ಗೋಣಿಕೊಪ್ಪ ವರದಿ, ಜ. ೨೬: ಡಾ. ಶಿವಕುಮಾರ ಸ್ವಾಮಿ ಪುಣ್ಯಸ್ಮರಣೆ ಪ್ರಯುಕ್ತ ವೀರಾಜಪೇಟೆ ತಾಲೂಕು ವೀರಶೈವ-ಲಿಂಗಾಯತ ಮಹಿಳಾ ಸಂಘಟನಾ ವೇದಿಕೆ ವತಿಯಿಂದ ಪಾಲಿಬೆಟ್ಟ ಚೆಷೈರ್‌ಹೋಂ ವಿಶೇಷಚೇತನ ಮಕ್ಕಳ ಶಾಲೆಗೆ ನೀರಿನ ಟ್ಯಾಂಕ್ ಅಳವಡಿಸಲು ಸ್ಟಾö್ಯಂಡ್ ಕೊಡುಗೆಯಾಗಿ ನೀಡಿದರು. ವೇದಿಕೆ ಅಧ್ಯಕ್ಷೆ ಅರ್ಪಿತಾ, ಪ್ರಧಾನ ಕಾರ್ಯದರ್ಶಿ ಶೋಭಾರಾಣಿ, ಸದಸ್ಯೆ ಹೇಮಾ ಹಾಗೂ ಸದಸ್ಯರು ಹಸ್ತಾಂತರ ಮಾಡಿದರು.

ಈ ಸಂದರ್ಭ ವಿಶೇಷ ಶಾಲೆಯ ಅಧ್ಯಕ್ಷೆ ಗೀತಾ ಚೆಂಗಪ್ಪ, ಉಪಾಧ್ಯಕ್ಷೆ ಪುನೀತ ರಾಮಸ್ವಾಮಿ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಮುಖ್ಯಶಿಕ್ಷಕ ಶಿವರಾಜ್ ಇದ್ದರು.