಗೊಂಡಿದ್ದಾರೆ. ಇವರು ಇದೀಗ ಸೇವೆಯಿಂದ ನಿವೃತ್ತರಾಗುತ್ತಿರುವ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ದಿಲ್ಲೋನ್ ಅವರಿಂದ ಅಧಿಕಾರಿ ಸ್ವೀಕರಿಸಿದರು.
ಲೆ.ಜ. ಕಾರ್ಯಪ್ಪ ಅವರು ಈಗಾಗಲೇ ಭಾರತೀಯ ಸೇನೆಯ ಶಸ್ತಾçಸ್ತç ವಿಭಾಗದ ಮುಖ್ಯಸ್ಥರಾಗಿಯೂ (ಎಂ.ಜಿ.ಎಸ್.) ಅಧಿಕಾರದಲ್ಲಿದ್ದಾರೆ. ಇದೀಗ ಇದರೊಂದಿಗೆ ಮತ್ತೊಂದು ಜವಾಬ್ದಾರಿಯನ್ನೂ ಅವರು ಹೊಂದಿದAತಾಗಿದ್ದು, ಕೊಡಗಿನ ಸೇನಾ ಇತಿಹಾಸಕ್ಕೆ ಮತ್ತೊಂದು ಹಿರಿಮೆ ದೊರೆತಂತಾಗಿದೆ. ದೆಹಲಿಯ ಸೇನಾ ಮುಖ್ಯ ಕಚೇರಿಯಲ್ಲಿ ಕಾರ್ಯಪ್ಪ ಅವರು ಅಧಿಕಾರ ವಹಿಸಿಕೊಂಡರು.