ಗೋಣಿಕೊಪ್ಪಲು, ಜ. ೨೬: ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾಗಿ ಎಸ್.ಟಿ. ಗಿರೀಶ್ ಹಾಗೂ ಮಹಿಳಾ ಅಧ್ಯಕ್ಷರಾಗಿ ಹೀನಾ ನೇಮಕಗೊಂಡಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್‌ನ ಕಾರ್ಮಿಕ ಘಟಕದ ಕಾರ್ಯದರ್ಶಿ ಯಾಗಿ ಅರುವತ್ತೊಕ್ಲುವಿನ ಕೆ.ಜೆ. ಜೋಸಫ್ (ಡಾಡು) ಪೊನ್ನಂಪೇಟೆ ನಗರ ಅಧ್ಯಕ್ಷರಾಗಿ ಕೆ.ಎಂ. ಅಬು ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪಲುವಿನ ಕಾಂಗ್ರೆಸ್ ಕಚೆೆÃರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟುಸ್ವಾಮಿ ಗೌಡ, ಜಿಲ್ಲಾಧ್ಯಕ್ಷ ಗೋವಿಂದರಾಜ್ ದಾಸ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಶಾಜಿ ಅಚ್ಚುತ್ತನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕೊಳೇರ ಭಾರತಿ, ಗೋಣಿಕೊಪ್ಪಲು ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಗಣಪತಿ, ವೀರಾಜಪೇಟೆ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಹೆಚ್.ವಿ. ರಾಮದಾಸ್, ಜಿಲ್ಲಾ ಕಾರ್ಯದರ್ಶಿ ಗಾಯತ್ರಿ ನರಸಿಂಹ, ವೀರಾಜಪೇಟೆ ನಗರ ಅಧ್ಯಕ್ಷೆ ಟಿ.ಎಸ್. ಭಾಗಿರತಿ ಉಪಸ್ಥಿತರಿದ್ದರು.