ಸೋಮವಾರಪೇಟೆ, ಜ. ೨೬: ತಾಲೂಕು ಮೀನುಗಾರಿಕಾ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ ೮ ಮಂದಿ ಫಲಾನುಭವಿಗಳಿಗೆ ಮಂಜೂರಾದ ಮೀನು ಸಲಕರಣೆಗಳ ಕಿಟ್‌ನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಮ್ಮ ಕಚೇರಿ ಆವರಣದಲ್ಲಿ ವಿತರಣೆ ಮಾಡಿದರು.
ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ತಾಲೂಕಿನ ಹೇಮರಾಜ್, ನಟೇಶ್, ಪೊನ್ನಮ್ಮ, ವಾಸುದೇವ್, ಗಣೇಶ್, ಶೇಖರ್ ಹಾಗೂ ಶುಭಾಕರ್ ಅವರುಗಳಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಉಪಸ್ಥಿತರಿದ್ದರು.