ನಾಪೋಕ್ಲು, ಜ. ೨೪ : ಕೋವಿಡ್ ೧೯ ನಿಯಂತ್ರಿಸಲು ಟಾಸ್ಕ್ ಫೋರ್ಸ್ ಸಮಿತಿಯು ಕಠಿಣ ಕ್ರಮಕೈಗೊಂಡಿದ್ದು, ಮಾಸ್ಕ್ ಹಾಕದ ವ್ಯಾಪಾರಿಗಳಿಗೆ ಮತ್ತು ಕಾರ್ಮಿಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಮ್ಮದ್ ಖುರೇಶಿ ನೇತೃತ್ವದ ತಂಡ ಮಾರುಕಟ್ಟೆಯಲ್ಲಿ ಜನ ಜಂಗುಳಿಯನ್ನು ನಿಯಂತ್ರಿಸುವುದು ಕಂಡು ಬಂತು.
ಅದರಂತೆ ನಗರದಲ್ಲಿ ಪೊಲೀಸರು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು. ರೋಗ ನಿಯಂತ್ರಣದ ಬಗ್ಗೆ ಧ್ವನಿ ವರ್ಧಕದ ಮೂಲಕ ರೋಗದ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಸುತ್ತಿದ್ದರು. ಅಲ್ಲದೆ ನಗರಕ್ಕೆ ಬರುವವರು ಕುಟುಂಬ ಸಮೇತ ಬರಬಾರದೆಂದು ಟಾಸ್ಕ್ ಪೋರ್ಸ್ ಸಭೆಯಲ್ಲಿ ತೀರ್ಮಾನಿಸಿದ್ದರು. ಜನರು ಗುಂಪು ಗುಂಪಾಗಿ ಸಂತೆಗೆ ಹೋಗುತ್ತಿದ್ದು ಇದನ್ನು ನಿಯಂತ್ರಿಸಲು ಮುಂದೆ ಕ್ರಮಕೈಗೊಳ್ಳುತ್ತೇವೆಂದು ಉಪಾಧ್ಯಕ್ಷ ಖುರೇಶಿ ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯಿತಿಯ ಸದಸ್ಯ, ಕಂಗಾAಡ ಶಶಿಮಂದಣ್ಣ, ಕೋಟೇರ ನೀಲಮ್ಮ, ಕಾರ್ಯದರ್ಶಿ ನಂದಿನಿ, ಸಿಬ್ಬಂದಿ ಶಲ್ಲಿ, ಮತ್ತು ಪೊಲೀಸ್ ಇಲಾಖೆಯವರು ಇದ್ದರು.