ಓಮಿಕ್ರಾನ್ ಕೊನೆಯ ರೂಪಾಂತರಿಯಲ್ಲ : ಡಬ್ಲೂö್ಯಎಚ್‌ಒ

ನವದೆಹಲಿ, ಜ. ೨೪: ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರಿ ಓಮಿಕ್ರಾನ್ ಕೊನೆಯ ರೂಪಾಂತರಿಯಲ್ಲ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ರೂಪಾಂತರಿ ವೈರಸ್‌ಗಳು ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯ ತಾಂತ್ರಿಕ ಪ್ರಮುಖ ಮಾರಿಯಾ ವ್ಯಾನ್ ಕೆರ್ಖೋವ್ ಅವರು ಎಚ್ಚರಿಸಿದ್ದಾರೆ. ಪ್ರಪಂಚದಾದ್ಯAತ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆಯು ಜನರು ಲಸಿಕೆಯನ್ನು ಪಡೆದುಕೊಳ್ಳಲು ಮತ್ತು ಮಾಸ್ಕ್ ಬಳಕೆ ಮುಂದುವರೆಸಲು ಹೇಳಿದೆ. ಈ ವೈರಸ್ ಇನ್ನೂ ವಿಕಸನಗೊಳ್ಳುತ್ತಿದೆ, ಬದಲಾಗುತ್ತಿದೆ ಮತ್ತು ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು ಮತ್ತು ನಮ್ಮನ್ನು ನಾವು ಸರಿದೂಗಿಸಿಕೊಳ್ಳಬೇಕಾಗಿದೆ. ನಾವು ಪ್ರಪಂಚದಾದ್ಯAತ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಪರಿವರ್ತನೆ ತರಲು ಪ್ರಯತ್ನಿಸಬೇಕು. ಇದು ಓಮಿಕ್ರಾನ್ ಅಲೆಯಿಂದ ಕೊನೆಗೊಳ್ಳುವುದಿಲ್ಲ ಎಂದು ಹೇಳಿದರು. ಲಸಿಕೆ ಪ್ರಾರಂಭವಾದಾಗಿನಿAದ ಪ್ರಪಂಚದಾದ್ಯAತ ನಿರ್ವಹಿಸಲಾದ ೧೦ ಶತಕೋಟಿ ಡೋಸ್ ಲಸಿಕೆಗಳಲ್ಲಿ ಇನ್ನೂ ಮೂರು ಬಿಲಿಯನ್ ಜನರು ಇನ್ನೂ ಮೊದಲ ಡೋಸ್ ಅನ್ನು ಪಡೆಯಬೇಕಾಗಿದೆ. ಅಂದರೆ ನಮ್ಮಲ್ಲಿ ಕೊರೊನಾ ಸೋಂಕಿಗೆ ಒಳಗಾಗುವ ಜನಸಂಖ್ಯೆ ಯಥೇಚ್ಛವಾಗಿದೆ ಮತ್ತು ಕೆಲವು ದೇಶಗಳು ಮುಂದೆ ಇದ್ದರೂ ಸಹ ನಾವು ಈ ಜಾಗತಿಕ ಸಮಸ್ಯೆಯನ್ನು ಜಾಗತಿಕ ಪರಿಹಾರಗಳೊಂದಿಗೆ ಪರಿಗಣಿಸಬೇಕಾಗಿದೆ ಎಂದಿದ್ದಾರೆ. ಓಮಿಕ್ರಾನ್ ಕೊನೆಯ ರೂಪಾಂತರಿಯಾಗಿದ್ದು, ಅದರ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಎಂಬ ಊಹಾಪೋಗಳು ಎದ್ದಿವೆ. ಆದರೆ ಓಮಿಕ್ರಾನ್ ಸೌಮ್ಯ ಲಕ್ಷಣ ಹೊಂದಿಲ್ಲ. ಇದು ಡೆಲ್ಟಾಕ್ಕಿಂತ ಕಡಿಮೆ ತೀವ್ರವಾಗಿದೆ ಎಂದರು. ಭವಿಷ್ಯದ ರೂಪಾಂತರಿಗಳ ತೀವ್ರತೆ ಕಡಿಮೆಯಾಗಿರುತ್ತವೆ ಎಂದು ತಿಳಿದು ಬಂದಿದೆ. ಆದರೆ ಇನ್ನೂ ಖಚಿತವಾಗಿಲ್ಲ. ಓಮಿಕ್ರಾನ್‌ಗಿಂತಲೂ ಹೆಚ್ಚು ವಿಕಸನಗೊಂಡಿರುವ ಹೆಚ್ಚಿನ ರೂಪಾಂತರಿಗಳು ಹೊರಹೊಮ್ಮುತ್ತವೆ ಎಂಬ ನಿರೀಕ್ಷೆಯಿದೆ. ಅವುಗಳ ತೀವ್ರತೆಯೂ ಕಡಿಮೆಯಾಗಿರುತ್ತದೆ ಎಂಬುದಕ್ಕೂ ಯಾವುದೇ ನಿಖರತೆ ಇಲ್ಲ. ವಿಕಸನಗೊಂಡ ಗುಣಲಕ್ಷಣಗಳು ನಮ್ಮ ಲಸಿಕೆಗಳನ್ನು ನಿಷ್ಪರಿಣಾಮಕಾರಿಯಾಗಿಸಬಹುದು ಎಂದು ಹೇಳಿದರು. ಈ ವೈರಸ್ ನಿಜವಾಗಿಯೂ ತೀವ್ರವಾಗಿ ಹರಡುತ್ತಿದೆ, ಹರಡುವಿಕೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳೊಂದಿಗೆ ಸಮರ್ಪಕವಾಗಿ ಮುನ್ನಡೆಯುವುದು ನಮ್ಮ ಮುಂದಿರುವ ಸವಾಲು. ನಾವು ಬಹಳ ಜಾಗರೂಕರಾಗಿರಲು ಜನರ ಬಳಿ ಮನವಿ ಮಾಡುತ್ತೇವೆ ಎಂದು ಹೇಳಿದರು.

