ಗೋಣಿಕೊಪ್ಪಲು, ಜ. ೨೪: ದ. ಕೊಡಗಿನ ಕೆ. ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ಗಿರಿಜನರು ವಾಸವಿದ್ದ ೧೮ ಎಕರೆ ಭೂಮಿಯನ್ನು ಅಲ್ಲಿನ ಕೆಲವರು ವಶಪಡಿಸಿಕೊಂಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಗಂಭೀರ ಆರೋಪ ಮಾಡಿದೆ.
ಇಲ್ಲಿನ ಆದಿವಾಸಿಗಳು ಇಲ್ಲಿಯ ತನಕ ಮನೆಯನ್ನು ನಿರ್ಮಿಸಿಕೊಂಡು ಸರ್ಕಾರದ ಪ್ರಯೋಜನ ಪಡೆದುಕೊಂಡು ಜೀವನ ಸಾಗಿಸುತ್ತಿದ್ದರು. ಇವರನ್ನು ಒತ್ತಾಯ ಪೂರ್ವಕವಾಗಿ ಇಲ್ಲಿನ ಭೂಮಾಲೀಕರು ಒಕ್ಕಲೆಬ್ಬಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ ಗಂಭೀರ ಆರೋಪ ಮಾಡಿದ್ದಾರೆ.
ಗೋಣಿಕೊಪ್ಪಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ಸರ್ಕಾರ ಆದಿವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟು ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಈ ಜಾಗವನ್ನು ಸರ್ವೆ ಕಾರ್ಯ ನಡೆಸಲು ತಾಲೂಕು ತಹಶೀಲ್ದಾರ್ ಕಳೆದ ಅಕ್ಟೋಬರ್ ತಿಂಗಳಲ್ಲಿ ಆದೇಶ ಮಾಡಿದ್ದರೂ ಇಲ್ಲಿಯ ತನಕ ಸರ್ವೆ ನಡೆದಿಲ್ಲ, ಕೂಡಲೇ ಸರ್ವೆ ಕಾರ್ಯ ನಡೆಸಿ ನೈಜ ಗಿರಿಜನರಿಗೆ ನೀಡುವಂತೆ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಬೆಳ್ಳೂರು ಮಾತನಾಡಿ, ಹೈಸೊಡ್ಲೂರು ಭೂಮಿ ಹೋರಾಟಕ್ಕೆ ಸಂಬAಧಿಸಿದAತೆ ಗಣರಾಜ್ಯೋತ್ಸವ ದಿನದಂದು ಕೋವಿಡ್ ನಿಯಮದಂತೆ ಹೋರಾಟ ಮಾಡಲಾಗುವುದು. ಹೈಸೊಡ್ಲೂರು ಬೇಲಿ ವಿವಾದಕ್ಕೆ ಸಂಬAಧಿಸಿದAತೆ ದಾಖಲಾಗಿರುವ ಮೊಕದ್ದಮೆ ವಿಚಾರದಲ್ಲಿ ದಲಿತ ಸಂಘರ್ಷ ಸಮಿತಿಯ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟ ಪಡಿಸಿದ ಇವರು,ಈ ಪ್ರಕರಣಕ್ಕೆ ದಲಿತ ಮುಖಂಡರನ್ನು ಬಲಿಪಶು ಮಾಡುವ ಆಗತ್ಯವಿಲ್ಲ, ನಮ್ಮ ನ್ಯಾಯಯುತ ಬೇಡಿಕೆಯನ್ನು ಹೋರಾಟ ಮೂಲಕ ಪಡೆಯುತ್ತೇವೆ, ಯಾರ ವಿರುದ್ಧ ನಮ್ಮ ಹೋರಾಟವಲ್ಲ, ಸರ್ಕಾರದ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಟಿ.ಎನ್.ಗೋವಿಂದಪ್ಪ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.