ಕುಶಾಲನಗರ, ಜ. ೨೬: ಬಿಜೆಪಿ ಜಿಲ್ಲೆಯಲ್ಲಿ ಹಿಂಬಾಗಿಲಿನಿAದ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದೆ .ಕುಶಾಲನಗರ ಪುರಸಭೆ ಮಾಡುವ ಹೆಸರಿನಲ್ಲಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಿದೆ. ಈ ಸಂಬAಧ ಪಕ್ಷ ಕಾನೂನು ಹೋರಾಟ ನಡೆಸಲಿದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಎಸ್. ಚಂದ್ರಮೌಳಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; ಇಂತಹ ನಿರ್ಧಾರಗಳಿಂದ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಳುಸೋಗೆ ಗ್ರಾಮ ಪಂಚಾಯಿತಿ ಅಧಿಕಾರ ಅವಧಿ ಮುಗಿದ ಮೇಲೆ ಪುರಸಭೆಯ ಪ್ರಕ್ರಿಯೆ ನಡೆಯಲಿ ಎಂದು ಸಲಹೆ ನೀಡಿದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭ ಕನಿಷ್ಟ ಮೂರು ಜನ ಮುಖ್ಯಮಂತ್ರಿಗಳು ಆಗುವುದು ಸಹಜ. ಇದೊಂದು ಕಲಬೆರಕೆ ಸರ್ಕಾರ ವಾಗಿದ್ದು, ಮೇಕೆದಾಟು ಪಾದಯಾತ್ರೆ ಸಂದರ್ಭ ಅನಾವಶ್ಯಕ ಕೋವಿಡ್ ಹೆಸರಿನಲ್ಲಿ ಯಾತ್ರೆಗೆ ಅಡ್ಡಿ ಮಾಡಿದಲ್ಲದೆ ಎಫ್ಐಆರ್ ಹಾಕಿದ್ದಾರೆ. ತಕ್ಷಣ ಎಫ್ಐಆರ್ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ಮೇಕೆದಾಟು ಪಾದಯಾತ್ರೆ ಜನರ ಹಕ್ಕಿಗಾಗಿ ನಡೆಯುತ್ತಿದೆ ಎಂದರು.
ಕೆಪಿಸಿಸಿ ವಕ್ತಾರ ಎನ್. ಲಕ್ಷö್ಮಣ್ ಮಾತನಾಡಿ, ಮುಂದಿನ ಚುನಾವಣೆ ಯಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುವುದು ಖಚಿತ ಎಂದು ಹೇಳಿದರು. ಕಳೆದ ೪ ಬಾರಿ ಸತತವಾಗಿ ಗೆಲುವು ಸಾಧಿಸಿದ ಇಬ್ಬರು ಶಾಸಕರು ಜಿಲ್ಲೆಗೆ ಯಾವುದೇ ರೀತಿಯ ಕಾರ್ಯ ಕ್ರಮಗಳನ್ನು, ಶಾಶ್ವತ ಯೋಜನೆಗಳನ್ನು ರೂಪಿಸಿಲ್ಲ. ಜನರ ದಿಕ್ಕುತಪ್ಪಿಸಿ ದಿನಕಳೆಯುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಗೆ ಈಗಾಗಲೇ ಮೂರು ಜನ ಉಸ್ತುವಾರಿ ಸಚಿವ ರಾಗಿದ್ದು, ಇದೀಗ ಬಂದ ಆರ್ಎಸ್ಎಸ್ ಮೂಲದ ಸಚಿವರು ಜಿಲ್ಲೆಯಲ್ಲಿ ಕೋಮು ಗಲಭೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಅಧಿಕವಾಗಿದೆ, ಎಲ್ಲೆಡೆ ಕಾಂಗ್ರೆಸ್ ಅಲೆ ಬೀಸುತ್ತಿದ್ದು ಬಿಜೆಪಿಯ ಅಧಿಕಾರದ ದಿನಗಳು ಕ್ಷೀಣಗೊಳ್ಳುತ್ತಿವೆ ಎಂದರು. ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತಕುಮಾರ್, ಕೆಪಿಸಿಸಿ ಸದಸ್ಯ ನಟೇಶ್ ಗೌಡ, ಪಕ್ಷದ ಜಿಲ್ಲಾ ವಕ್ತಾರ ಟಿ.ಈ. ಸುರೇಶ್ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ಧನ್ ಇದ್ದರು.