ಸಿದ್ದಾಪುರ, ಜ. ೨೬: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಜಾನುವಾರುಗಳ ತಪಾಸಣಾ ಕಾರ್ಯಕ್ರಮ ಮಾಲ್ದಾರೆಯಲ್ಲಿ ನಡೆಯಿತು.
ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಶು ಇಲಾಖೆಯ ಮುಖ್ಯ ಅಧಿಕಾರಿ ಡಾ. ಎ.ಬಿ ತಮ್ಮಯ್ಯ ಮಾತನಾಡಿ, ಜಾನುವಾರುಗಳಿಗೆ ಹಾಗೂ ನಾಯಿಗಳಿಗೆ ರೋಗಗಳು ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಕೊಡಿಸಬೇಕು ಹಾಗೂ ಪಶು ಸಂಗೋಪನಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಪಶುಗಳಿಗೆ ಚುಚ್ಚುಮದ್ದು ಹಾಗೂ ನಾಯಿಗಳಿಗೆ ಲಸಿಕೆಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಸಮೀರ್, ಉಪಾಧ್ಯಕ್ಷೆ ಪುಷ್ಪ ಹಾಗೂ ಗ್ರಾ.ಪಂ ಸದಸ್ಯರುಗಳು ಹಾಜರಿದ್ದರು.