ನಾಪೋಕ್ಲು ಹಳೆತಾಲೂಕು ನಿವಾಸಿ ಅರೆಯಡ ಡಿ. ಸೋಮಪ್ಪ (ಚೋಮುಣಿ-೮೧) ಹೃದಯಾಘಾತದಿಂದ ತಾ. ೨೪ ರಂದು ನಿಧನರಾದರು. ಮೃತರು ಭಗವತಿ ದೇವಳದ ಕಾರ್ಯದರ್ಶಿಯಾಗಿ ೪೯ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದು ವಿ.ಎಸ್.ಎಸ್.ಎನ್. ಬ್ಯಾಂಕ್ ನಿರ್ದೇಶಕರಾಗಿ, ದವಸ ಭಂಡಾರದ ಅಧ್ಯಕ್ಷರಾಗಿ, ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಕಾಂತಿ ಸೋಮಪ್ಪ ಮತ್ತು ಕರ್ನಾಟಕ ಹಾಕಿ ಸಂಸ್ಥೆಯ ಉಪಾಧ್ಯಕ್ಷ ಪವಿನ್ ಪೊನ್ನಣ್ಣ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ನಾಪೋಕ್ಲು ಗ್ರಾಮ ಪಂಚಾಯಿತಿ ಮತ್ತು ಚೆಂಬರ್ ಆಫ್ ಕಾಮರ್ಸ್ ಮನವಿಗೆ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ೨ ತಾಸು ಮುಚ್ಚಿ ಸಂತಾಪ ಸೂಚಿಸಲಾಯಿತು.

ಕಾಂಗ್ರೆಸ್ ಸಂತಾಪ