
ಗೋಣಿಕೊಪ್ಪಲು, ಜ.೩೦: ಅಪರಿಚಿತ ವ್ಯಕ್ತಿಯೋರ್ವ ಮನೆಯ ಕಾಂಪೌAಡ್ ಹಾರಿ ಮನೆಯ ಬಾಗಿಲನ್ನು ಬಡಿದ ಘಟನೆ ಸಮೀಪದ ಕೈಕೇರಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ಸಂಜೆ ೫.೪೦ ಸುಮಾರಿಗೆ ಕೈಕೇರಿ ಗ್ರಾಮದ ವಿನೋದ್ ಎಂಬವರ ಮನೆಯ ಗೇಟ್ ಬಳಿ ಆಗಮಿಸಿದ್ದ ಅಪರಿಚಿತ ವ್ಯಕ್ತಿ ಗೇಟ್ಗೆ ಬೀಗ ಹಾಕಿರುವುದನ್ನು ಗಮನಿಸಿ ಮನೆಯ ಕಾಂಪೌAಡ್ ಹಾರಿ ಮನೆಯ ಬಳಿ ಆಗಮಿಸಿದ್ದಾನೆ.
ಮನೆಯ ಕೆಲಸ ಮಾಡುವುದಾಗಿ ಹೇಳಿ ಮನೆಯ ಬಾಗಿಲನ್ನು ತಟ್ಟಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮಹಿಳೆ ತನ್ನ ಸಮಯ ಪ್ರಜ್ಞೆ ತೋರಿ,ಮನೆಯ ಬಾಗಿಲನ್ನು ಭದ್ರಪಡಿಸಿ ಆತನ ಚಿತ್ರವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಮನೆಯ ಬಾಗಿಲನ್ನು ಭದ್ರಪಡಿಸಿದ ನಂತರ ಮನೆಯಲ್ಲಿದ್ದವರನ್ನು ಬೊಬ್ಬೆ ಹಾಕಿ ಕರೆದಿದ್ದಾರೆ. ಮನೆಯ ಕೆಲಸ ಮಾಡುವುದಾಗಿ ಅಪರಿಚಿತ ವ್ಯಕ್ತಿ ಆಗಾಗ್ಗೆ ಹೇಳುತ್ತಿದ್ದ. ಮನೆಯಲ್ಲಿ ಯಾವುದೇ ಕೆಲಸವಿಲ್ಲ ಇಲ್ಲಿಂದ ಹೊರಡುವಂತೆಯೂ ಪೊಲೀಸರಿಗೆ ತಿಳಿಸುವುದಾಗಿ (ಮೊದಲ ಪುಟದಿಂದ) ಹೆದರಿಸಿದರೂ ಆ ವ್ಯಕ್ತಿ ಯಾವುದೇ ಭಯವಿಲ್ಲದೇ ಮನೆಯ ಬಾಗಿಲನ್ನು ಒಂದೇ ಸಮನೆ ಬಡಿಯಲಾರಂಭಿಸಿದ್ದಾನೆ. ಎಚ್ಚೆತ್ತುಕೊಂಡ ಮನೆಯ ಮಹಿಳೆ ಸಮೀಪದ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆತ ಸಿದ್ದಾಪುರ ಮೂಲದವನೆಂದು ಪೊಲೀಸರ ಮುಂದೆ ಹೇಳಿದ್ದಾನೆ. ಹೆಸರು ಕೇಳಿದರೆ ಕ್ಷಣಕ್ಕೊಂದೊAದು ಹೆಸರು ಹೇಳುತ್ತಿರುವ ಈತ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ಕಂಡು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಯಾರೇ ಅಪರಿಚಿತ ವ್ಯಕ್ತಿ ಮನೆಯ ಬಳಿ ಆಗಮಿಸಿದ ಸಂದರ್ಭ ಮನೆಯ ಬಾಗಿಲನ್ನು ಭದ್ರಪಡಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿ ತಿತಿಮತಿ ಸಮೀಪದ ಕರಡಿಕೊಪ್ಪದಿಂದ ಯುವತಿಯೋರ್ವಳನ್ನು ಮದುವೆಯಾಗಿದ್ದ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಪತ್ನಿಯಿಂದ ದೂರವಾಗಿ ಬೆಂಗಳೂರಿನಲ್ಲಿ ವಾಸವಿರುವುದಾಗಿ ಹೇಳಿದ್ದು, ಈ ಬಗ್ಗೆ ಖಚಿತಗೊಂಡಿಲ್ಲ. - ಹೆಚ್.ಕೆ.ಜಗದೀಶ್