ಮದೆನಾಡು, ಜ. ೨೪ : ತಮಿಳುನಾಡಿನಿಂದ ಮಂಗಳೂರಿಗೆ ಬೆಂಕಿಪೊಟ್ಟಣಗಳನ್ನು ಹೊತ್ತು ಸಾಗುತ್ತಿದ್ದ ಲಾರಿ (ಖಿಓ-೨೪ ಂಖ -೨೧೨೫) ಯು ೨ನೇ ಮೊಣ್ಣಂಗೇರಿ ಬಳಿಯ ತಿರುವಿನಲ್ಲಿ ಇಂದು ಮುಂಜಾನೆ ಸುಮಾರು ೫ ಗಂಟೆಗೆ ಮಗುಚಿಕೊಂಡಿದ್ದು ಚಾಲಕ ಅವಿನಾಶ್ ಹಾಗೂ ಕ್ಲೀನರ್ ಮಂಜು ಅವರುಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.