ಗೋಣಿಕೊಪ್ಪಲು ಜ.೨೪: ಪ್ರತಿಷ್ಠಿತ ಅಂರ‍್ರಾಷ್ಟಿçÃಯ ಸಂಸ್ಥೆಯಾದ ಒಸಾಟ್ ಸಂಸ್ಥೆಯು ನಿರ್ಮಿಸಿದ ಶಾಲಾ ಕಟ್ಟಡವನ್ನು ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಲೋಕಾರ್ಪಣೆ ಗೊಳಿಸಿದರು.

ಸಂಸ್ಥೆಯ ೫೧ನೇ ಯೋಜನೆ ಯಾಗಿ ದ.ಕೊಡಗಿನ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಸಜ್ಜಿತ ನಾಲ್ಕು ಕೊಠಡಿಗಳು ಹಾಗೂ ಬಾಲಕಿಯರಿಗೆ ನಾಲ್ಕು ಶೌಚಾಲಯ ನಿರ್ಮಿಸಿರುವ ಸಂಸ್ಥೆ ಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಉತ್ತಮ ರೀತಿಯಲ್ಲಿ ಅವಕಾಶ ಕಲ್ಪಿಸಿದೆ.

ಶಾಲಾ ಕಟ್ಟಡ ನಿರ್ಮಾಣಕ್ಕೆ ೪೦ ಲಕ್ಷ ಹಾಗೂ ಶೌಚಾಲಯ ನಿರ್ಮಾಣಕ್ಕೆ ಆರು ಲಕ್ಷವನ್ನು ಒಸಾಟ್ ಸಂಸ್ಥೆಯು ವಿನಿಯೋಗ ಮಾಡಿದೆ.

ಸುಸಜ್ಜಿತ ಕಟ್ಟಡವನ್ನು ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಸಂಸ್ಥೆಯಾದ ಒಸಾಟ್ ಸಂಸ್ಥೆಯು ಇಷ್ಟು ದೊಡ್ಡ ಪ್ರಮಾಣದ ಹಣವನ್ನು ವಿನಿಯೋಗಿಸಿ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಿದೆ. ಇದರ ಪ್ರಯೋಗಗಳನ್ನು ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು.

ಒಸಾಟ್ ಸಂಸ್ಥೆಯು ಇದೀಗ ಕೊಡಗಿನ ಗ್ರಾಮೀಣ ಭಾಗದಲ್ಲಿ ತನ್ನ ೫೧ ನೇ ಯೋಜನೆ ಪೂರ್ಣಗೊಳಿಸಿದೆ ಮುಂದೆ ಇನ್ನಷ್ಟು ಸೇವೆ ಕೊಡಗಿನ ಗ್ರಾಮೀಣ ಭಾಗಕ್ಕೆ ನೀಡುವಂತಾಗಲಿ ಎಂದು ಆಶಿಸಿದರು.

ಮಕ್ಕಳ ಉತ್ತಮ ಕಲಿಕೆಗಾಗಿ ಗುಣಮಟ್ಟದ ಪೀಠೋಪಕರಣಗಳನ್ನು ಈ ಭಾಗದ ದಾನಿಗಳು ನೀಡಿದ್ದಾರೆ. ಒಸಾಟ್ ಒಂದು ಶಾಲೆಯ ಮೂಲಕ ಒಂದು ಪೂರಕ ಸಮುದಾಯವನ್ನು ಗ್ರಾಮಗಳಲ್ಲಿ ನಿರ್ಮಿಸುವಲ್ಲಿ ಯಶಸ್ಸನ್ನು ಕಾಣುತ್ತಿದೆ. ಒಸಾಟ್ ಕಾರ್ಯ ಹಲವಾರು ಗ್ರಾಮಗಳಲ್ಲಿ ಅನಕ್ಷರತೆ, ಬಾಲಕಾರ್ಮಿಕ ಸಮಸ್ಯೆಗೆ ಪರಿಹಾರ ಒದಗಿಸಿ, ಬಡ ಪೋಷಕರ ಅಸಹಾಯಕತೆಯನ್ನು ನಿವಾರಣೆ ಮಾಡುವಲ್ಲಿ ದಾಪುಗಾಲು ಇಟ್ಟಿದೆ.

