ಕಣಿವೆ, ಜ ೨೪ : ಕೊರೋನಾ ಮೂರನೇ ಅಲೆಯ ಪರಿಣಾಮದಿಂದಾಗಿ ಈಗ ಎಲ್ಲಿ ನೋಡಿದರಲ್ಲಿ ಜನ ಸಂಕುಲದಲ್ಲಿ ಶೀತ,ನೆಗಡಿ, ಕೆಮ್ಮು ಕಂಡು ಬರುತ್ತಿದೆ. ಬದಲಾದ ಹವಾಮಾನದಿಂದಾಗಿ ಚಳಿಯ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ ಸಂಜೆಗಿAತ ಬೆಳಗ್ಗಿನ ವೇಳೆ ಬಹಳಷ್ಟು ಮಂದಿ ಬೆಚ್ಚಗಿನ ಹಾಸಿಗೆಯಲ್ಲೇ ಬೆಚ್ಚನೆ ಮಲಗಿ ಸೂರ್ಯರಶ್ಮಿಗೆ ಮುಖ ಹಾಗೂ ಮೈಯೊಡ್ಡಲು ಕಾಯುತ್ತಿರುತ್ತಾರೆ.
ಈ ಬಾರಿಯ ಚಳಿಗಾಲದ ಆರಂಭವನ್ನು ಲೆಕ್ಕಿಸದೇ ಪ್ರತಾಪ ತೋರಿದ ವರುಣನಿಂದಾಗಿ ಆರಂಭದ ಚಳಿಗಾಲ ಹೋಗಿ ಮಳೆಗಾಲದಂತೆ ಭಾಸವಾಗುತ್ತಿತ್ತು. ಅಂದರೆ ಚಳಿಯೇ ಇರಲಿಲ್ಲ. ಈಗ ಹಿಂದಿನ ಅನೇಕ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಚಳಿ ಜಾಸ್ತಿಯಾಗಿದೆ. ಹಾಗಾಗಿ ವಾತಾವರಣದ ವ್ಯತಿರಿಕ್ತ ಬದಲಾವಣೆಯಿಂದಾಗಿ ಬಹುತೇಕ ಮಂದಿಯ ಮೂಗು ಜಿನುಗುತ್ತಿದೆ. ಗಂಟಲು ಕೆರೆಯುತ್ತಿದೆ. ಹಾಗಾಗಿ ಇದು ಕೆಲವರಲ್ಲಿ ಕೆಮ್ಮಾಗಿ ಪರಿವರ್ತಿತವಾಗುತ್ತಿದೆ. ಇನ್ನು ಕೆಲವರಿಗೆ ಜ್ವರವೂ ಬಾಧಿಸುತ್ತಿದೆ.
ಸಧ್ಯ ಹೆಚ್ಚಿನ ಜನರು ಯಾರೂ ಕೂಡ ಐಸೋಲೇಟ್ ಆಗುತ್ತಿಲ್ಲ. ಅಂತೆಯೇ ಯಾರಲ್ಲೂ ಇದು ದುಷ್ಪರಿಣಾಮ ಬೀರುತ್ತಿಲ್ಲ. ಇದೇ ಆರೋಗ್ಯ ಪರಿಸ್ಥಿತಿ ಈ ಹಿಂದಿನ ಎರಡೂ ಅಲೆಗಳ ಅವಧಿಯಲ್ಲಿ ಇದ್ದಿದ್ದಲ್ಲಿ ಊರಿಂದ ಊರನ್ನೇ ಊರಿನ ಜನರನ್ನೇ ಸಾಮೂಹಿಕವಾಗಿ ಕ್ವಾರಂಟೈನ್ ಮಾಡಬೇಕಾದ ಅಪಾಯದ ಸ್ಥಿತಿ ಎದುರಾಗುತ್ತಿತ್ತು.
ಅಂದರೆ ಅಂದು ದೇಶದಲ್ಲಿ ಆರೋಗ್ಯ ಸ್ಥಿತಿಯೂ ಅಷ್ಟಾಗಿ ಸುಧಾರಿಸದೇ ಇದ್ದಾಗ ಮತ್ತು ಆಕ್ಸಿಜನ್ ಕಿಟ್ ಗಳ ಕೊರತೆ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಅಷ್ಟೇನು ಸುಧಾರಣೆ ಕಾಣದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಹಳಷ್ಟು ಮಂದಿ ರೋಗಕ್ಕೆ ಹೆದರಿಯೇ ಅರ್ಧ ಸಾವನ್ನಪ್ಪಿದ್ದರು. ಆದರೆ ಈಗ ಆರೋಗ್ಯ ಪರಿಸ್ಥಿತಿ ಸಂಪೂರ್ಣ ಸುಧಾರಿಸಿದೆ. ದೇಶವ್ಯಾಪಿ ಲಸಿಕಾಕರಣ ಬೃಹತ್ ಆಂದೋಲನದ ರೂಪು ತಳೆದ ಕಾರಣ ಎರಡೂ ಲಸಿಕೆ ಹಾಕಿಸಿಕೊಂಡವರಲ್ಲಿ ಈಗ ಯಾವುದೇ ದುಷ್ಪರಿಣಾಮ ಬೀರುತ್ತಿಲ್ಲ.
ಪೊಲೀಸರಿಗೆ ಹೆದರಿ ಮಾಸ್ಕ್ ಅಳವಡಿಕೆ: ಆದಾಗ್ಯೂ ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತಗಳು ಜನರಲ್ಲಿ ಎಷ್ಟೆಲ್ಲಾ ಆರೋಗ್ಯ ಜಾಗೃತಿ ಮೂಡಿಸಿದರೂ ಕೂಡ ಕ್ಯಾರೇ ಅನ್ನದ ಜನರು ಕೇವಲ ಪೊಲೀಸರ ಲಾಠಿಗೆ ಹೆದರಿ ಮಾಸ್ಕ್ ಹಾಕುತ್ತಿದ್ದಾರೆ. ಇನ್ನೂ ಹಲವರು ಮಾಸ್ಕ್ ಗಳನ್ನು ಕುತ್ತಿಗೆಗೆ ಸಿಕ್ಕಿಸಿಕೊಂಡು ಓಡಾಡುತ್ತಾರೆ.
ರೋಗಿಗಳಿಂದ ತುಂಬಿ ಹೋದ ಆಸ್ಪತ್ರೆಗಳು
ಸಾಮಾನ್ಯ ರೋಗ ಲಕ್ಷಣವಾದ ಶೀತ, ನೆಗಡಿ ಹಾಗೂ ಕೆಮ್ಮಿನ ಕಾರಣಕ್ಕೆ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ಧಾವಿಸುವ ಮಂದಿ ಒಬ್ಬರಿಗೊಬ್ಬರು ಅಂಟಿಕೊAಡು ನಿಲ್ಲುತ್ತಿದ್ದು ಹೆಚ್ಚು ಅನಾರೋಗ್ಯ ಸಮಸ್ಯೆ ಇರುವ ಮಂದಿಯಿAದ ಕಡಿಮೆ ಸಮಸ್ಯೆ ಇರುವವರಿಗೆ ಹರಡುತ್ತಿದೆ. ಆದರೂ ಜನ ನೂಕು ನುಗ್ಗಲಿನಲ್ಲಿ ನಿಂತು ವೈದ್ಯರನ್ನು ಭೇಟಿ ಮಾಡಿ ಗುಳಿಗೆಗಳನ್ನು ಪಡೆಯುವುದು ಸಾಮಾನ್ಯವಾಗಿದೆ.
- ಕೆ.ಎಸ್. ಮೂರ್ತಿ