ಮಡಿಕೇರಿ, ಜ. ೨೭: ರಾಜ್ಯದ ರಾಜಧಾನಿ ಬೆಂಗಳೂರಿನ ಮಾಣಿಕ್‌ಷಾ ಮೈದಾನದಲ್ಲಿ ಜರುಗಿದ ೭೩ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೆರೇಡ್ ಕಮಾಂಡರ್ ಆಗಿ ಕೊಡಗಿನವರಾದ ಲೆಫ್ಟಿನೆಂಟ್ ಕರ್ನಲ್ ಮೇಕತಂಡ ಆಶಿಸ್ ಚಿಣ್ಣಪ್ಪ ಅವರು ಕರ್ತವ್ಯ ನಿರ್ವಹಿಸಿದರು. ಪ್ರಸ್ತುತ ಇವರು ಬೆಂಗಳೂರಿನ ಎಂ.ಇ.ಜಿ. ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿನ್ನೆ ನಡೆದ ಸಮಾರಂಭದಲ್ಲಿ ಪೆರೇಡ್ ಕಮಾಂಡರ್ ಆಗಿದ್ದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಗೌರವ ವಂದನೆಯೊAದಿಗೆ ಪಥ ಸಂಚಲನದ ಜವಾಬ್ದಾರಿಯನ್ನು ನಿರ್ವ ಹಿಸಿದರು. ಇವರು ಮೂಲತಃ ಜಿಲ್ಲೆಯ ಐಮಂಗಲದ ನಿವಾಸಿ ಮೇಕತಂಡ ಕಾರ್ಯಪ್ಪ ಹಾಗೂ ಭಾಗ್ಯ ದಂಪತಿಯ ಪುತ್ರ.