೨೦೦೨ರ ಜೀವ ವೈವಿಧ್ಯತೆ ಕಾನೂನಿನಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲು ಅಗತ್ಯವಾದ ಅಧ್ಯಯನ ನಡೆಸಿ ವರದಿ ಕೊಡಲು ಒಂದು ಜಂಟಿ ಸಮಿತಿಯನ್ನು ರಚಿಸಲು ಅಗತ್ಯವಾದ ಒಂದು ನಿರ್ಣಯವನ್ನು ೨೦೨೧ರ ಡಿಸೆಂಬರ್ ೨೦ ರಂದು ಲೋಕಸಭೆ ಅಂಗೀಕರಿಸಿದೆ. ಈ ಸದನಗಳ ಜಂಟಿ ಸಮಿತಿಯಲ್ಲಿ ಲೋಕಸಭೆಯ ೨೧ ಸದಸ್ಯರುಗಳು ಮತ್ತು ರಾಜ್ಯ ಸಭೆಯ ೧೦ ಸದಸ್ಯರುಗಳಿರುತ್ತಾರೆ.
“ಡಾ. ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಪಶ್ಚಿಮಘಟ್ಟದ ಜಿಲ್ಲೆಗಳ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಜಾರಿಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದ್ದು” ಅದಕ್ಕೆ ಪೂರಕವಾಗಿ ವರದಿಯಲ್ಲಿನ ಶಿಫಾರಸ್ಸುಗಳನ್ನು ಪರಾಮರ್ಶೆ ನಡೆಸಿ ವರದಿಕೊಡುವ ಜವಾಬ್ದಾರಿಯನ್ನೂ ಈ ಮೇಲಿನ ಸಮಿತಿಗೆ ಕೊಡಲಾಗಿದೆ.
ಈ ಸಮಿತಿಯಲ್ಲಿ ಲೋಕಸಭೆಯ ೨೧ ಸದಸ್ಯರುಗಳಿದ್ದಾರೆ. ಇವರಲ್ಲಿ ಭಾರತೀಯ ಜನತಾ ಪಕ್ಷದವರು ೧೨ ಸದಸ್ಯರು, ಕಾಗ್ರೆಸ್ ಪಕ್ಷದ ಇಬ್ಬರು, ದ್ರಾ.ಮು.ಕ.ದ ಒಬ್ಬರು, ತೃಣಮೂಲ ಕಾಂಗ್ರೆಸಿನ ಒಬ್ಬರು, ವೈ.ಎಸ್.ಆರ್. ಪಕ್ಷದ ಒಬ್ಬರು, ಶಿವಸೇನೆಯ ಒಬ್ಬರು, ಜನತಾ ದಳ(ಯು) ಒಬ್ಬರು, ಬಿಜು ಜನತಾದಳದ ಒಬ್ಬರು, ಬಹುಜನ ಸಮಾಜವಾದಿ ಪಕ್ಷದ ಒಬ್ಬರು ಸದಸ್ಯರಿದ್ದಾರೆ.
ರಾಜ್ಯವಾರು ಸದಸ್ಯರ ಸಂಖ್ಯೆ ನೋಡಿದರೆ ಬಿಹಾರದಿಂದ ೨, ರಾಜಾಸ್ತಾನದಿಂದ ೧, ಮಹಾರಾಷ್ಟçದಿಂದ ೨, ಒರಿಸ್ಸಾದಿಂದ ೨, ಬಂಗಾಳದಿAದ ೨, ಅಸ್ಸಾಂನಿAದ ೨, ಛತ್ತೀಸ್ಘಡ್ನಿಂದ ೧, ಕರ್ನಾಟಕದಿಂದ ೧, ಜಮ್ಮು-ಕಾಶ್ಮೀರದಿಂದ ೧, ಹರ್ಯಾಣದಿಂದ ೧, ಉತ್ತರಾಖಂಡದಿAದ ೧, ಉತ್ತರ ಪ್ರದೇಶದಿಂದ ೨, ತಮಿಳುನಾಡಿನಿಂದ ೨, ಆಂಧ್ರಪ್ರದೇಶದಿAದ ೧ ಸದಸ್ಯ ಇದ್ದಾರೆ.