ಲಿವ್-ಇನ್ ರಿಲೇಷನ್ ಶಿಪ್‌ನಲ್ಲಿದ್ದ ಯುವತಿಯ ಸಹೋದರನ ಅಪಹರಣ

ಬೆಂಗಳೂರು, ಜ. ೨೪: ಬೆಂಗಳೂರಿನಲ್ಲಿ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದ ಯುವತಿಯ ಸಹೋದರನನ್ನು ಅಪಹರಿಸಿದ್ದ ವ್ಯಕ್ತಿ ಹಾಗೂ ಇತರ ಐವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಯು ತನ್ನ ಜೊತೆ ಲಿವ್-ಇನ್ ರಿಲೇಷನ್ ಶಿಪ್‌ನಲ್ಲಿದ್ದ ಮಹಿಳೆ ತನ್ನನ್ನು ತೊರೆದ ನಂತರ ಮತ್ತೆ ಸಂಬAಧ ಬೆಳೆಸುವಂತೆ ಮಾಡಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಪ್ರೇಮಿಯನ್ನು ಶ್ರೀನಿವಾಸ್ (೩೨) ಎಂದು ಗುರುತಿಸಲಾಗಿದ್ದು, ಆತನ ಸಹಚರರಾದ ಪ್ರತಾಪ್ (೨೮), ಆಕಾಶ್ (೩೧), ಹುಚ್ಚೇಗೌಡ (೩೪), ಶಿವ(೩೧) ಮತ್ತು ಗಂಗಾಧರ್ (೩೪) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಯು ಫೈನಾನ್ಸ್ ಕಂಪನಿಯ ವಾಹನ ರಿಕವರಿ ತಂಡದಲ್ಲಿ ಕೆಲಸ ಮಾಡುತ್ತಿದ್ದು, ೨೩ ವರ್ಷದ ಮಹಿಳೆಯನ್ನು ಪ್ರೀತಿಸುತ್ತಿದ್ದನು ಮತ್ತು ಮಹಿಳೆ ಸಹ ಆತನನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ನಾಲ್ಕು ತಿಂಗಳ ಕಾಲ ಲಿವ್-ಇನ್ ಸಂಬAಧದ ನಂತರ, ಮಹಿಳೆ ಆರೋಪಿಯೊಂದಿಗೆ ಸಂಬAಧ ಕಡಿದುಕೊಂಡಿದ್ದರು. ಆರೋಪಿ ಮಹಿಳೆಗೆ ಪದೇ ಪದೇ ಕರೆ ಮಾಡಿ ತನ್ನೊಂದಿಗೆ ಸಂಬAಧ ಮುಂದುವರಿಸುವAತೆ ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ಮಹಿಳೆ ಒಪ್ಪದಿದ್ದಾಗ ಆಕೆಯ ಸಹೋದರ ವೆಂಕಟೇಶ್‌ನನ್ನು ಅಪಹರಿಸಿ ತನ್ನೊಂದಿಗೆ ಸಂಬAಧಕ್ಕೆ ಒತ್ತಾಯಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಿಜೆಪಿ ೬೫, ಪಿಎಲ್‌ಸಿ ೩೭, ಸಂಯುಕ್ತ ೧೫ ಸ್ಥಾನಗಳಲ್ಲಿ ಸ್ಪರ್ಧೆ

