ಮಡಿಕೇರಿ, ಜ. ೨೯: ಮಡಿಕೇರಿಯಲ್ಲಿರುವ ಕೊಡವ ವಿದ್ಯಾನಿಧಿ ಮತ್ತು ಉತ್ತರ ಅಮೇರಿಕಾದ ಕೊಡವ ಕೂಟದ ವತಿಯಿಂದ ನಿನ್ನೆ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ವೇತನ ಮಂಜೂರಾದ ವಿದ್ಯಾರ್ಥಿಗಳಿಗೆ ರೂ. ೧೮ ಲಕ್ಷ ಮೊತ್ತದಷ್ಟು ಚೆಕ್ ವಿತರಿಸಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಹಾಗೂ ವಿದ್ಯಾನಿಧಿ ಉಪಾಧ್ಯಕ್ಷರಾದ ಕೆ.ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕರುಗಳಾದ ಜಗದೀಶ್ ಕಾಮತ್ ಮತ್ತು ದಿನೇಶ್ ಪೈ ಅವರುಗಳು ಪಾಲ್ಗೊಂಡಿದ್ದರು. ೧೭೭ ವಿದ್ಯಾರ್ಥಿಗಳು ಹಾಜರಿದ್ದರು. ಎಂಬಿಬಿಎಸ್, ಇಂಜಿನಿಯರಿAಗ್, ಸಿಎ, ಪಿಎಚ್‌ಡಿ, ಕೃಷಿ ಪದವಿ, ಪ್ಯಾರಾ ಮೆಡಿಕಲ್ ನಂತಹ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ವಿದ್ಯಾರ್ಥಿವೇತನ ನೀಡಲಾಯಿತು ಎಂದು ಕಾರ್ಯದರ್ಶಿ ಮೇದುರ ಪಿ. ಕಾವೇರಪ್ಪ ಅವರು ತಿಳಿಸಿದ್ದಾರೆ. ಖಜಾಂಚಿ ಸರೋಜ ಪೂವಣ್ಣ ಮತ್ತಿತರರು ಹಾಜರಿದ್ದರು.