ಈ ಸಮಿತಿಗೆ ಸೇರಿಸಲ್ಪಟ್ಟಿರುವ ರಾಜ್ಯಸಭಾ ಸದಸ್ಯರುಗಳ ಪಟ್ಟಿ ಸಿಕ್ಕಿಲ್ಲ. ಡಾ. ಕಸ್ತೂರಿ ರಂಗನ್ ಸಮಿತಿಯ ವರದಿ ಬಾಧಕವಾಗುವ ರಾಜ್ಯಗಳು ಗುಜರಾತ್, ಮಹಾರಾಷ್ಟç, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು. ಈ ರಾಜ್ಯಗಳಿಂದ ಈ ಮೇಲುದ್ಧರಿಸಿದ ಸಮಿತಿಯಲ್ಲಿ ಕೇವಲ ೫ ಸದಸ್ಯರಿರುತ್ತಾರೆ. ಕರ್ನಾಟಕದಿಂದ ಪ್ರತಾಪ್ ಸಿಂಹ ಒಬ್ಬರೇ ಇದ್ದಾರೆ.
‘ತಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತರುವುದಿಲ್ಲ, ಪರಿಸರ ಸೂಕ್ಷö್ಮ ಪ್ರದೇಶಗಳನ್ನು ರಚಿಸುವುದಿಲ್ಲ’ ಎಂದು ಚುನಾವಣಾ ಪ್ರಣಾಳಿಕೆಯ ಮೂಲಕ ಭರವಸೆ ಕೊಟ್ಟು ಕೊಡಗಿನಲ್ಲಿ ೨೦೧೪ ರಲ್ಲಿ ಪ್ರತಾಪ್ ಸಿಂಹ ಗೆದ್ದರು. ಅದೇ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಲೋಕಸಭೆಯಲ್ಲಿ ಬಹುಮತ ಪಡೆದು ಆ ಪಕ್ಷದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಸರಕಾರ ರಚನೆಯಾಯಿತು. ಈ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲೇ ೨೭.೦೮.೧೪ರಂದು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಮಂಡಿಸಿ “ನಮ್ಮ ಸರಕಾರವು ಡಾ. ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತರುತ್ತದೆ” ಎಂದು ನ್ಯಾಯಾಲಯಕ್ಕೆ ತಿಳಿಸಿತು. ಸರ್ವೋಚ್ಚ ನ್ಯಾಯಾಲಯಕ್ಕೆ ತಾನುಕೊಟ್ಟ ಆಶ್ವಾಸನೆಯನ್ನು ಅನುಷ್ಠಾನಕ್ಕೆ ತರುವುದರ ಮುಂದುವರಿದ ಹೆಜ್ಜೆಯಾಗಿ ಕೇಂದ್ರ ಸರಕಾರ ೨೦೧೫ರ ಸೆಪ್ಟೆಂಬರ್ ೫ ರಂದು ಕರಡು ಅಧಿಸೂಚನೆಯನ್ನು ಹೊರಡಿಸಿತು. ಹೀಗೆ ಅಧಿಸೂಚನೆಯನ್ನು ಪ್ರಕಟಿಸುವುದಕ್ಕೆ ಮೊದಲು ೨೦೧೪ರ ಜುಲೈ ೭ ರಂದು ಕೇಂದ್ರ ಸರಕಾರ ಆರು ರಾಜ್ಯಗಳ ಪರಿಸರ ಮತ್ತು ಅರಣ್ಯಗಳ ಇಲಾಖೆಯ ಮಂತ್ರಿಗಳ ಸಭೆ ನಡೆಸಿ ಅವರೊಂದಿಗೆ ಸಮಾಲೋಚನೆ ನಡೆಸಿತ್ತು. ಆಗಸ್ಟ್ ೭ ರಂದು ಪಶ್ಚಿಮಘಟ್ಟ ಪ್ರದೇಶದ ಸಂಸದರುಗಳ ಸಭೆ ನಡೆಸಿ ಅವರೊಂದಿಗೂ ಸಮಾಲೋಚನೆ ನಡೆಸಿತ್ತು. ಮಂತ್ರಿಗಳ ಸಭೆಯಲ್ಲಿ ನಮ್ಮ ರಾಜ್ಯದ ಅಂದಿನ ಸಚಿವ ರಮಾನಾಥ ರೈಯವರು ಭಾಗವಹಿಸಿದ್ದು ಅಲ್ಲಿ ರಾಜ್ಯ ಸರಕಾರ ಈಗಾಗಲೇ ಮಂಡಿಸಿದ್ದ ಸಲಹೆಗಳನ್ನು ಪುನರುಚ್ಚರಿಸಿದ್ದರು. ಆದರೆ ನಮಗೆ ತಿಳಿದಿರುವಂತೆ ಸಂಸದರುಗಳ ಸಭೆಯಲ್ಲಿ ಪ್ರತಾಪ್ ಸಿಂಹರವರನ್ನೊಳಗೊAಡು ಯಾವ ಭಾ.ಜ.ಪಾ. ಸಂಸದನೂ ಭಾಗವಹಿಸಲಿಲ್ಲ.