ನವದೆಹಲಿ, ಜ. ೨೪: ಪಂಜಾಬ್‌ನಲ್ಲಿ ಮತ್ತೆ ಬಿಜೆಪಿ ಮೈತ್ರಿ ಸರ್ಕಾರವನ್ನು ಆಡಳಿತಕ್ಕೆ ತರುವ ಸಂಬAಧ ಕಮಲ ಪಕ್ಷ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಸಿಂಗ್‌ಗಳ ದರ್ಬಾರ್‌ನಲ್ಲಿ ಬಿಜೆಪಿ, ಕ್ಯಾಪ್ಟನ್ ಮತ್ತು ದಿಂಡಾ ಪಕ್ಷದ ನಡುವೆ ಸೀಟು ಹಂಚಿಕೆಯ ಸೂತ್ರ ಇತ್ಯರ್ಥವಾಗಿದೆ. ಪಂಜಾಬ್‌ನಲ್ಲಿ ಬಿಜೆಪಿ ೬೫ ಸ್ಥಾನ, ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ೩೭ ಕ್ಷೇತ್ರ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ Sಂಆ-ಸAಯುಕ್ತ ಪಕ್ಷ ೧೫ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಸೂತ್ರಕ್ಕೆ ಮೈತ್ರಿ ಸದಸ್ಯರು ಓಕೆ ಎಂಬ ಮುದ್ರೆ ಒತ್ತಿದ ಮೇಲೆ ದೆಹಲಿಯಲ್ಲಿ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆಪಿ ನಡ್ಡಾ ಇದನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಸುಖದೇವ್ ದಿಂಡ್ಸಾ ಕೂಡ ಉಪಸ್ಥಿತರಿದ್ದರು. ಈ ಮೈತ್ರಿಕೂಟವು ೧೧೭ ಸ್ಥಾನಗಳ ಪೈಕಿ ೭೧ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಾಳೆಯಿಂದ ಪಂಜಾಬ್‌ನಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದು, ಮೈತ್ರಿಕೂಟವು ಚುನಾವಣಾ ಕಾರ್ಯತಂತ್ರವನ್ನು ಶರವೇಗದಲ್ಲಿ ಅಂತಿಮಗೊಳಿಸುವುದರಲ್ಲಿ ನಿರತವಾಗಿದೆ.