ಸದ್ಯದ ಹಾಗೂ ಬದಲಾದ ಸನ್ನಿವೇಶದಲ್ಲಿ ನಗರ ಪ್ರದೇಶದಲ್ಲಿ ಶಿಕ್ಷಣ ಪದ್ಧತಿಯು ಸಮೂಹ/ಡಿಜಿಟಲ್ ಮಾದ್ಯಮದ ಕಡೆಗೆ ಹೊರಳುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗು ತ್ತಿದ್ದಾರೆ.

(ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಒಸಾಟ್ ಸಂಸ್ಥೆಯು ಡಿಜಟಲೀಕರಣ ಮೂಲ ಸೌಕರ್ಯ ಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊರಕಿಸಿಕೊಡಲು ಕಾರ್ಯ ಪ್ರವೃತ್ತ ವಾಗಿದೆ. ಅಲ್ಲದೆ ಯೋಜನೆಗಳನ್ನು ರೂಪಿಸಿಕೊಂಡಿದೆ.

ಒಸಾಟ್ ಲಾಭ ರಹಿತ ಸಂಸ್ಥೆಯಾಗಿದ್ದು, ಭಾರತದ ಗ್ರಾಮೀಣ ಭಾಗದಲ್ಲಿರುವ ತೀರ ಹಳೆಯದಾದ, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಗುರುತಿಸಿ ಸುರಕ್ಷಿತ ಹಾಗೂ ಸುಭದ್ರ ಕಟ್ಟಡಗಳನ್ನು ನಿರ್ಮಿಸಿ ಕೊಡುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಚೆಪ್ಪುಡೀರ ಅರುಣ್ ಮಾಚಯ್ಯ, ಒಸಾಟ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಷ್ಟವನ್ನು ಅರಿತು ಸಂಸ್ಥೆಯು ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸಿ, ಮಕ್ಕಳ ಕಲಿಕೆಗೆ ಕಟ್ಟಡ ನಿರ್ಮಾಣ ಮಾಡಿರುವುದನ್ನು ಪ್ರಶಂಸಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ವೇದಾಮೂರ್ತಿ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ ಶೈಲ ಬಿಳಗಿ, ಮುಖ್ಯ ಶಿಕ್ಷಕಿ ಶೋಪಿಯಾ, ಗ್ರಾ.ಪಂ. ಅಧ್ಯಕೆÀ್ಷ ಮೀನಾ, ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಕಟ್ಟಡ ನಿರ್ಮಾಣ ಸಮಿತಿಯ ಪದಾಧಿಕಾರಿ ಗಳು, ಶಿಕ್ಷಕ ವೃಂದ, ದಾನಿಗಳು ಸೇರಿದಂತೆ ಪ್ರಮುಖರಾದ ಕಾಳಪಂಡ ಟಿಪ್ಪು ಬಿದ್ದಪ್ಪ, ಸಣ್ಣುವಂಡ ವಿಶ್ವನಾಥ್, ಚಿಣ್ಣಪ್ಪ, ಪುಚ್ಚಿಮಾಡ ರಾಯ್ ಮಾದಪ್ಪ, ಸಣ್ಣುವಂಡ ದಿಲೀಪ್ ಸೋಮಣ್ಣ, ಉಪಸ್ಥಿತರಿದ್ದರು. ಈ ಸಂದರ್ಭ ಕೆನರಾ ಬ್ಯಾಂಕ್ ವತಿಯಿಂದ ಮೂರು ಪುಸ್ತಕದ ಕಪಾಟು ನೀಡಲಾಯಿತು.

ಉತ್ತಮ ಸೇವೆ ನೀಡಿದ ಒಸಾಟ್ ಸಂಸ್ಥೆಯ ಪ್ರತಿನಿಧಿಗಳಾದ ನಾಗೇಶ್,ಶ್ರಿಷಾ ರವರನ್ನು ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಬಿಇಒ ಶ್ರೀಶೈಲ ಬಿಳಗಿ ಹಾಗೂ ಇತರ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಪ್ರಮುಖರಾದ ಆಪಟ್ಟೀರ ಟಾಟು ಮೊಣ್ಣಪ್ಪ ಸರ್ವರನ್ನು ಸ್ವಾಗತಿಸಿದರು.ಶಿಕ್ಷಕಿ ರಾಗಿಣಿ ನಿರೂಪಿಸಿದರು, ಟಾಟು ಮೊಣ್ಣಪ್ಪ ಸ್ವಾಗತಿಸಿ, ವಂದಿಸಿದರು.

- ಹೆಚ್.ಕೆ.ಜಗದೀಶ್