೨೦೧೭ರಲ್ಲಿ ಮತ್ತೊಂದು ಅಧಿಸೂಚನೆಯನ್ನು ಪ್ರಕಟಿಸುವ ಮೊದಲು ಈ ಬಗ್ಗೆ ಚರ್ಚಿಸಲು ಕಸ್ತೂರಿ ರಂಗನ್ ಸಮಿತಿಯ ವರದಿಯ ವ್ಯಾಪ್ತಿಯ ಪ್ರದೇಶದ ಸಂಸದರುಗಳ ಸಭೆಯೊಂದನ್ನು ೨೦೧೬ರ ಆಗಸ್ಟ್ ೧೧ ರಂದು ಕೇಂದ್ರ ಸರಕಾರ ಕರೆದಿತ್ತು. ಆ ಸಭೆಯಲ್ಲಿ ಅಸ್ಕರ್ ಫರ್ನಾಂಡಿಸ್ ಅವರಲ್ಲದೆ ಭಾರತೀಯ ಜನತಾ ಪಕ್ಷದ ಸಂಸದರುಗಳಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಅನಂತಕುಮಾರ್ ಹೆಗ್ಗಡೆ ಮಾತ್ರ ಭಾಗವಹಿಸಿದ್ದರು. ಪ್ರತಾಪ್ ಸಿಂಹರವರು ಆಗಲೂ ಭಾಗವಹಿಸಿಲ್ಲ.
‘ತಮ್ಮ ಪಕ್ಷ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವುದಿಲ್ಲ’ ಎಂದು ಭರವಸೆಕೊಟ್ಟು ಗೆದ್ದದ್ದರಿಂದ ಕೇಂದ್ರದಲ್ಲಿ ತಮ್ಮ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಕೇಂದ್ರಕ್ಕೆ ಹೋಗಿ ತಮ್ಮ ಪಕ್ಷದ ಚುನಾವಣಾ ಭರವಸೆಯನ್ನು ಪ್ರಧಾನ ಮಂತ್ರಿಗಳಿಗೆ ನೆನಪು ಮಾಡಿಕೊಟ್ಟು ಅದನ್ನು ಅನುಷ್ಠಾನಕ್ಕೆ ತರದಂತೆ ಮಾಡುವುದು ಪ್ರತಾಪ್ ಸಿಂಹರವರ ಕರ್ತವ್ಯವಾಗಿತ್ತು. ಅವರು ತನ್ನ ಕರ್ತವ್ಯವನ್ನು ನೆರವೇರಿಸಲಿಲ್ಲ.
೨೦೧೬ರ ಆಗಸ್ಟ್ನಲ್ಲಿ ಕರೆದ ಸಭೆಯಲ್ಲಿ ಅವರು ಭಾಗವಹಿಸಿ ಕೊಡಗಿನ ಜನರ ಭಾವನೆಗಳು, ತಾವು ಮಾಡಿದ ಭಾಷಣಗಳು ಮತ್ತು ಕೊಟ್ಟ ಭರವಸೆಗಳ ಬಗ್ಗೆ ವಿವರಿಸಿ ಹೇಳಿ ಕೇಂದ್ರ ಸರಕಾರ ವರದಿಯನ್ನು ಅನುಷ್ಠಾನಕ್ಕೆ ತರುವುದನ್ನು ತಡೆಯಲು ಯತ್ನಿಸಬೇಕಿತ್ತು. ಆದರೆ ಅವರು ಸಭೆಗೇ ಹೋಗಲಿಲ್ಲ.