ಜೆಎನ್‌ಯು ವಿದ್ಯಾರ್ಥಿ ವಿರುದ್ಧ ದೇಶದ್ರೋಹ ಪ್ರಕರಣ

ನವದೆಹಲಿ, ಜ. ೨೪: ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ದೆಹಲಿ ಕೋರ್ಟ್ ಆದೇಶ ನೀಡಿದೆ. ಅಲೀಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಹಾಗೂ ಜಾಮಿಯಾ ಏರಿಯಾದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪಕ್ಕೆ ಸಂಬAಧಿಸಿದAತೆ ಕೋರ್ಟ್ ಈ ಆದೇಶವನ್ನು ನೀಡಿದೆ. ಇಮಾಮ್ ವಿರುದ್ಧ ದೇಶದ್ರೋಹದ ಪ್ರಕರಣಗಳ ಜೊತೆಗೆ, ಎರಡು ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮ ಸ್ಥಳ, ರಾಷ್ಟಿçÃಯ ಸಮಗ್ರತೆಗೆ ಧಕ್ಕೆ ಉಂಟು ಮಾಡಿದ, ಸಾರ್ವಜನಿಕ ಕಿಡಿಗೇಡಿತನ ಯುಎಪಿಎ ಗಳ ಆರೋಪದ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಡಿ.೨೦೧೯ ರಲ್ಲಿ ಉಂಟಾದ ಗಲಭೆಗೆ ಮಂದಿಯನ್ನು ಪ್ರಚೋದಿಸಿದ್ದ, ಕೇಂದ್ರ ಸರ್ಕಾರಕ್ಕೆ ನಿಷ್ಠೆ ತೋರದಂತೆ ಜನತೆಯನ್ನು ಪ್ರಚೋದಿಸಿದ್ದ ಆರೋಪಗಳನ್ನು ದೆಹಲಿ ಪೊಲೀಸರು ಇಮಾಮ್ ವಿರುದ್ಧ ಹೊರಿಸಿದ್ದರು.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ ಹಿಂದೂ ಸಂಘಟನೆಗಳು

ನವದೆಹಲಿ, ಜ. ೨೪: ಧರ್ಮ ಸಂಸದ್ ಆಯೋಜನೆ ಮಾಡುವುದನ್ನು ಮತ್ತೊಂದು ಧರ್ಮದ ವಿರುದ್ಧ ಎಂದು ಪರಿಗಣಿಸುವಂತಿಲ್ಲ ಎಂದು ಹಿಂದೂ ಸೇನಾ ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಎಂಬ ಸಂಘಟನೆಗಳು ಹೇಳಿದ್ದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ನವದೆಹಲಿ ಹಾಗೂ ಹರಿದ್ವಾರಗಳಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬAಧಿಸಿದAತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ಇನ್ನಿತರರಿಗೆ ನೊಟೀಸ್ ಜಾರಿಗೊಳಿಸಿತ್ತು. ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿರುವ ಹಿಂದೂ ಸೇನಾ ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಸಂಘಟನೆಗಳು ತಮ್ಮನ್ನೂ ಈ ಪ್ರಕರಣದಲ್ಲಿ ವಾದಿಗಳನ್ನಾಗಿ ಪರಿಗಣಿಸಬೇಕು ಎಂದು ಮನವಿ ಸಲ್ಲಿಸಿವೆ. ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಲಾಗಿದೆ ಈ ಸಂಬAಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿ ಪಿಐಎಲ್ ಸಲ್ಲಿಸಿದ್ದ ಪತ್ರಕರ್ತ ಕುರ್ಬಾನ್ ಅಲಿ, ಪಾಟ್ನ ಹೈಕೋರ್ಟ್ನ ಮಾಜಿ ನ್ಯಾಯಾಧೀಶರು ಹಾಗೂ ಹಿರಿಯ ಅಡ್ವೊಕೇಟ್ ಅಂಜನ ಪ್ರಕಾಶ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ. ಎನ್.ವಿ. ರಮಣ ಜ. ೧೨ ರಂದು ಕೇಂದ್ರ, ಉತ್ತರಾಖಂಡ್ ಹಾಗೂ ದೆಹಲಿ ಪೊಲೀಸರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದರು.