ಮಡಿಕೇರಿ, ಜ.೨೮: ಕೃಷಿ ಇಲಾಖೆ ವತಿಯಿಂದ ೨೦೨೧-೨೨ ನೇ ಸಾಲಿನ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ಶೇ.೫೦ ರ ವರೆಗಿನ ರಿಯಾಯ್ತಿ ದರದಲ್ಲಿ ಕಳೆಕೊಚ್ಚುವ ಯಂತ್ರಗಳು (ಪವರ್ ವೀಡರ್), ಬ್ಯಾಟರಿ ಸ್ಪೆçÃರ‍್ಸ್, ಪವರ್ ಸ್ಪೆçÃರ‍್ಸ್, ರೋಟೋವೇಟರ್, ೫ ಎಚ್.ಪಿ., ೮ ಎಚ್.ಪಿ. ಮತ್ತು ೧೦ ಎಚ್‌ಪಿ ಡೀಸೆಲ್ ಪಂಪ್‌ಸೆಟ್‌ಗಳನ್ನು ವಿತರಿಸಲು ಉಪಕರಣಗಳು ಲಭ್ಯವಿದೆ.
ಆಸಕ್ತ ರೈತರು, ಅಗತ್ಯ ದಾಖಲಾತಿಗಳನ್ನು ನೀಡಿ ಮಡಿಕೇರಿ, ಭಾಗಮಂಡಲ, ನಾಪೋಕ್ಲು ಮತ್ತು ಸಂಪಾಜೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳಲು ಕೋರಿದೆ. ಮತ್ತು ಶೇ.೯೦ ರ ರಿಯಾಯ್ತಿಯಲ್ಲಿ ತುಂತುರು ನೀರಾವರಿ ಘಟಕ ವಿತರಿಸುವ ಕಾರ್ಯಕ್ರಮವಿದ್ದು ರೈತರು ಅರ್ಜಿ ನೀಡಬಹುದು ಎಂದು ಮಡಿಕೇರಿ ತಾ. ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.