ಕಣಿವೆ, ಜ. ೨೬: ಹಾರಂಗಿ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆ ಗೊಂಡಿರುವುದರಿAದ ಕೊಡಗು ಜಿಲ್ಲೆಯ ಕೃಷಿಕರಿಗೆ ಬೇಸಿಗೆ ಬೆಳೆಗೆ ಕಾಲುವೆಯಲ್ಲಿ ನೀರು ಹರಿಸಲು ಕ್ಷೇತ್ರದ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮಗಳ ಕೃಷಿಕರು ಒತ್ತಾಯಿಸಿದ್ದಾರೆ.
ಈ ವರ್ಷ ಮಳೆ ಉತ್ತಮವಾಗಿ ಸುರಿದದ್ದರಿಂದ ಕಾಲುವೆಗಳಲ್ಲಿ ಹರಿದ ಪ್ರಮಾಣದಷ್ಟೇ ನೀರು ಜಲಾಶಯದಲ್ಲಿ ಸಂಗ್ರಹಗೊAಡಿರುವ ಕಾರಣ ನೀರನ್ನು ಪೋಲಾಗದಂತೆ ತಡೆಯಲು ಕೊಡಗಿನ ಕೃಷಿಕರಿಗೆ ಎರಡನೇ ಬೆಳೆಗೂ ಈ ಬಾರಿ ನೀರು ಹರಿಸಬೇಕು ಎಂದು ತೊರೆನೂರು ರೈತ ಶಿವಣ್ಣ ನೀರಾವರಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕಳೆದ ೨೦ ವರ್ಷಗಳ ಹಿಂದೆ ಜಲಾಶಯದ ನೀರನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದ ಅಂದಿನ ನೀರಾವರಿ ಅಧಿಕಾರಿಗಳು ಕೊಡಗು ಜಿಲ್ಲೆಯ ರೈತರಿಗೆ ಬೇಸಿಗೆ ಬೆಳೆಗೂ ತಪ್ಪದೇ ನೀರು ಹರಿಸುತ್ತಿದ್ದರು.
ಆದರೆ, ಇತ್ತೀಚೆಗೆ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕೃಷಿಕರ ನೆರವಿಗೆ ನಿಲ್ಲುತ್ತಿಲ್ಲ. ಹಾಗೆಯೇ ನಮ್ಮಿಂದ ಚುನಾಯಿತರಾಗುವ ಜನಪ್ರತಿನಿಧಿಗಳು ಕೂಡ ರೈತರ ಮೇಲೆ ಬದ್ಧತೆ ತೋರದ ಕಾರಣ ಕೊಡಗಿನ ರೈತರನ್ನು ಕಡೆಗಣಿಸಿಕೊಂಡು ಬರಲಾಗುತ್ತಿದೆ ಎಂದು ಶಿವಣ್ಣ ದೂರಿದ್ದಾರೆ.
ಹಾರಂಗಿ ಬಲದಂಡೆ ನಾಲಾ ವ್ಯಾಪ್ತಿಯ ಪಿರಿಯಾಪಟ್ಟಣ, ಹುಣಸೂರು ಹಾಗೂ ಕೆ.ಆರ್. ನಗರ ತಾಲೂಕುಗಳ ರೈತರು ಪ್ರತೀ ವರ್ಷವೂ ಮುಂಗಾರು ಹಂಗಾಮಿನಲ್ಲಿ ಮೊದಲ ಬೆಳೆಯಾಗಿ ಅರೆ ನೀರಾವರಿ ಬೆಳೆಯಾದ ತಂಬಾಕು ಬೆಳೆದು ಕಟಾವು ಮಾಡಿದ ನಂತರ ಎರಡನೇ ಬೆಳೆಯಾಗಿ ಭತ್ತದ ಬೇಸಾಯ ಮಾಡುತ್ತಾರೆ.
ಆದರೆ, ಜಲಾಶಯ ಎಂಬ ನೀರಿನ ನಿಧಿಯನ್ನು ಹೊಂದಿರುವ ಕೊಡಗಿನ ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಒಳಗೊಂಡು ಕೇವಲ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಾಳಿದೇವನ ಹೊಸೂರು, ಹುದುಗೂರು, ಮದಲಾಪುರ, ಭುವನಗಿರಿ, ಸೀಗೆಹೊಸೂರು, ಕಣಿವೆ, ಹೆಬ್ಬಾಲೆ, ಮರೂರು, ಹಳಗೋಟೆ, ತೊರೆನೂರು, ಮಣಜೂರು, ಶಿರಂಗಾಲ, ನಲ್ಲೂರು ಮೊದಲಾದ ಗ್ರಾಮಗಳ ಕೆಲವೇ ರೈತರು ಹಾರಂಗಿ ಜಲಾಶಯದ ಪ್ರಯೋಜನ ಪಡೆಯುತ್ತಿದ್ದಾರೆ.
ಆದರೆ, ನೆರೆಯ ಜಿಲ್ಲೆಯ ರೈತರಿಗೆ ಆಗುತ್ತಿರುವ ಅನುಕೂಲ ನಮಗೆ ಆಗುತ್ತಿಲ್ಲ. ಹಾಗಿದ್ದರೂ ನಮ್ಮನ್ನಾಳುವವರು ಅಥವಾ ಅಧಿಕಾರಿಗಳು ಏಕೆ ನಮ್ಮ ರೈತರ ಮೇಲೆ ಕಾಳಜಿ ತೋರುತ್ತಿಲ್ಲ ಎಂದು ಶಿರಂಗಾಲದ ಕೃಷಿಕ ಎಸ್.ಎಸ್. ಚಂದ್ರಶೇಖರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮರೆಯಾದ ದ್ವಿದಳ ಧಾನ್ಯ ಬೆಳೆ
ಹಿಂದೆ ಹಾರಂಗಿ ಜಲಾಶಯದಿಂದ ಬೇಸಗೆ ಬೆಳೆಗೆಂದೇ ನೀರು ಹರಿಸುತ್ತಿದ್ದ ಅವಧಿಯಲ್ಲಿ ಕೊಡಗು ಜಿಲ್ಲೆಯ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ೪ ಸಾವಿರ ಎಕರೆ ಭೂಮಿಯ ಪೈಕಿ ಒಂದಷ್ಟು ಭೂಮಿಯಲ್ಲಿ ಹಲವು ರೈತರು ದ್ವಿದಳ ಧಾನ್ಯಗಳಾದ ಕಡಲೆ, ತಡನಿ, ಉದ್ದು, ಹೆಸರು, ಸಂಭಾರ, ಹಲಸಂದೆ ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದರು.
ಇನ್ನು ಕೆಲವರು ಭತ್ತದ ಬೆಳೆ ಬೆಳೆಯುತ್ತಿದ್ದರು. ಇನ್ನೂ ಕೆಲವು ರೈತರು ತರಕಾರಿ ಕಾಯಿ ಪಲ್ಯೆಗಳನ್ನು ಬೆಳೆಯುತ್ತಿದ್ದರು.
ಆಲಸ್ಯಕ್ಕೊಳಗಾದ ರೈತರು
ಕಳೆದ ಹದಿನೆಂಟು ವರ್ಷಗಳ ಹಿಂದೆ ಬೇಸಿಗೆ ಬೆಳೆಗೂ ಕೂಡ ಕೊಡಗಿನ ರೈತರಿಗೆ ಎಡದಂಡೆ ಕಾಲುವೆಯಲ್ಲಿ ನೀರು ಹರಿಸುವ ಪದ್ಧತಿ ಇದ್ದಾಗ ಸಹಜವಾಗಿಯೇ ಕೃಷಿ ಕಾರ್ಯಗಳಲ್ಲಿ ಕ್ರಿಯಾಶೀಲರಾಗುತ್ತಿದ್ದ ರೈತರು, ಇಲಾಖೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ ಬಳಿಕ ಅನೇಕ ರೈತರಲ್ಲಿ ಆಲಸ್ಯ ಮನೆಮಾಡಿತು.
ಅಲ್ಲದೇ ಕಾರ್ಮಿಕರ ಸಮಸ್ಯೆಯೂ ಕಾಡುತ್ತಿರುವ ಕಾರಣ ಈ ಭಾಗದಲ್ಲಿ ದ್ವಿದಳ ಧಾನ್ಯ ಬೆಳೆಗಳು ಕಣ್ಮರೆಯಾದವು.
ಶುಂಠಿ ದರ್ಬಾರ್
ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಸಂಕಷ್ಟಗಳಿಗೆ ಆದಾಯದ ಮೂಲಗಳನ್ನು ಕಂಡುಕೊAಡಿದ್ದ ಜಿಲ್ಲೆಯ ಈ ಭಾಗದ ಕೃಷಿಕರಿಗೆ ಕಳೆದ ಎರಡು ದಶಕಗಳಿಂದ ವಾಣಿಜ್ಯಿಕ ಬೆಳೆಯಾದ ಶುಂಠಿ ಬೆಳೆ ಭತ್ತ ಹಾಗೂ ದ್ವಿದಳ ಧಾನ್ಯದ ಬೆಳೆಗಳ ಜಾಗವನ್ನು ಅತಿಕ್ರಮಿಸಿತು.
ಹಾಗಾಗಿ ಭೂ ಹಿಡುವಳಿದಾರರು ಒಂದಷ್ಟು ಕ್ಲಿಷ್ಟಕರವಾದ ಬೆಳೆಯಾದ ಭತ್ತದ ಬದಲು ಶುಂಠಿ ಬೆಳೆಯುವ ಬಂಡವಾಳ ಶಾಹಿಗಳಿಗೆ ಲೀಸ್‌ಗೆ ಭೂಮಿ ಕೊಡಲು ಆರಂಭಿಸಿದ್ದರಿAದ ಭತ್ತದ ಬೆಳೆ ಆಸಕ್ತಿ ಕುಂದಿತು.
ನಾಲೆಗಳ ದುರಸ್ತಿ
ಜಲಾಶಯದಿಂದ ಸಂಪ್ರದಾಯದAತೆ ಹರಿಸುತ್ತಿದ್ದ ವರ್ಷಂಪ್ರತಿಯ ಬೇಸಗೆ ಬೆಳೆಯ ನೀರನ್ನು ಹಾರಂಗಿ ನಾಲೆಗಳ ದುರಸ್ತಿಗಳ ಹೆಸರಲ್ಲೂ ಬಂದ್ ಮಾಡಲಾಯಿತು.
ಗುಣಮಟ್ಟದ ಕಾಮಗಾರಿಗಳ ಕೊರತೆಯ ಕಾರಣ ವರ್ಷಂಪ್ರತಿ ಮಾಡಿದ ಕಾಮಗಾರಿಗಳನ್ನೇ ಮಾಡುವ ನೆಪದಲ್ಲಿ ಇಲಾಖೆಯ ಅಧಿಕಾರಿಗಳು ಮುಖ್ಯ ಕಾಲುವೆ, ಉಪಕಾಲುವೆಗಳು ಹಾಗೂ ತೂಬುಗಳ ದುರಸ್ತಿ ನೆಪದಲ್ಲಿ ಬೇಸಿಗೆಯ ಬೆಳೆಗೆ ನೀರು ಹರಿಸುವ ಪದ್ಧತಿಗೆ ಬ್ರೇಕ್ ಹಾಕಿದರು.