೨೦೧೭ರಲ್ಲಿ ಮತ್ತೆ ಕರೆದ ಸಭೆಯಲ್ಲಿ ಭಾಗವಹಿಸಿ ಮತ್ತೆ ತಮ್ಮ ಪಕ್ಷದ ವಿರೋಧ, ಭರವಸೆಗಳು, ಕೊಡಗಿನ ಜನರ ಭಾವನೆಗಳನ್ನು ವಿವರಿಸಬೇಕಿತ್ತು. ಆ ಸಭೆಯಲ್ಲೂ ಗೈರು ಹಾಜರಾದರು.
ಕಸ್ತೂರಿ ರಂಗನ್ ಸಮಿತಿಯ ವರದಿಯಲ್ಲಿನ ಶಿಫಾರಸ್ಸುಗಳ ಸಾಧಕ ಬಾಧಕಗಳ ಬಗ್ಗೆ ಈ ಸಮಿತಿಯ ವ್ಯಾಪ್ತಿಗೆ ಬರುವ ಪ್ರದೇಶಗಳ ಪ್ರತಿನಿಧಿಗಳಿಗೆ ಮಾತ್ರ ಆಸಕ್ತಿ ಇರಲು ಸಾಧ್ಯವಲ್ಲದೆ ಇತರರಿಗಲ್ಲ, ಆದ್ದರಿಂದ ಸರಕಾರ ಈ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಬೇಕೆಂದರೆ ಈ ವ್ಯಾಪ್ತಿಗೆ ಬರುವ ಕ್ಷೇತ್ರಗಳ ಪ್ರತಿನಿಧಿಗಳನ್ನೇ ನೇಮಿಸಬೇಕಿತ್ತಲ್ಲದೆ ಈ ರೀತಿಯ ಸಮಿತಿಯನ್ನಲ್ಲ.
ಅಲ್ಲದೆ ಮೇಲುದ್ಧರಿಸಿದಂತೆ ‘ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳಿಂದ ಅದರ ವ್ಯಾಪ್ತಿಯಲ್ಲಿ ಬರುವ ಜನತೆಗೆ ತೊಂದರೆಯಾಗದAತೆ’ ಅದನ್ನು ಅನುಷ್ಠಾನಕ್ಕೆ ತರಬೇಕಿದ್ದರೆ ಏನು ಮಾಡಬೇಕೆಂದು ಕೂಲಂಕಷವಾಗಿ ಅಧ್ಯಯನ ಮಾಡಬೇಕಿದ್ದರೆ ಆ ಸಮಿತಿ ಪ್ರತಿಯೊಂದು ಪ್ರದೇಶಕ್ಕೂ ಹೋಗಿ ಮಾಹಿತಿ ತಿಳಿದು ಅತ್ಯಂತ ವಿವರವಾದ ವರದಿ ತಯಾರು ಮಾಡಬೇಕು. ಇದಕ್ಕೆ ಎರಡು ತಿಂಗಳು ಖಂಡಿತಾ ಸಾಲದು. ಹಾಗಾಗಿ ಈ ಸಮಿತಿಯ ವರದಿ ಏನಿರುತ್ತದೆ ಎಂದು ನಾವು ಅಂದಾಜು ಮಾಡಲು ಹೆಚ್ಚು ಚಿಂತಿಸಬೇಕಾದ ಅಗತ್ಯವಿಲ್ಲ.
ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳ ಪರಿಣಾಮಗಳು ಮತ್ತು ಅದರ ವ್ಯಾಪ್ತಿಯಲ್ಲಿ ವಾಸಿಸುವ ಜನರ ಭಾವನೆಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಎಳ್ಳಷ್ಟೂ ಅರಿವಿಲ್ಲ ಅಥವಾ ಜನತೆಯ ಭಾವನೆಗಳಿಗೆ ಬೆಲೆ ಕೊಡಬೇಕೆಂದಿಲ್ಲ ಎನ್ನುವ ಧಾಷ್ಟö್ರ್ಯವಿದೆ ಎಂದು ಈ ಸಮಿತಿಯ ರಚನೆಯ ಮೂಲಕ ನರೇಂದ್ರ ಮೋದಿ ಸರಕಾರ ತೋರಿಸಿಕೊಟ್ಟಿದೆ ಅಥವಾ ಈ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತಂದರೆ ಜನರ ಮೇಲಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮತ್ತು ತಮ್ಮ ಪಕ್ಷ ಜನತೆಗೆ ಕೊಟ್ಟ ಭರವಸೆಗಳ ಬಗ್ಗೆ ನಮ್ಮ ಪ್ರತಿನಿಧಿಗಳು ಕೇಂದ್ರ ಸರಕಾರಕ್ಕೆ ಸಾಕಷ್ಟು ಮನವರಿಕೆ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟವಾಗುತ್ತದೆ.
ಕಸ್ತೂರಿ ರಂಗನ್ ಸಮಿತಿಯ ವರದಿಯ ವಿರುದ್ಧ ನಡೆದ ಹೋರಾಟಗಳ ಸಂದರ್ಭ ಭಾರತೀಯ ಜನತಾ ಪಕ್ಷದ ನಮ್ಮ ಜಿಲ್ಲೆಯ ಮುಖಂಡರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಮತ್ತಿತರರು, ಈ ಹಿಂದಿನ ಮುಖ್ಯಮಂತ್ರಿ ಆಡಿದ ವೀರಾವೇಶದ ಮಾತುಗಳನ್ನು ಆ ಮಹನೀಯರುಗಳು ನೆನಪು ಮಾಡಿಕೊಳ್ಳುವಂತೆ ವಿನಂತಿಸುತ್ತೇನೆ. ಭಾ.ಜ.ಪ.ದ ಮುಖಂಡರುಗಳು ಇಂದು ದಿವ್ಯ ಮೌನಿಗಳಾಗಿದ್ದಾರೆ.
ಕಸ್ತೂರಿ ರಂಗನ್ ಸಮಿತಿಯ ವರದಿಯ ಅನುಷ್ಠಾನವನ್ನು ತಾವು ವಿರೋಧಿಸುವುದಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರೆದಿದ್ದಾರೆ ಎನ್ನುವುದು ಕೇವಲ ವಂಚನೆಯಾಗಿದೆ ಅಥವಾ ಅವರದೇ ಪಕ್ಷದ ಕೇಂದ್ರ ಸರಕಾರ ಅವರ ಅಭಿಪ್ರಾಯವನ್ನು ತಿರಸ್ಕರಿಸಿದೆ.
ಕೇರಳ ಸರಕಾರದ ಪರವಾಗಿ ಮಂಡಿಸಿದ್ದ ವಾದದಲ್ಲಿ ಕೇಳಿದ್ದ ವಿನಾಯಿತಿಯನ್ನು ತಾವು ಒಪ್ಪಿಕೊಂಡಿರುವುದಾಗಿ ಕೇಂದ್ರ ಸರಕಾರ ಲಿಖಿತ ಭರವಸೆಕೊಟ್ಟಿದೆ ಎಂದು ಕೇರಳದ ಲೋಕಸಭಾ ಸದಸ್ಯರು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕ ಸರಕಾರ ಮತ್ತು ಅವರದೇ ಪಕ್ಷದವರ ನಿಲುವನ್ನು ಕಡೆಗಣಿಸಿ ಕೇಂದ್ರ ಸರಕಾರ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಅನುಷ್ಠಾನಕ್ಕೆ ತರುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಕೊಡಗಿನ ಜನತೆ ಈ ಕುರಿತು ಈಗಲಾದರೂ ಜಾಗೃತಿಗೊಂಡು ಕಸ್ತೂರಿ ರಂಗನ್ ವರದಿ ಜಾಗೃತಿಗೊಳಿಸದಂತೆ ಹೋರಾಟಕ್ಕೆ ಇಳಿಯುವಂತೆ ವಿನಂತಿಸುತ್ತೇನೆ. - ಇ.ರ. ದುರ್ಗಾ ಪ್ರಸಾದ್, ವೀರಾಜಪೇಟೆ.