ಇತ್ತೀಚಿಗೆ ಬೇಸಗೆಯ ದಿನಗಳಲ್ಲಿ ಹಾರಂಗಿ ಕಾಲುವೆಗಳಲ್ಲಿ ಎಲ್ಲಾ ಕಡೆಯೂ ನಾಲಾ ರಿಪೇರಿ, ಸಿಮೆಂಟ್ ಪ್ಲಾಸ್ಡಿಂಗ್ ಕಾಮಗಾರಿಗಳು ಕೋಟಿ ಕೋಟಿಗಳ ಖರ್ಚಿನಲ್ಲಿ ನಡೆಯುತ್ತಲೇ ಇರುತ್ತವೆ.
ಆಳುವವರಿಗೆ ವರವಾದ ಹಾರಂಗಿ ಯೋಜನೆ
ರೈತರ ಅಭ್ಯುದಯಕ್ಕಾಗಿ ತೆರೆದುಕೊಂಡ ನೀರಾವರಿ ಯೋಜನೆಗಳು ಇತ್ತೀಚಿನ ದಶಕಗಳಿಂದಲೂ ಚುನಾಯಿತರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ವರವಾಗಿವೆ.
ಇನ್ನು ನೀರನ್ನು ನಂಬಿ ಕಷ್ಟಪಟ್ಟು ಕೃಷಿ ಮಾಡಿ ಜೀವನ ನಡೆಸುವ ರೈತನಿಗೆ, ಸಕಾಲಕ್ಕೆ ಹಾಗೂ ಸಮರ್ಪಕವಾಗಿ ನೀರು ಹರಿಯದ ಕಾರಣ ಈ ಯೋಜನೆಗಳು ಶಾಪವಾಗುತ್ತಲೇ ಇವೆ.
ಗದ್ದೆಗಳಿಗೆ ನೀರೇ ಹರಿಯುತ್ತಿಲ್ಲ
ಹಾರಂಗಿ ಜಲಾಶಯದ ಎಡದಂಡೆ ನಾಲೆಯಲ್ಲಿ ಹರಿಸುವ ನೀರು ತೊರೆನೂರು, ಶಿರಂಗಾಲ ವ್ಯಾಪ್ತಿಯ ಕೊನೆ ಭಾಗದ ರೈತರ ಗದ್ದೆಗಳಿಗೆ ಇದುವರೆಗೂ ಸರಿಯಾಗಿ ಹರಿದಿಲ್ಲ. ಈ ಬಗ್ಗೆ ರೈತರು ನೂರಾರು ಬಾರಿ ಅಧಿಕಾರಿಗಳಿಗೆ ದೂರಿತ್ತರೂ ಕೂಡ ಇದೂವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಪಾದಯಾತ್ರೆ ನಡೆಸಲಿ
ಕ್ಷೇತ್ರದ ಶಾಸಕರು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಗ್ರಾಮಗಳ ರೈತರ ಕೊನೆ ಭಾಗದ ಗದ್ದೆಗಳ ಕಡೆ ಪಾದಯಾತ್ರೆ ಮಾಡಿ ನೋಡಿದರೆ ನಮ್ಮಗಳ ಪ್ರತೀ ವರ್ಷದ ಸಂಕಟ ಗೊತ್ತಾಗುತ್ತದೆ ಎನ್ನುತ್ತಾರೆ ಕೃಷಿಕರು.
ಕೃಷಿಕರ ನೀರಾವರಿ ಸಮಸ್ಯೆಗಳತ್ತ ನೀರು ಬಳಕೆದಾರ ಸಂಘದ ಪದಾಧಿಕಾರಿಗಳು ಪರಿಶೀಲಿಸಬೇಕು. ಸಂಬAಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುವ ಮೂಲಕ ನೀರು ಬಳಕೆದಾರ ರೈತರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಇನ್ನಾದರೂ ಆಗಬೇಕಿದೆ.
- ಕೆ.ಎಸ್. ಮೂರ್ತಿ